ಬೆಳಗಾವಿ-ಕಿತ್ತೂರು ತಾಲ್ಲೂಕಿನಲ್ಲಿ ಬೆಳಗಾಗುತ್ತಿದ್ದಂತೆಯೇ ನಾಸೀರ್ ಬಾಗವಾನ ಉದ್ಭವಿಸಿದ್ದಾರೆ ಎಂ.ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದಾರೆ.
ಕಿತ್ತೂರು ಕ್ಷೇತ್ರದಲ್ಲಿ ಡಿ.ಬಿ ಇನಾಮದಾರ,ಬಾಬಾಗೌಡ ಪಾಟೀಲ,ಮಹಾಂತೇಶ್ ದೊಡ್ಡಗೌಡ್ರರಂತಹ ನಾಯಕರಿದ್ದರೂ ಅವರಿಗೆಲ್ಲ ಮಲಪ್ರಭಾ ಕಾರ್ಖಾನೆ ಬೇಡವಾಗಿದ್ದು ಹೇಗೆ,ನಾಸೀರ ಬಾಗವಾನ ಅವರನ್ನು ಕಿತ್ತೂರು ತಾಲ್ಲೂಕಿನ ಜನ ಅಲ್ಪಾವಧಿಯಲ್ಲಿಯೇ ನಂಬಿದ್ದು ಏಕೆ ? ಎನ್ನುವ ಚರ್ಚೆ ಈಗ ಆರಂಭವಾಗಿದೆ.
ಒಂದು ಕಾಲದಲ್ಲಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಆರ್ಥಿಕವಾಗಿ ಸದೃಡವಾಗಿತ್ತು,ಇಲ್ಲಿಯ ಆಡಳಿತ ದೇಶದ ಗಮನ ಸೆಳೆದಿತ್ತು ,ಈ ಕಾರ್ಖಾನೆಯನ್ನು ಹಲವಾರು ದಶಕಗಳ ಆಳಿದ್ದು ಡಿಬಿ ಇನಾಮದಾರ ಅವರೇ ಎನ್ನುವದು ವಿಶೇಷ,ಮಲಪ್ರಭಾ ಕಾರ್ಖಾನೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಡಿ.ಬಿ ಇನಾಮದಾರ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾರ್ಖಾನೆಯ ಉಸಾಬರಿಯನ್ನೇ ಬಿಟ್ಟರು,ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡ್ರ ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿದ್ದರೂ ಸಹ ತಮ್ಮ ಕ್ಷೇತ್ರದ ಕಾರ್ಖಾನೆ ಉಳಿಸಿಕೊಳ್ಳಲು ಡಿಸಿಸಿ ಬ್ಯಾಂಕಿನಿಂದ ಸಾಲವನ್ನೂ ಕೊಡಿಸುವ ಪ್ರಯತ್ನ ಮಾಡಲಿಲ್ಲ.ಕಾರ್ಖಾನೆ ಆರ್ಥಕ ಸಂಕಷ್ಟ ಎದುರಿಸುತ್ತಿರುವಾಗ ಘಟಾನುಘಟಿಗಳು ನೆರವಿಗೆ ಬರಲಿಲ್ಲ
25 ಕೋಟಿ ರೂ ರೈತರ ಬಾಕಿ ಬಿಲ್ ಇದೆ,ಕಾರ್ಮಿಕರ ವೇತನವನ್ನೂ ಕೊಡಬೇಕಾಗಿದೆ,ಅಗತ್ಯ ಸಾಮುಗ್ರಿಗಳನ್ನು ಖರೀಧಿ ಮಾಡಿ ಈ ವರ್ಷದ ಹಂಗಾಮಿನಲ್ಲಿ ಕಾರ್ಖಾನೆಯನ್ನು ಶುರು ಮಾಡುವ ಸಂಧರ್ಭದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ಘೋಷಣೆಯಾಯಿತು.
ಖಾನಾಪೂರ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಹಲವಾರು ವರ್ಷಗಳಿಂದ ವಿಫಲ ಪ್ರಯತ್ನ ನಡೆಸುತ್ತಿರುವ ನಾಸೀರ ಬಾಗವಾನ್ ಏಕಾ ಏಕಿ ಮಲಪ್ರಭಾ ಕಾರ್ಖಾನೆಯ ಚುನಾವಣೆಯಲ್ಲಿ ಧುಮುಕಿದರು, ಆವಾಗ ಕಿತ್ತೂರು ಕ್ಷೇತ್ರದಲ್ಲಿ ಈ ನಾಸೀರ್ ಬಾಗವಾನ್ ಯಾರು? ಎನ್ನುವ ಚರ್ಚೆ ಶುರುವಾಯಿತು,ನಾಸೀರ ಬಾಗವಾನ ನೂರಾರು ಕೋಟಿ ರೂಗಳ ಆಸ್ತಿ ಹೊಂದಿದ್ದಾರೆ ಎಂಬ ಸುದ್ಧಿ ಕಿತ್ತೂರು ತಾಲ್ಲೂಕಿನಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿತು.
ಚುನಾವಣೆಯ ಪ್ರಚಾರದ ಸಭೆಗಳಲ್ಲಿ ನಾಸೀರ ಬಾಗವಾನ್ ಅದಕ್ಕೆ ತಕ್ಕಂತೆಯೇ ಭಾಷಣ ಮಾಡಿದ್ರು,ನನ್ನ ಆಸ್ತಿಯನ್ನು ಬ್ಯಾಂಕಿನಲ್ಲಿ ಒತ್ತೆ ಇಟ್ಟಾದರೂ ರೈತರ ಕಬ್ಬಿನ ಬಾಕಿ ಬಿಲ್ ಕೊಡುತ್ತೇನೆ,ಕಾರ್ಮಿಕರ ಬಾಕಿ ಸಂಬಳವನ್ನೂ ಕೊಟ್ಟ ಮೇಲೆಯೇ ಕಾರ್ಖಾನೆಯನ್ನು ಪ್ರವೇಶ ಮಾಡುತ್ತೇನೆ ಎಂದು ನಾಸೀರ ಬಾಗವಾನ ಅವರು ಕಂಡ ಕಂಡಲ್ಲಿ ಭಾಷಣ ಮಾಡಿದ್ದರಿಂದಲೇ ಈ ಭಾಗದ ರೈತರಿಗೆ ಅವರ ಮೇಲೆ ಭರವಸೆ ಮೂಡಿತು
ನೂರಾರು ಕೋಟಿ ಆಸ್ತಿ ಹೊಂದಿರುವ ನಾಯಕ ನಮ್ಮ ಬಾಕಿ ಬಿಲ್ ಕೊಡಬಹುದು ಎಂದು ನಂಬಿ ಈ ಚುನಾವಣೆಯಲ್ಲಿ ಕಾರ್ಖಾನೆಯ ಕಬ್ಬು ಬೆಳೆಗಾರರು ನಾಸೀರ ಬಾಗವಾನ್ ಅವರಿಗೆ ಅಭೂತಪೂರ್ವ ಬೆಂಬಲ ವ್ಯೆಕ್ತ ಪಡಿಸಿದ್ದಾರೆ.
ಕಾರ್ಖಾನೆಯನ್ನು ಈ ವರ್ಷ ಶುರು ಮಾಡಲು ಸುಮಾರು 50 ಕೋಟಿ ರೂ ಬೇಕು ಎಂದು ಹೇಳಲಾಗುತ್ತಿದೆ,ಚುನಾವಣೆಯ ಪ್ರಚಾರ ಸಭೆಗಳಲ್ಲಿ ನಾಸೀರ ಬಾಗವಾನ್ ಅವರು ಹಲವಾರು ಭರವಸೆಗಳನ್ನು ಕೊಟ್ಟಾದ್ದಾರೆ,ಅದಕ್ಕಾಗಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು,ಈ ವಿಷಯದಲ್ಲಿ ತಪ್ಪಿದರೆ ಭಾರೀ ಪ್ರತಿರೋದ ಎದುರಿಸಬೇಕಾಗುತ್ತದೆ.
ಕಿತ್ತೂರು ತಾಲ್ಲೂಕಿನ ರೈತರು ನಾಸೀರ ಬಾಗವಾನ್ ಅವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ,ಕೊಟ್ಟ ಮಾತಿನಂತೆ ನಾಸೀರ ಬಾಗವಾನ್ ಅವರು ತಮ್ಮ ಆಸ್ತಿಯನ್ನು ಒತ್ತೆ ಇಟ್ಟಾದರೂ ರೈತರ ಬಾಕಿ ಬಿಲ್,ಕಾರ್ಮಿಕರ ಬಾಕಿ ಸಂಬಳ ಪಾವತಿಸುವ ಮಹತ್ವದ ಜವಾಬ್ದಾರಿ ಅವರ ಮೇಲಿದೆ,ಕಬ್ಬು ನುರಿಸುವ ಹಂಗಾಮು ಈಗ ಶುರುವಾಗಿದೆ,ನಾಸೀರ ಬಾಗವಾನ್ ಅವರು ಕೇವಲ ಒಂದೇ ವಾರದಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಬೇಕಾಗಿದೆ.
ಕೊಟ್ಟ ಮಾತಿಗೆ ತಪ್ಪಿದರೆ ವಾರದಲ್ಲೇ ಕ್ರಾಂತಿಯ ನೆಲ ಕಿತ್ತೂರು ತಾಲ್ಲೂಕಿನ ರೈತರು ನಾಸೀರ ಬಾಗವಾನ್ ವಿರುದ್ಧ ದಂಗೆ ಏಳುವದರಲ್ಲಿ ಎರಡು ಮಾತಿಲ್ಲ.