ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಸಿಪಿಐ,ಎಸಿಪಿ ಯಾಗಿ ಖಾಕಿ ಖದರ್ ತೋರಿಸಿದ ನಾರಾಯಣ ಭರಮಣಿ ಅವರಿಗೆ ಪ್ರಮೋಶನ್ ಸಿಕ್ಕಿದ್ದು ಅವರು ಅಡಿಶ್ನಲ್ SP ಯಾಗಿ ಬಡ್ತಿ ಹೊಂದಿದ್ದಾರೆ.
ಬೆಳಗಾವಿಯ ಮಾರ್ಕೆಟ್ ಎಸಿಪಿ ನಾರಾಯಣ ಭರಮಣಿ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಕರ್ತವ್ಯ ನಿಭಾಯಿಸಿದ ಒಟ್ಟು ಮೂರು ಜನ ಪೋಲೀಸ್ ಅಧಿಕಾರಿಗಳಿಗೆ ಪ್ರಮೋಶನ್ ಸಿಕ್ಕಿದೆ. ನಾರಾಯಣ ಭರಮಣಿ, ರಾಮನಗೌಡ ಹಟ್ಟಿ ಮತ್ತು ಮಹಾಂತೇಶ್ವರ್ ಜಿದ್ದಿ ಅವರು ಅಡಿಶ್ನಲ್ ಎಸ್ಪಿ ಯಾಗಿ ಬಡ್ತಿ ಹೊಂದಿದ್ದಾರೆ.
ಎಸಿಪಿ ನಾರಾಯಣ ಭರಮಣಿ ಅವರು ಧಾರವಾಡ ಜಿಲ್ಲೆಯ ಅಡಿಶ್ನಲ್ ಎಸ್ಪಿ,ಮಹಾಂತೇಶ್ವರ್ ಜಿದ್ದಿ ಅವರು ಬಾಗಲಕೋಟೆ ಅಡಿಶ್ನಲ್ ಎಸ್ಪಿ,ರಾಮನಗೌಡ ಹಟ್ಟಿ ಅವರು ವಿಜಯಪುರ ಜಿಲ್ಲೆಯ ಅಡಿಶ್ನಲ್ ಎಸ್ಪಿಯನ್ನಾಗಿ ನಿಯೋಜಿಸಿ ಸರ್ಕಾರ ನಿನ್ನೆ ರಾತ್ರಿ ಆದೇಶ ಹೊರಡಿಸಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ