Home / Breaking News / ಬೈಲಹೊಂಗಲದಲ್ಲಿ ಭಯಾನಕ ಮಾರಾಮಾರಿ…!!

ಬೈಲಹೊಂಗಲದಲ್ಲಿ ಭಯಾನಕ ಮಾರಾಮಾರಿ…!!

ಬೆಳಗಾವಿ-ಜಮೀನು ವಿವಾದ ಎರಡು ಕುಟುಂಬಗಳ ಮಧ್ಯೆ ನಡೆದಿರುವ ಹೊಡೆದಾಟದ ದೃಶ್ಯಗಳನ್ನು ನೋಡಿದ್ರೆ ಮೈ ಝುಮ್ ಎನ್ಬುತ್ತೆ ಮಾರಾಮಾರಿಯ ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಬೈಲಹೊಂಗಲ ತಾಲ್ಲೂಕಿನಭಾವಿಹಾಳದಲ್ಲಿ ಎರಡು ಕುಟುಂಬಗಳ ಮಧ್ಯೆ ಹೊಡೆದಾಟ‌ ನಡೆದಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ಎರಡು ಕುಟುಂಬಗಳು
ಕಟ್ಟಿಗೆಗಳಿಂದ ಪರಸ್ಪರ ಹೊಡೆದಾಡಿಕೊಳ್ಳುವ ದೃಶ್ಯ ವೈರಲ್ ಆಗಿದ್ದು,ಭಯಾನಕ ಹೊಡೆದಾಟ ನೋಡಿದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಘಟನೆ ನಡೆದಿದ್ದು ಮೇ 23ರಂದು ಆದ್ರೆ ತಡವಾಗಿ ಬೆಳಕಿಗೆ.ಬಂದಿದೆ.ಮಹಾರುದ್ರಪ್ಪ ಕುಂಬಾರ, ಶಂಕರೆಪ್ಪ ಕುಂಬಾರ ಕುಟುಂಬಗಳ ಮಧ್ಯೆ ಜಮೀನು ವಿವಾದ ನಡೆದಿತ್ತು ಈ ವಿವಾದದ ಕುರಿತುಕೋರ್ಟ್ ಮೆಟ್ಟಿಲೇರಿದ್ದ ಆರೋಪಿ ಶಂಕರೆಪ್ಪ ಕುಂಬಾರ.

ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಕಡಿದಿದ್ದ ಆರೋಪ‌.ಕಡಿದ ಸಾಗುವಾನಿ ಮರಗಳನ್ನು ಒಯ್ಯಲು ಬಂದಾಗ ಗಲಾಟೆಯಾಗಿದೆ. ಎರಡು ಕುಟುಂಬಗಳ ಮಧ್ಯೆ ತೀವ್ರ ವಾಗ್ವಾದ, ಹೊಡೆದಾಟ ನಡೆದಿದೆ.ಈ ಹೊಡೆದಾಟದಲ್ಲಿ
ನಾಲ್ವರಿಗೆ ಗಾಯಗಳಾಗಿವೆ. ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Check Also

ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆ ಫಸ್ಟ್ ಮೀಟೀಂಗ್..!!

ಬೆಳಗಾವಿ- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ,ಬೆಳಗಾವಿ ಜಿಲ್ಲೆಯಿಂದ ಇಬ್ಬರು ಮಂತ್ರಿಗಳಾಗಿದ್ದಾರೆ.ಈ ಇಬ್ವರು ಮಂತ್ರಿಗಳು ನಾಳೆ ಮಂಗಳವಾರ ಬೆಳಗಾವಿಯ ಸುವರ್ಣ …

Leave a Reply

Your email address will not be published. Required fields are marked *