ಬೆಳಗಾವಿ:ನಗರದಲ್ಲಿ ಮೊಟ್ಟಮೊದಲ ರೈಲ್ವೇ ಓವರ್ ಬ್ರಿಡ್ಜ್ ಕಪಿಲೇಶ್ವರ ಮಂದಿರದ ಬಳಿ ನಿರ್ಮಾಣಗೊಂಡು ಸೆವೆಗೆ ಸಮರ್ಪಣೆಯಾದ ಬಳಿಕ ಈಗ ಎರಡನೇ ಓವರ್ ಬ್ರಿಡ್ಜ್ ಕಾಮಗಾರಿಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು.
ಹಳೆ ಪಿಬಿ ರಸ್ತೆಯ ಬಾಜಿ ಮಾರ್ಕೇಟ್ ಬಳಿ ಓವರ್ ಬ್ರಿಡ್ಜ್ ಕಾಮಗಾರಿಗೆ ಬೆಳಗಾವಿ ಸಂಸದ ಸುರೇಶ ಅಂಗಡಿ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಸುಮಾರು ೨೫.೦೪ ಕೋಟಿ ವೆಚ್ಚದಲ್ಲಿ ಬರುವ ಮೇ ತಿಂಗಳ ಅಂತ್ಯದ ವೇಳೆಗೆ ಕಾಮಗಾರಿ ಮುಗಿಯಲಿದೆ. ಹೈದ್ರಾಬಾದ ಮೂಲದ ಕೆಪಿಆರ್ ಕನಸ್ಟ್ರಕ್ಷನ್ ಅವರಿಂದ ಕಾಮಗಾರಿ ನಡೆಯಲಿದ್ದು ಇಂದಿನಿಂದ ಈ ರಸ್ತೆಯ ಸಂಚಾರವನ್ನು ಬಂದ ಮಾಡಿ ಕಾಮಗಾರಿ ಪ್ರಾರಂಬಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ ರೆಲ್ವೆ ಮೇಲ್ಸೇತುವೆ ಜೀಜಾ ಮಾತಾ ಸರ್ಕಲ್ ನಿಂದ ಆರಂಭವಾಗಿ ಮಹದ್ವಾ ರಸ್ತೆಗೆ ಅಂತ್ಯವಾಗುತ್ತದೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು
ಮದ್ಯಾಹ್ನ ಒಂದು ಘಂಟೆಗೆ ಟ್ರಾಫಿಕ್ ಬಂದ್ ಮಾಡಿ ಪಿಲ್ಲರ್ ಕಾಮಗಾರಿಗೆ ಅನಕೂಲ ಮಾಡಿಕೊಡಲಾಗುವದು ಎಂದು ಟ್ರಾಫಿಕ್ ಎಸಿಪಿ ಮಾರಿಹಾಳ ತಿಳಿಸಿದರು
ಪೂಜಾ ಸಮಾರಂಭದಲ್ಲಿ ಮಾಜಿ ಶಾಸಕ ಅಭಯ ಪಾಟೀಲ, ನಗರ ಬಿಜೆಪಿ ಅಧ್ಯಕ್ಷ ಅನಿಲ ಬೆನಕೆ, ನ್ಯಾಯವಾದಿ ಬಸವರಾಜ ರೊಟ್ಟಿ, ಲೀನಾ ಟೋಪನ್ನವರ, ರೈಲ್ವೇ ಅಧಿಕಾರಿ ಅಮರಗುಂಡಪ್ಪ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಸೇತುವೆ ಎತ್ತರ ಮಾಡಿ, ವ್ಯಾಪಾರಸ್ಥರ ಆಗ್ರಹ:
ಬೆಳಗಾವಿ:ರೈಲ್ವೇ ಮೇಲ್ಸೇತುವೆಯನ್ನು ನಿಗದಿಗಿಂತ ಇನ್ನೂ ಎತ್ತರವಾಗಿ ನಿರ್ಮಿಸಬೇಕು. ಎತ್ತರ ಕಡಿಮೆ ಮಾಡಿದರೆ ನಮ್ಮ ವ್ಯಾಪಾರಕ್ಕೆ ಧಕ್ಕೆಯಾಗುತ್ತದೆ ಎಂದು ಹಳೆ ಪಿಬಿ ರಸ್ತೆಯ ವ್ಯಾಪಾರಸ್ಥ ಅಂಗಡಿಕಾರರು ಹಾಗೂ ಅಧಿಕಾರಿಗಳನ್ನು ಇದೇ ಸಂದರ್ಭ ಒತ್ತಾಯಿಸಿದರು. ಬೇಡಿಕೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದು ಸಂಸದ ಸುರೇಶ ಅಂಗಡಿ ಸಮಾಧಾನಪಡಿಸಿದರು.