Breaking News

ಆಸ್ಪತ್ರೆ ಊಟ ಬೇಡ್ವಂತೆ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕಂತೆ…!!

ಬೆಳಗಾವಿ-ರಾಜಕುಮಾರ್ ಟಾಕಳೆ ವಿರುದ್ಧ,ಅತ್ಯಾಚಾರ,ಕಿಡ್ನಾಪ್,ಭ್ರೂಣ ಹತ್ಯೆ ಸೇರಿದಂತೆ ಆರೋಪಗಳ ಸುರಿಮಳೆ ಮಾಡಿರುವ ನವ್ಯಶ್ರೀ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿರುವ ಹಿನ್ನಲೆಯಲ್ಲಿ, ನವ್ಯಶ್ರೀ ನಿನ್ನೆಯಿಂದ ವಿಚಾರಣೆಗೆ ಹಾಜರಾಗಿದ್ದು ವೈದ್ಯಕೀಯ ಪರೀಕ್ಷೆಗಾಗಿ ನವ್ಯಶ್ರೀ ಈಗ ಬೆಳಗಾವಿಯ ಭೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ
ನವ್ಯಶ್ರೀಗೆ ಆಸ್ಪತ್ರೆ ಊಟ ಬೇಡ್ವಂತೆ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು ಅಂತಾ ತಗಾದೆ ತೆಗೆದಿದ್ದಾರೆ.

ನವ್ಯಶ್ರೀ, ರಾಜಕುಮಾರ್ ಟಾಕಳೆ ದೂರು ಪ್ರತಿದೂರು ಪ್ರಕರಣದ ವಿಚಾರಣೆ ನಡೆಯುತ್ತಿದೆ‌.ಬೆಳಗಾವಿ ಬೀಮ್ಸ್ ನಲ್ಲಿ ಆಸ್ಪತ್ರೆ ವೈದ್ಯರೊಂದಿಗೆ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಬಿರ್ಯಾಣಿ ಕೊಡುವಂತೆ ಕಿರಿಕ್ ಮಾಡುತ್ತಿದ್ದು,
ನವ್ಯಶ್ರೀಗೆ ಆಸ್ಪತ್ರೆ ಊಟ ಬೇಡ್ವಂತೆ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು ಅಂತಾ ವೈದ್ಯರು,ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಜೊತೆಗೆ ವಾಗ್ವಾದ ನಡೆಸಿರೋ ನವ್ಯಶ್ರೀ ಆಸ್ಪತ್ರೆಯಲ್ಲೂ ಹೈಟೆಕ್ ವ್ಯವಸ್ಥೆಗಾಗಿ ಜಗಳ ಮಾಡುತ್ತಿರುವ ವಿಷಯ ಈಗ ಆಸ್ಪತ್ರೆಯಿಂದಾಚೆ ಬಂದಿದೆ.

ಬಿಸಿನೀರು, ಹೋಟೆಲ್ ಊಟ, ಬಿರಿಯಾನಿ ಬೇಕು ಅಂತಾ ಪಟ್ಟು ಹಿಡಿದಿರುವನವ್ಯಶ್ರೀ ಕಿರಿಕ್ ಮಾಡುತ್ತಿದ್ದಂತೆ ಪೋಲೀಸರು, ಬಿಸಿನೀರು,ಹೊರಗಡೆಯಿಂದ ಪಲಾವ್ ವ್ಯವಸ್ಥೆ ಮಾಡಿದ್ದಾರೆ.ರಾಜಕುಮಾರ ಟಾಕಳೆ ವಿರುದ್ದ ಗರ್ಭಪಾತ, ಅತ್ಯಾಚಾರ, ದೈಹಿಕ ಹಲ್ಲೆ ಸೇರಿ ಇತರ ಸೆಕ್ಷನಡಿ ಕೇಸ್ ಹಾಕಿರೋ ನವ್ಯಶ್ರೀ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿದ್ದಾರೆ.

ಇತ್ತ ನವ್ಯಶ್ರೀ ವಿರುದ್ಧವೂ ಸುಳ್ಳು ಅತ್ಯಾಚಾರ, ಬ್ಲ್ಯಾಕ್ ಮೇಲ್ ಕೇಸ್ ದಾಖಲಿಸಿದ್ದ ರಾಜಕುಮಾರ ಟಾಕಳೆ,ಕೂಡಾ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವ ಸಾಧ್ಯತೆ ಇದೆ.

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *