Breaking News

ಮಹಾದಾಯಿ ಮದ್ಯಸ್ಥಿಕೆಗೆ ಪ್ರಧಾನಿ ಮುಂದಾಗುವಂತೆ ಜೆಡಿಎಸ್ ಆಗ್ರಹ

ಬೆಳಗಾವಿ / ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಯಾಗಿರುವ ಕಳಸಾ ಬಂಡೂರಿ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ಯವರು ಮದ್ಯಸ್ಥಿಕೆ ವಹಿಸಿ ಬಗೆಹರಿಸಬೇಕೇಂದು ಆಗ್ರಹಿಸಿ ಪ್ರಧಾನಿಗೆ ಮನವಿ ನೀಡಲು ಹೊರಟಿದ್ದ ಜೆಡಿಎಸ್ ಮುಖಂಡರನ್ನು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೋಲಿಸರು ಬಂದಿಸಿದರು

.ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಜೆಡಿಎಸ್ ಜಿಲ್ಲಾದ್ಯಕ್ಷ ಪಿ ಎಫ್ ಪಾಟೀಲ ಹಾಗೂ ಜಿಪಂ ಸದಸ್ಯ ಶಂಕರ ಮಾಡಲಗಿ ಪ್ರಧಾನಿ ಭೇಟಿಗೆ ಅವಕಾಶ ನೀಡುವಂತೆ ಜಿಲ್ಲಾಡಳಿತ ಹಾಗೂ ಬಿಜೆಪಿ ಸಂಸದರಲ್ಲಿ ಮನವಿ ಮಾಡಿಕೊಂಡಿದ್ದರು ಆದರೆ ಬಿಜೆಪಿ ನಾಯಕರಿಂದ ಯಾವದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಪಕ್ಷದ ಕಾರ್ಯಾಲಯದಲ್ಲಿ ಸಭೆ ಸೇರಿದ ಮುಖಂಡರು ಕಪ್ಪು ಪಟ್ಟಿ ಧರಿಸಿ ಸಮಾವೇಶ ನಡೆಯುವ ಸ್ಥಳಕ್ಕೆ ತೆರಳಿ ಮನವಿ ಸಲ್ಲಿಸಲು ನಿರ್ದರಿಸಿದ್ದರು . ಮದ್ಯಾನ್ಹ 1ಗಂಟೆಗೆ ವಂದನಾ ಪ್ಯಾಲೇಸ ನಿಂದ ಕಾಲ್ನಡಿಗೆಯಲ್ಲಿಯೇ ಸಮಾವೇಶ ಸ್ಥಳಕ್ಕೆ ಹೊರಟ 200 ಕ್ಕೂ ಹೆಚ್ಚಿನ ಜೆಡಿಎಸ್ ಕಾರ್ಯಕರ್ತರನ್ನು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೋಲಿಸರು ವಶಕ್ಕೆ ಪಡೆದರು . ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯರ ಶಂಕರ ಮಾಡಲಗಿ ಸಂಸದ ಸುರೇಶ ಅಂಗಡಿ ಹಾಗೂ ರಾಜ್ಯ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು. ಜಿಲ್ಲಾದ್ಯಕ್ಷ ಪಿ ಎಫ್ ಪಾಟೀಲ, ಗಿರೀಶ ಗೋಕಾಕ. ವಕ್ತಾರ ಶ್ರೀಶೈಲ ಫಡಗಲ್, ಸುನೀತಾ ಹೊನಕಾಂಬಳೆ. ಶಾಂತಾ ಸುರೇಂದ್ರ.ಗುರು ಹುಳ್ಳೇರ.ಶಿವಾನಂದ ಸಂಜೀವಗೋಳ ಸೋನವಾಲಕರ, ಮುಂತಾದವರು ಉಪಸ್ಥಿತರಿದ್ದರು

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *