ಬೆಳಗಾವಿ-ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ಕೊಡಿಸಿ,ಕೈಗಾರಿಕಾ ಮಂತ್ರಿಯಾಗಿರುವ ಮುರುಗೇಶ್ ನಿರಾಣಿ ಅವರು ತಮ್ಮ ಸಹಕಾರ ಕ್ಷೇತ್ರದ ಸೇವೆಯನ್ನು ಬೆಳಗಾವಿ ಮಹಾನಗರಕ್ಕೂ ವಿಸ್ತರಿಸಿದ್ದಾರೆ.
.ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಅನೇಕ ಸಕ್ಕರೆ,ಹಾಗೂ ಸಿಮೆಂಟ್ ಕಾರ್ಖಾನೆಗಳ ಮೂಲಕ ಸಾವಿರಾರು ಜನ ಯುವಕರಿಗೆ ಉದ್ಯೋಗ ಕೊಡಿಸಿದ್ದಾರೆ.ಈಗ ತಮ್ಮ ಸೇವಾ ವ್ಯಾಪ್ತಿಯನ್ನು ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಗೂ ವಿಸ್ತರಿಸಿದ್ದು, ನಾಳೆ ಶನಿವಾರ ಬೆಳಗಾವಿ ಮಹಾನಗರದಲ್ಲಿ ತಮ್ಮ ಸೇವೆಯನ್ನು ಸಮರ್ಪಿಸಲಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ಅವರ ಮುಖಂಡತ್ವದ ,ವಿಶಾಲ ಎಂ.ಆರ್.ಎನ್.ಸೌಹಾರ್ದ ಪತ್ತಿನ ಸಹಕಾರಿ ಸಂಘ,ನಿ. ಜಮಖಂಡಿ ಇದರ ಶಾಖೆಯನ್ನು ಬೆಳಗಾವಿಯಲ್ಲಿ ಆರಂಭಿಸಲಿದ್ದಾರೆ.ಜಮಖಂಡಿ ಪ್ರದೇಶದಲ್ಲಿ ಈ ಸಹಕಾರಿ ಸಂಘ ಅಪಾರ ಜನಮೆಚ್ಚುಗೆ ಗಳಿಸಿದ್ದು, ಇದರ ಬೆಳಗಾವಿ ಶಾಖೆಯನ್ನು ನಾಳೆ ಅನೇಕ ದಿಗ್ಗಜರು ಉದ್ಘಾಟಿಸಲಿದ್ದಾರೆ.
ಈ ಸಹಕಾರಿ ಸಂಘದ ಬೆಳಗಾವಿ ಶಾಖೆಯ ಉದ್ಘಾಟನೆ ಕಾರ್ಯಕ್ರಮ ಬೆಳಗಾವಿ ನಗರದ ಕೆಪಿಟಿಸಿಎಲ್ ಸಭಾ ಭವನದಲ್ಲಿ ಮದ್ಯಾಹ್ನ 1-00 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ,ಧರ್ಮೇಂದ್ರ ಪ್ರಧಾನ,ಪ್ರಲ್ಹಾದ್ ಜೋಶಿ,ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ,ಎಂ.ಆರ್.ಎನ್ ನಿರಾಣಿ ಉದ್ಯಮ ಸಮೂಹ ಸಂಸ್ಥೆಗಳ ನಿರ್ವಾಕರು ಮನವಿ ಮಾಡಿಕೊಂಡಿದ್ದಾರೆ.