Home / Breaking News / ಹೆಬ್ಬಾಳಕರ್ ಹೆಸರು ಕ್ಲಿಯರ್, ಸಂಜೆ ಹೊತ್ತಿಗೆ ಡಿಕ್ಲೇರ್..!!

ಹೆಬ್ಬಾಳಕರ್ ಹೆಸರು ಕ್ಲಿಯರ್, ಸಂಜೆ ಹೊತ್ತಿಗೆ ಡಿಕ್ಲೇರ್..!!

ಬೆಳಗಾವಿ- ಬೆಳಗಾವಿ ಜಿಲ್ಲೆಯಿಂದ ಮೊದಲ ಪಟ್ಟಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಸಚಿವರಾದ ಬಳಿಕ ಈ ಜಿಲ್ಲೆಯಿಂದ ಮಂತ್ರಿಯಾಗೋದು ಇಬ್ಬರೋ ? ಮೂವರೋ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಲೇ ಇತ್ತು ಆದ್ರೆ ಇಂದು ಸಂಜೆ ಹೊತ್ತಿಗೆ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ,ಎರಡು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನಾತ್ಮಕ ಸೇವೆ ಮಾಡಿದ್ದಾರೆ.ಜೊತೆಗೆ ಪ್ರಬಲ ಪಂಚಮಸಾಲಿ ಸಮಾಜಕ್ಕೆ ಸೇರಿದವರಾಗಿದ್ದು ಸಮಾಜದ ಹೋರಾಟದಲ್ಲೂ ಸಕ್ರೀಯವಾಗಿದ್ದಾರೆ.ಇದರ ಜೊತೆಗೆ ಅವರು ಪ್ರಭಾವಿ ಕಾಂಗ್ರೆಸ್ ನಾಯಕಿಯಾಗಿದ್ದು ಎರಡನೇಯ ಪಟ್ಟಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಹೆಸರು ಗಟ್ಟಿಯಾಗಿದೆ.ಹೀಗಾಗಿ ಈ ಬಾರಿ ಲಕ್ಷ್ಮೀ ಹೆಬ್ಬಾಳಕರ ಮಿನಿಸ್ಟರ್ ಆಗೋದು ನಕ್ಕಿ ಈ ವಿಚಾರದಲ್ಲಿ ಅನುಮಾನವೇ ಇಲ್ಲ.

ಬೆಳಗಾವಿ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ಜಿಲ್ಲೆ 18 ರಲ್ಲಿ 11 ರಲ್ಲಿ ಗೆದ್ದಿರುವ ಕಾಂಗ್ರೆಸ್ ಬಿಜೆಪಿಯ ಭದ್ರಕೋಟೆಯನ್ನು ವಶಪಡಿಸಿಕೊಂಡಿದೆ.ದೊಡ್ಡ ಜಿಲ್ಲೆಗೆ ಮೂರು ಮಂತ್ರಿ ಸ್ಥಾನ ಕೊಡಬೇಕು ಎಂದು ಕಾಂಗ್ರೆಸ್ ವರಿಷ್ಠ ನಾಯಕರು ಮನಸ್ಸು ಮಾಡಿದ್ರೆ ಮಾತ್ರ ಲಕ್ಷ್ಮೀ ಹೆಬ್ಬಾಳಕರ ಜೊತೆಗೆ ಲಕ್ಷ್ಮಣ ಸವದಿಯವರೂ ಮಂತ್ರಿ ಆಗ್ತಾರೆ ಎಂದು ಹೇಳಲಾಗುತ್ತಿದೆ.

ದೆಹಲಿಯಿಂದ ಅಂತ,ಕಂತೆಗಳ ಸುದ್ದಿಗಳು ಬರುತ್ತಿವೆ.ಬೆಳಗಾವಿ ಜಿಲ್ಲೆಯ ಕೆಲವು ಜನ ಶಾಸಕರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಮಂತ್ರಿ ಮಾಡುವಂತೆ ಶಿಫಾರಸ್ಸು ಮಾಡಿ ಬಂದಿದ್ದಾರೆ.ಲಕ್ಷ್ಮಣ ಸವದಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಇಬ್ಬರೂ ಸಹ ಈಗಲೂ ದೆಹಲಿಯಲ್ಲಿದ್ದು ಎಲ್ಲ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದಾರೆ. ಪಟ್ಟಿ ಬಿಡುಗಡೆ ಆದ ತಕ್ಷಣ ದೆಹಲಿಯಲ್ಲಿ ಇರುವ ಎಲ್ಲ ಕಾಂಗ್ರೆಸ್ ನಾಯಕರು ಬೆಂಗಳೂರು ವಿಮಾನ ಹತ್ತುತ್ತಾರೆ ಎಂದು ತಿಳಿದು ಬಂದಿದೆ.

ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರುವ ಸಂಧರ್ಭದಲ್ಲಿ ಬೇಷರತ್ತಾಗಿ ಸೇರ್ತಾ ಇದ್ದೇನೆ .ಅಂತಾ ಹೇಳಿದ್ರು,ಆದ್ರೆ ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರುವಾಗ ಎಲ್ಲರೂ ಇದನ್ನೇ ಹೇಳ್ತಾರೆ. ಡಿ.ಕೆ ಶಿವಕುಮಾರ್ ಅವರು ಲಕ್ಷ್ಮಣ ಸವದಿ ಅವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ಕರೆತರಲು ವಿಶೇಷ ವಿಮಾನ ಕಳುಹಿಸಿದಂತೆ ಸವದಿ ಅವರನ್ನು ಮಂತ್ರಿ ಮಾಡಲು ಡಿ.ಕೆ ಶಿವಕುಮಾರ್ ವಿಶೇಷ ಆಸಕ್ತಿ ತೋರಿಸಬಹುದೇ ಎನ್ನುವದು ಅತ್ಯಂತ ಕುತೂಹಲಕಾರಿಯಾಗಿದ್ದು. ಒಟ್ಟಾರೆ ಎರಡನೇಯ ಪಟ್ಡಿಯಲ್ಲಿ ಯಾರ ಹೆಸರು ಪ್ರಕಟವಾಗಬಹುದು,ಮಂತ್ರಿ ಸ್ಥಾನದಿಂದ ಯಾರ ಹೆಸರು ವಾಶ್ ಔಟ್ ಆಗಬಹುದು ಅನ್ನೋದನ್ನು ಇಂದು ಸಂಜೆಯವರೆಗೆ ಕಾಯಲೇಬೇಕು.ನಾಳೆ ನಡೆಯಲಿರುವ ಪ್ರಮಾಣ ವಚಣ ಕಾರ್ಯಕ್ರಮ ನಡೆಯುವವರೆಗೂ ಏನೆಲ್ಲ ಅದಲ್ ಬದಲ್ ಆಗುತ್ತೆ,ಯಾರ ಹೆಸರು ಕೈಂಚಿ ಕದಲ್ ಆಗುತ್ತೆ ಅನ್ನುವದನ್ನು ಕಾದು ನೋಡಬೇಕಾಗಿದೆ.

Check Also

ಸಿಂಗಲ್ ಲವ್ ಡಬಲ್ ದೋಖಾ….ಕಿತ್ತೂರಿನಲ್ಲಿ ಕಿತ್ತಾಟ…!!

ಬೆಳಗಾವಿ- ಪಕ್ಕದ ಮನೆ ಹುಡುಗಿಯ ಜೊತೆ ಲವ್ ಮಾಡಿ, ಕಳೆದ ಆರು ವರ್ಷಗಳಿಂದ ಸಂಬಂಧ ಬೆಳೆಸಿಕೊಂಡಿದ್ದ ಆ ಯುವಕ ಲವ್ …

Leave a Reply

Your email address will not be published. Required fields are marked *