Breaking News

ನವ್ಹೆಂಬರ ಕೊನೆಯ ವಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ

 

ಬೆಳಗಾವಿ- ನವ್ಹೆಂಬರ ತಿಂಗಳ ಕೊನೆಯ ವಾರದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧವೇಶನ ನಡೆಸಲು ಚಿಂತನೆ ನಡೆದಿದೆ ಎಂದು ಸಭಾಪತಿ ಕೋಳಿವಾಡ ತಿಳಿಸಿದ್ದಾರೆ
ಗುರುವಾರ ಬೆಳಗಾವಿಯ ಸುವರ್ಣ ಸೌಧಕ್ಕೆ ಭೇಟಿ ನೀಡಿ ಮಾದ್ಯಮಗಳ ಜತೆ ಮಾತನಾಡಿದ ಅವರು ಅಧಿವೇಶನಕ್ಕೆ ಇನ್ನು ದಿನಾಂಕ ನಿಗದಿ ಆಗಿಲ್ಲ ನವ್ಹೆಂಬರ ತಿಂಗಳ ಕೊನೆಯ ವಾರದಲ್ಲಿ ಅಧವೇಶನ ಆರಂಭಿಸಿ ಡಿಸೆಂಬರ ಹದಿನೈದರೊಳಗಾಗಿ ಮುಗಿಸುವ ಆಲೋಚನೆ ಇದೆ ಎಂದು ಸಭಾಪತಿ ಕೋಳಿವಾಡ ತಿಳಿಸಿದರು
ಬೆಳಗಾವಿಯ ಸುವರ್ಣಸೌಧದ ಬಳಿಯಲ್ಲಿ ೨೦೦ ಕೋಟಿ ವೆಚ್ಚದಲ್ಲಿ ೩೫೦ ಕೊಠಡಿಯ ಶಾಸಕರ ಭವನ ನಿರ್ಮಾಣ ಮಾಡುವ ಯೋಜನೆ ಇದೆ ಈ ಯೋಜನೆಗೆ ಇನ್ನುವರೆಗೆ ಅಂತಿಮ ಸ್ವರೂಪ ಸಿಕ್ಕಿಲ್ಲ ಶಿಘ್ರದಲ್ಲಿಯೇ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ಮಾಡಿ ಶಾಸಕರ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವದು ಎಂದು ವಿಧಾನಸಭೆಯ ಸಭಾಪತಿ ಕೋಳಿವಾಡ ತಿಳಿಸಿದ್ದಾರೆ
ಸುವರ್ಣ ಸೌಧ ನಿರ್ವಹಣೆಗೆ ಪ್ರತಿ ವರ್ಷ ನಾಲ್ಕು ಕೋಟಿ ರೂ ಖರ್ಚಾಗುತ್ತಿದೆ ಸುವರ್ಣ ಸೌಧದ ಸುತ್ತ ಮುತ್ತಲು ಎಷ್ಟ ಜಾಗೆ ಖಾಲಿ ಉಳಿದಿದೆ ಅದನ್ನು ಯಾವ ರೀತಿ ಸಧ್ಬಳಕೆ ಮಾಡಿಕೊಳ್ಳಬೇಕು ಎನ್ನುವದರ ಬಗ್ಗೆ ಅದ್ಯಯನ ಮಾಡಲು ಬೆಳಗಾವಿಗೆ ಬಂದಿದ್ದೇನೆ ಎಂದರು
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಒಂದು ದಿನ ಮಹದಾಯಿ ಇನ್ನೊಂದು ದಿನ ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಲಾಗುವದು ಎಂದು ಕೋಳಿವಾಡ ಭರವಸೆ ನೀಡಿದ್ದಾರೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *