ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಮಾಜಿ ಮಂತ್ರಿ ,ಮೀಸೆ ಮಾವ ,ವರ್ಕರ್ ಪ್ರಕಾಶ್ ಹುಕ್ಕೇರಿ,ಈಗ ಬಿಜೆಪಿ ಗೆಲ್ಲಿಸುವ ಹೆಳಿಕೆ ನೀಡಿದ್ದು,ಅವರ ಪರಿಸ್ಥಿತಿ ಈಗ ಲುಕಿಂಗ್ ಲಂಡನ್ ಟಾಕಿಂಗ್ ಟೋಕಿಯೋ ಎನ್ನುವಂತಾಗಿದೆ.
ಈ ಹಿಂದೆ ಮಂತ್ರಿಯಾಗಿದ್ದಾಗ,ರಾಜೀನಾಮೆ ನೀಡಿ,ನಂತರ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಿ ಗೆದ್ದು ಬಂದಿದ್ದ ಪ್ರಕಾಶ್ ಹುಕ್ಕೇರಿ,ಈಗ ಹುದ್ದೆ ಇಲ್ಲದ ನಾಯಕ,ರಾಜಕೀಯ ಕಿತ್ತಾಟದಿಂದ ದೂರ ಉಳಿದಿರುವ ಅವರು ಈಗ ಏಕಾ ಏಕಿ,ನಾನು ಸುರೇಶ್ ಅಂಗಡಿ ಅವರ ಕುಟುಂಬದವರನ್ನು ಗೆಲ್ಲಿಸುತ್ತೇನೆ ,ಕಾಂಗ್ರೆಸ್ ಹೈಕಮಾಂಡ್ ಏನು ಮಾಡುತ್ತೋ ಮಾಡಲಿ ಎಂದು ಹೊಸ ಬಾಂಬ್ ಸಿಡಿಸಿ,ನಾನು ಬಿಜೆಪಿಗೆ ಹೋಗಲು ಸಿದ್ಧ,ಕಾಂಗ್ರೆಸ್ ಟಿಕೆಟ್ ಕೊಟ್ರೆ ಸ್ಪರ್ದೆ ಮಾಡಲು ಸಿದ್ಧ ಎನ್ನುವ ಖಡಕ್ ಸಂದೇಶ ನೀಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪ್ರಕಾಶ್ ಹುಕ್ಕೇರಿ ಅವರಿಗೆ ಬೆಳಗಾವಿಯಲ್ಲಿ ಅವಕಾಶ ಇಲ್ಲ,ಅವರದೇನಿದ್ರೂ ಚಿಕ್ಕೋಡಿ ಕ್ಷೇತ್ರದಲ್ಲಿ ಎನ್ನುವ ಉತ್ತರ ನೀಡಿದ್ದಾರೆ.
ಬೆಳಗಾವಿ ಲೋಕಸಭಾ ಉಪಚುನಾವಣೆ ಘೋಷಣೆ ಆಗಬೇಕಿದೆ ,ಬಿಜೆಪಿಯಲ್ಲಿ,ಬಹುತೇಕ ಎಲ್ಲ ಜಿಲ್ಲಾ ಮಟ್ಟದ ಪದಾಧಿಕಾರಿಗಳು,ಆಕಾಂಕ್ಷಿಗಳಾಗಿದ್ದಾರೆ,ಕಾಂಗ್ರೆಸ್ಸಿನ ಅಭ್ಯರ್ಥಿ ಯಾರಾಗಬಹುದು ಎನ್ನುವ ಚರ್ಚೆ ಈಗ ಶುರುವಾಗಿದೆ.ಪ್ರಕಾಶ್ ಹುಕ್ಕೇರಿ ಅವರು ಈಗ ನಾನೂ ಆಕಾಂಕ್ಷಿ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನಲ್ಲಿ ಹೊಸ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಪ್ರಕಾಶ್ ಹುಕ್ಕೇರಿ ವರ್ಕರ್ ಎಂದೇ ಪರಿಚಿತರು,ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ಒತ್ತಾಯ ಶುರುವಾಗಿದೆ.
ಆದ್ರೆ ಕಾಂಗ್ರೆಸ್ ಅವರಿಗೆ ಟಿಕೆಟ್ ಕೊಡುತ್ತೋ ? ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೋ ? ಎನ್ನುವದನ್ನು ಕಾದು ನೋಡಬೇಕು ,ಆದ್ರೆ ಈಗ ಸದ್ಯ ಪ್ರಕಾಶ್ ಹುಕ್ಕೇರಿ ಅವರ ಪರಿಸ್ಥಿತಿ ಲುಕಿಂಗ್ ಲಂಡನ್.. ಟಾಕಿಂಗ್ ಟೋಕಿಯೋ ಎನ್ನುವಂತಾಗಿದೆ.