Breaking News
Home / Breaking News / ರಾಣಿ ಶುಗರ್ಸ್ ನಾಸೀರ ಬಾಗವಾನ್ ಕೊರಳಿಗೆ…..!

ರಾಣಿ ಶುಗರ್ಸ್ ನಾಸೀರ ಬಾಗವಾನ್ ಕೊರಳಿಗೆ…..!

ಬೆಳಗಾವಿ-ಕಿತ್ತೂರು ಚನ್ನಮ್ಮನ ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಸೀರ ಬಾಗವಾನ್ ಗುಂಪು ಪ್ರಚಂಡ ವಿಜಯ ಸಾಧಿಸಿದ್ದು ಹದಿನೈದಕ್ಕೆ ಹದಿನೈದು ಸ್ಥಾನಗಳು ನಾಸೀರ ಬಾಗವಾನ್ ಪೆನಲ್ ಪಾಲಾಗಿವೆ.

ಮದ್ಯರಾತ್ರಿ ಎರಡು ಗಂಟೆಗೆ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು ನಾಸೀರ ಬಾಗವಾನ್ ಗುಂಪಿನ ಎಲ್ಲಾ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಪುತ್ರ ಪ್ರಕಾಶಗೌಡ ಪಾಟೀಲ ಅವರ ಗುಂಪು ಸೋಲು ಅನುಭವಿಸಿದೆ.

ನಿನ್ನೆ ಸಂಜೆ 7 ಗಂಟೆಗೆ ಮತ ಎಣಿಕೆ ಆರಂಭವಾಗಿತ್ತು ಆರಂಭದಲ್ಲಿ ನಾಸೀರ ಬಾಗವಾನ್ ಗುಂಪಿನ ಮಹಿಳಾ ಅಭ್ಯರ್ಥಿಗಳು ವಿಜಯದ ಪತಾಕೆ ಹಾರಿಸಿದ್ರು ನಂತರ ಅ ವರ್ಗ,ಬ ವರ್ಗ ಮತ್ತು ಎಸ್ ಸಿ ಎಸ್ ಟಿ ವರ್ಗದ ಅಭ್ಯರ್ಥಿಗಳು ಗೆಲವು ತಮ್ಮದಾಗಿಸಿ ನಾಸೀರ್ ಬಾಗವಾನ್ ಅವರ ಗುಂಪಿಗೆ ಭರ್ಜರಿ ಜಯ ದೊರಕಿಸಿಕೊಟ್ಟರು.

ನಂತರ ನಡೆದ ಸಾಮಾನ್ಯ ಅಭ್ಯರ್ಥಿಗಳ ಮತ ಎಣಿಕೆಯಲ್ಲಿ ಪ್ರಕಾಶಗೌಡ ಪಾಟೀಲ ಅವರ ಗುಂಪಿನ ಅಭ್ಯರ್ಥಿಗಳು ಪೈಪೋಟಿ ನೀಡಿದ್ರೂ ಸಹ ಗೆಲವು ಸಾಧಿಸಲು ಸಾಧ್ಯವಾಗಲಿಲ್ಲ,ಮದ್ಯರಾತ್ರಿ ಎರಡು 2.30 ಕ್ಕೆ ಮತ ಎಣಿಕೆ ಮುಗಿದಾಗ ನಾಸೀರ ಬಾಗವಾನ ಅವರ ಗುಂಪಿನ ಎಲ್ಲ ಹದಿನೈದು ಅಭ್ಯರ್ಥಿಗಳು ಗೆಲವು ತಮ್ಮದಾಗಿಸಿಕೊಂಡರು.
ಶಾಸಕ ಸ್ಥಾನದ ಪ್ರಬಲ ಆಕಾಂಕ್ಷಿ ಹಲವಾರು ಬಾರಿ ಖಾನಾಪೂರ ವಿಧಾಸಭಾ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ದೆ ಮಾಡಿ ಸೋತಿದ್ದ ನಾಸೀರ ಬಾಗವಾನ್ ಏಕಾಏಕಿ ಕಿತ್ತೂರು ಕ್ಷೇತ್ರದಲ್ಲಿ ಎಂಟ್ರಿ ಹೊಡೆದು ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ‌‌.

ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 2452 ಮತಗಳಲ್ಲಿ,2049 ಮತಗಳು ಚಲಾವಣೆ ಆಗಿದ್ದವು

ಗೆಲವು ಸಾಧಿಸಿದ ನಾಸೀರ ಬಾಗವಾನ್ ಅವರ ಗುಂಪಿನ ಅಭ್ಯರ್ಥಿಗಳ ವಿವರ

1) ನಾಶೀರುದ್ದೀನ ಬಾಗವಾನ-ಗಂದಿಗವಾಡ
2) ಅಶೋಕ ಯಮಕನಮರಡಿ -ಗಂದಿಗವಾಡ
3) ಅಶೋಕ ಬೆಂಡಿಗೇರಿ -ಚಿಕ್ಕ ಮುನವಳ್ಳಿ
4) ಮಂಜುನಾಥ ಪಾಟೀಲ- ದಾಸ್ತಿಕೊಪ್ಪ
5) ಲಕ್ಷ್ಮಣ ಎಮ್ಮಿ -ಮಲ್ಲಾಪುರ ಕೆ ಎ
6) ಸಿದ್ದಪ್ಪ ದೊರೆಪ್ಪನವರ-ಹುಲಿಕಟ್ಟಿ
7) ಭರತೇಶ್ ಶೇಬಣ್ಣವರ-ದೇವರಶಿಗಿಹಳ್ಳಿ
8) ಬಸವರಾಜ ಬೆಂಡಿಗೇರಿ-ಎಂಕೆ ಹುಬ್ಬಳ್ಳಿ
9) ಜ್ಯೋತಿಬಾ ಹೈಬತ್ತಿ-ಕಾದರವಳ್ಳಿ
10) ಬಸವರಾಜ ಪುಂಡಿ- ಇಟಗಿ
11) ಶಂಕರಗೌಡ ಪಾಟೀಲ – ಬೈಲೂರು
12) ಸಂಜೀವ್ ಹುಬಳ್ಯೆಪ್ಪನವರ-ಎಂಕೆ ಹುಬ್ಬಳ್ಳಿ
13) ಸಾವಂತ ಕಿರಬನವರ- ತಿಗಡೊಳ್ಳಿ
14) ಮೀನಾಕ್ಷಿ ನೆಲಗಳಿ-ಬೋಗೂರ
15) ಲಕ್ಷ್ಮಿ ಅರಳಿಕಟ್ಟಿ -ಹಿರೇಬಾಗೇವಾಡಿ

 

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *