ಬೆಳಗಾವಿ-ಅದು ಬಂದಲ್ಲಾ, ಎರಡಲ್ಲಾ ಬರೋಬರಿ 18ವರ್ಷಗಳಿಂದ ಈ ಬಾಲಕಿ ಅನ್ನ ಮುಟ್ಟಿಲ್ಲ. ಇವಳಿಗೆ ಊಟ ತಿಂಡಿ ಅಂದ್ರೆ ಅಲರ್ಜಿ. ಪಾರ್ಲೆ ಜೀ ಬಿಸ್ಕೇಟು..ಇದೇ ಅವಳ ಜೀವಾಳವಾಗಿದೆ. ಇಂತಹ ಬಾಲಕಿಯನ್ನ ಸಾಕುವುದೇ ಬಡ ತಂದೆ ತಾಯಿಗಳಿಗೆ ಬಾರವಾಗಿತ್ತು. . ಈ ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾಗುತದತ್ದ್ಂತೇಯೇ ಬೆಳಗಾವಿ ಲೆಕ್ ವಿವ್ ಆಸ್ಪತ್ರೆಯ ವೈದ್ಯರು ಈ ಬಾಲಕಿಗೆ ಆಸ್ಪತ್ರೆಗೆ ಕರೆಯಿಸಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ ಅಷ್ಠೇ ಅಲ್ಲಿ ಬಾಲಕಿಗೆ ಅನ್ನ ತಿನಿಸಲು ಒಂದು ಗಂಟೆ ನಡೆದ ವೈದ್ಯರ ಪ್ರಯತ್ನ ಕೊನೆಗೂ ಕೈಗೂಡಲಿಲ್ಲ. ಬಾಲಕಿ ಅನ್ನ ತಿನ್ನುವುದಕ್ಕೆ ಕೊನೆಗೂ ಒಪ್ಪಲಿಲ್ಲ.
ಅನ್ನ ತಿನ್ನಲು ಒಪ್ಪದ ಬಾಲಕಿ..!
ಹೀಗೆ ತನ್ನ ಮುಂದೆ ಹಲವು ಪಾರ್ಲೇ ಜೀ ಕಂಪನಿಯ ಬಿಸ್ಕೇಟ್ ಗಳನ್ನ ಇಟ್ಟುಕೊಂಡು ಅವುಗಳನ್ನ ತಿನ್ನುತ್ತಿರುವ ಈ ಬಾಲಕಿ ಹೆಸರು ರಾಮವ್ವ. ವಯಸ್ಸು 18, ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದವಳು.ಸದ್ಯ ಇದೇ ಬಾಲಕಿ ಎಲ್ಲರ ಕುತೊಹಲದ ಕೇಂದ್ರಬಿಂದುವಾಗಿದ್ದಾಳೆ.ಇತ್ತೀಚಿಗೆ ಮಗಳ ಬಗ್ಗೆ ಇಡೀ ಕುಟುಂಬ ಆತಂಕಕ್ಕೀಡಾಗಿದೆ.ಇದಕ್ಕೆ ಕಾರಣ ಬಾಲಕಿ ರಾಮವ್ವಗೆ ಇರುವ ಹವ್ಯಾಸ.ರಾಮವ್ವ ಚಿಕ್ಕವಳಿರುವಾಗ ಮೊಲೆ ಹಾಲು ಬಿಡಿಸಲು ತಾಯಿ ಬಿಸ್ಕೇಟ್ ತಿನಿಸಲು ಪ್ರಾರಂಭಿಸಿದ್ಲು.ಅವತ್ತಿನಿಂದ ತಾಯಿ ಮೊಲೆಹಾಲು ಬಿಟ್ಟು ಬಿಸ್ಕೇಟ್ ತಿನ್ನುವುದನ್ನ ರೂಢಿಸಿಕೊಂಡ ರಾಮವ್ವ, ಮುಂದೆ ಎಂದಿಗೂ ಮೊಲೆ ಹಾಲು ಕುಡಿಯಲಿಲ್ಲ. ಇನ್ನೂ ಎರಡರಿಂದ ಮೂರು ವರ್ಷದವಳಾದ ನಂತ್ರ ಅನ್ನ ಸೇರಿದಂತೆ ಬೇರೆ ಆಹಾರ ಪದಾರ್ಥ ತಿನಿಸಲು ಪ್ರಾರಂಭಿಸಿದ್ರೂ ಅದನ್ನೂ ತಿನ್ನಲಿಲ್ಲ. ಇದನ್ನೇ ರೂಢಿಸಿಕೊಂಡಿರುವ ರಾಮವ್ವ18ವರ್ಷಗಳಲ್ಲಿ ಒಂದಗಳು ಅನ್ನವನ್ನ ತಿಂದಿಲ್ಲ. ಪಾರ್ಲೇ ಜೀ ಕಂಪನಿಯ ಬಿಸ್ಕೇಟ್ ಹೊರತುಪಡಿಸಿದ್ರೆ, ಬೇರೆ ಬಿಸ್ಕೇಟ್ ಮುಟ್ಟುವುದಿಲ್ಲ.ಬಿಸ್ಕೇಟ್ ಮೇಲಿನ ಕವರ್ ಬದಲಾದ್ರೂ ಅದನ್ನ ತಿನ್ನುವುದಿಲ್ಲ. ಪ್ರತಿ ದಿನ ಬೆಳಿಗ್ಗೆ ಬಾಲಕಿ ಶಾಲೆಗೆ ಹೋಗುವ ಮುನ್ನ ತಾನೇ ಅಂಗಡಿಗೆ ಹೋಗಿ ಬಿಸ್ಕೇಟ್ ಖರೀದಿಸಿ ತೆಗೆದುಕೊಂಡು ಬಂದು ಚಹಾದ ಜೊತೆಗೆ ಅದನ್ನ ಹೊಟ್ಟೆತುಂಬಾ ತಿಂದು ಶಾಲೆಗೆ ಹೋಗುತ್ತಾಳೆ. ಮದ್ಯಾಹ್ನ, ಸಂಜೆ ಮತ್ತೇ ಅದೇ ಬಿಸ್ಕೇಟ್ ತಿಂದು ಹೊಟ್ಟೆ ತುಂಬಿಕೊಳ್ಳುತ್ತಾಳೆ.ಪಾರ್ಲೇ ಜೀ ಕಂಪನಿ ಬಿಸ್ಕೇಟ್ ಖಾಲಿಯಾದ್ರೆ ಅವತ್ತು ಬಾಲಕಿ ಉಪವಾಸ.
ಇಷ್ಟು ಸಾಲದು ಎನ್ನುವಂತೆ ಬಾಲಕಿಗೆ ಇವತ್ತು ಆಹಾರ ತಿನಿಸಲೇಬೇಕೆಂದು ಕ್ಯಾಂಟಿನಿಗೆ ಕರೆದುಕೊಂಡು ಹೋಗಿ ಸುಮಾರು 1ಗಂಟೆಗೂ ಅಧಿಕ ಕಾಲ ಇಬ್ಬರು ಮಹಿಳಾ ವೈದ್ಯರು, ನರ್ಸಗಳು ಬಾಲಕಿಯ ಮನವೂಲಿಸಲು ಪ್ರಯತ್ನಿಸಿದ್ರು. ಆದ್ರೆ ಅನ್ನ ತಿನ್ನಲು ಬಾಲಕಿ ಸುತಾರಾಂ ಒಪ್ಪಲಿಲ್ಲ.ಕೊನೆಗೆ ಚಹಾದ ಮೂಲಕ ಆಹಾರ ನೀಡಬೇಕೆಂದು ಪ್ರಯತ್ನಿಸಿದ್ರೂ ಚಹಾ ಸಹ ಕುಡಿಯಲಿಲ್ಲ.ಹೀಗಾಗಿ ಕಳೆದ ಒಂದು ಗಂಟೆಗಳ ಕಾಲ ವೈದ್ಯರು ನಡೆಸಿ ಪ್ರಯತ್ನ ಕೊನೆಗೂ ಕೈಗೂಡಲಿಲ್ಲ.
ಇನ್ನೂ ರಕ್ತ, ಮೂತ್ರ, ಸ್ಕ್ಯಾನಿಂಗ್ ರಿಪೋಟ್ ಗಳು ನಾರ್ಮಲ್ ಆಗಿದ್ದು, ಬಾಲಕಿಗೆ ಮನೋವೈದ್ಯರ ಅವಶ್ಯಕತೆ ಇದೆ.ಹಾಗಾಗಿ ತಮ್ಮ ಆಸ್ಪತ್ರೆಯಿಂದಲೇ ಅದರ ವ್ಯವಸ್ಥೆ ಮಾಡುವುದಾಗಿ ವೈದ್ಯರು ತಿಳಿಸಿದ್ರು.
Check Also
ಬೆಳಗಾವಿಯ ಬೀದಿಗಿಳಿದ ಇಲೆಕ್ಟ್ರಿಕ್ ರಿಕ್ಷಾ…!
ಬೆಳಗಾವಿ ಬೆಳಗಾವಿ ನಗರ ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಿದೆ. ನಗರದ ರಸ್ತೆಗಳಲ್ಲಿ ಇಲೆಕ್ಟ್ರಿಕ್ ರಿಕ್ಷಾಗಳು ರಾರಾಜಿಸುತ್ತಿವೆ. ಪರಿಸರ ಸ್ನೇಹಿಯಾಗಿರುವ ಈ …