ಬೆಳಗಾವಿ- ಬೆಳಗಾವಿ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ ಹಂದಿ ಸಾಕುವವರು ಬೆಳಗಾವಿ ಹಂದಿ ಸಾಕಲು ಬೆಳಗಾವಿಯೇ ಸೂಕ್ತ ಎಂದು ತಿಳಿದು ಬೆಳಗಾವಿಗೆ ವಲಸೆ ಬರುತ್ತಿದ್ದಾರೆ
ಹಂದಿ ಸಾಕುವವರು ಬೆಳಗಾವಿ ನಗರದ ಕಂಡು ಕಂಡಲ್ಲಿ ಹಂದಿ ಮರಿಗಳನ್ನು ಬಿಡುತ್ತಿದ್ದು ಇದಕ್ಕೆ ಲಗಾಮು ಹಾಕುವವರು ಯಾರು ಅನ್ನೋ ಪ್ರಶ್ನೆ ಬೆಳಗಾವಿ ನಿವಾಸಿಗರನ್ನು ಕಾಡುತ್ತಿದೆ
ಬೆಳಗಾವಿ ನಗರ ಈಗ ಎರಡನೇಯ ರಾಜಧಾನಿಯಾಗುವತ್ತ ದಾಪುಗಾಲು ಹಾಕುತ್ತಿದೆ ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಬೆಳಗಾವಿ ಹೆಸರು ಬಂದಿದೆ ಇಂತಹ ಸಂಧರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರದಲ್ಲಿ ಹಂದಿ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವದು ಅತ್ಯಗತ್ಯವಾಗಿದೆ
ಎರಡು ವರ್ಷದ ಹಿಂದೆ ಪಾಲಿಕೆ ಅಧಿಕಾರಿಗಳು ಹಂದಿ ಸಾಕುವವರ ಹಂದಿ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರು ಈ ಸಂದರ್ಬದಲ್ಲಿ ಹಂದಿ ಸಾಕುವವರ ದೊಡ್ಡ ದಂಡೇ ಪಾಲಿಕೆಗೆ ಆಗಮಿಸಿ ವಿರೋಧ ವ್ಯಕ್ತ ಪಡಿಸಿತ್ತು
ಆದರೆ ದಿನಗಳದಂತೆ ಗೌಡರ ಕುದುರೆ ಕತ್ತೆ ಆಯಿತು ಎನ್ನುವಂತೆ ಹಂದಿ ಸಾಕುವವರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಪಾಲಿಕೆ ಅಧಿಕಾರಿಗಳು ಕೂಡಲೇ ಹಂದಿ ಸಾಕುವವರ ಸಭೆ ಕರೆದು ನಗರದಲ್ಲಿ ಹಂದಿ ಮರಿಗಳನ್ನು ಬಿಡದಂತೆ ಕ್ರಮ ಕೈಗೊಳ್ಳದಿದ್ದರೆ ಬೆಳಗಾವಿ ನಗರದಲ್ಲಿ ಹಂದಿ ಮಂದಿ ಇಬ್ಬರೂ ಕೂಡಿ ಬಾಳಬೇಕಾದ ದಿನಗಳು ದೂರ ಉಳದಿಲ್ಲ
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …