Breaking News

ಬೆಳಗಾವಿ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯದ ಪಾವರ್…!!

ಈಗ ಬೆಳಗಾವಿ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜದ ಹವಾ…!!!

ಬೆಳಗಾವಿ – ಮಠಾಧೀಶರು ಸಮಾಜದ ಒಳತಿಗಾಗಿ ಸಂಕಲ್ಪ ಮಾಡಿದ್ರೆ ಏನೆಲ್ಲಾ ಮಾಡಬಹುದು ಅನ್ನೋದನ್ನು ಕೂಡಲಸಂಗಮ‌ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾಭೀತು ಮಾಡಿ ತೋರಿಸಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ದೊರಕಿಸಿ ಕೊಡಲು ಪಂಚಮಸಾಲಿ ಶ್ರೀಗಳು ನಡೆಸಿರುವ ಹೋರಾಟ, ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲಿಕಿಸುವ ಮಟ್ಟಿಗೆ ಪ್ರಭಾವಶಾಲಿಯಾಗುತ್ತಿದೆ.ಯಾಕಂದ್ರೆ ಪಂಚಮಸಾಲಿ ಶ್ರೀಗಳಾದ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಒಂದಾದ ಮೇಲೊಂದು ಹೋರಾಟ ಮಾಡುತ್ತಲೇ ಇದ್ದಾರೆ,ಧರಣಿ,ಪ್ರತಿಭಟನೆ,ಮುತ್ತಿಗೆ,ಘೇರಾವ್,ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಹೋರಾಟಗಳು ಮುಗಿದ ಬಳಿಕ ಶ್ರೀಗಳು ಈಗ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮಾಜದ ಸಮಾವೇಶಗಳನ್ನು ಏರ್ಪಡಿಸಿ,ಸರ್ಕಾರದ ಮೇಲೆ ಪ್ರಬಲ ಒತ್ತಡ ಹೇರುವ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸಿದ್ದಾರೆ.

ಬೆಳಗಾವಿ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ನಿರ್ಣಾಯಕ ಜಿಲ್ಲೆ ಹದಿನೆಂಟು ವಿಧಾಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲೇ ಅತೀ ಹೆಚ್ಚು ಪಂಚಮಸಾಲಿ ಸಮಾಜ ಹೊಂದಿದ್ದು,ಈ ಜಿಲ್ಲೆಯಲ್ಲೇ ಪಂಚಮಸಾಲಿ ಶ್ರೀಗಳು ಸರಣಿ ಸಮಾವೇಶಗಳನ್ನು ಮಾಡುವ ಮೂಲಕ ಇಡೀ ಸಮಾಜವನ್ನೇ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ.

ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ,ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಶ್ರೀಗಳು ನಡೆಸಿದ ಪಾದಯಾತ್ರೆ,ಆದ ಬಳಿಕ ಶ್ರೀಗಳು ವಿಶ್ರಾಂತಿ ಪಡೆಯದೇ ನಿರಂತರವಾಗಿ ಶ್ರೀಗಳು ಮಾಡಿದ ಹೋರಾಟಗಳಿಂದಾಗಿ ಸಮಾಜ ಸಂಪೂರ್ಣವಾಗಿ ಜಾಗೃತವಾಗಿದ್ದು,ಪಂಚಮಸಾಲಿ ಸಮಾಜ ಮೀಸಲಾತಿಗಾಗಿ ಯಾವುದೇ ರೀತಿಯ ಸಮರ ಸಾರಲು ಈಗ ಸಜ್ಜಾಗಿದೆ.

ಪಂಚಮಸಾಲಿ ಸಮಾಜ ಎಷ್ಟೊಂದು ಸಂಘಟಿತವಾಗಿದೆ ಅಂದ್ರೆ,ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಂಚಮಸಾಲಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.ಈ ಸಮಾಜದ ಬಸನಗೌಡ ಯತ್ನಾಳ ಅಥವಾ ಲಕ್ಷ್ಮೀ ಹೆಬ್ಬಾಳಕರ ಸಿಎಂ ಆಗ್ತಾರೆ ಎಂದು ಹೇಳುವ ಮಟ್ಟಿಗೆ ಪಂಚಮಸಾಲಿ ಸಮಾಜ ಸಂಘಟಿತವಾಗಿದೆ‌.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ,ಬಸನಗೌಡ ಯತ್ನಾಳ ಸಿಎಂ ಆಗ್ತಾರೆ,ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ,ಎಂ.ಬಿ ಪಾಟೀಲ ಅಥವಾ ಲಕ್ಷ್ಮೀ ಹೆಬ್ಬಾಳಕ ಸಿಎಂ ಆಗ್ತಾರೆ,ಎನ್ನುವ ಚರ್ಚೆಗಳು ಈಗಿನಿಂದಲೇ ಶುರುವಾಗಿವೆ.ಈ ಮಾತನ್ನು ಕೇವಲ ಪಂಚಮಸಾಲಿ ಸಮಾಜದ ಜನ ಮಾತನಾಡುತ್ತಿಲ್ಲ ಬೇರೆ ಸಮಾಜದ ಜನ ಕೂಡಾ ಇದೇ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ.

ಸರ್ಕಾರ ಇವತ್ತು ನಾಳೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಟ್ಟೇ ಕೊಡುತ್ತದೆ.ಸಮಾಜಕ್ಕೆ ಮೀಸಲಾತಿ ದೊರಕಿದ ನಂತರ, ಕೂಡಲಸಂಗಮ‌ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಮುಂದಿನ ವಿಧಾಸಭೆ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಲು,ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಮೇಲೆ ಒತ್ತಡ ಹೇರುವ ಹೋರಾಟ ಮಾಡುತ್ತಾರೆ,ಎನ್ನುವ ಮುನ್ಸೂಚನೆ ಇದೆ.

ಇಂದು ಅರಭಾವಿ ಕ್ಷೇತ್ರದಲ್ಲಿ ಪಂಚಮಸಾಲಿ ಸಮಾವೇಶ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸಲು ನಡೆದ ಹೋರಾಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರು ಸಾಥ್ ಕೊಡುತ್ತಿದ್ದಾರೆ.ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಹುಟ್ಟೂರು, ಅರಭಾವಿ ಕ್ಷೇತ್ರದ, ಕಲ್ಲೊಳ್ಳಿಯಲ್ಲಿ ಗ್ರಾಮದಲ್ಲಿ ಪಂಚಮಸಾಲಿ ಸಮಾವೇಶ ನಡೆಯಲಿದೆ,ಸಮಾವೇಶ ಆರಂಭ ಆಗುವ ಮುನ್ನ ಇದೇ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಕಾರ್ಯಕಾರಿಣಿ ಸಭೆ ಕೂಡಾ ನಡೆಲಿದ್ದು. ಅರಭಾವಿ ಕ್ಷೇತ್ರದ ಶಾಸಕ ಕೆ.ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬಹಿರಂಗ ಬೆಂಬಲ ಸೂಚಿಸಿದ್ದಾರೆ.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *