Breaking News

ಶಿಕ್ಷಕರ ಮತಕ್ಷೇತ್ರದಿಂದ ಪ್ರಕಾಶ್ ಹುಕ್ಕೇರಿ ಗೆಲುವು

 

*ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಭರ್ಜರಿ ಜಯಭೇರಿ*

*ಎರಡನೇ ಸುತ್ತಿನ ಮತ‌ಎಣಿಕೆಯಲ್ಲಿ ಗೆಲುವಿನ ಕೋಟಾ ತಲುಪಿದ ಪ್ರಕಾಶ್ ಹುಕ್ಕೇರಿ*

20 ಸಾವಿರ ಮತಗಳ ಎಣಿಕೆ ಪೂರ್ಣ

*20,000 ಮತಗಳ ಪೈಕಿ 10,520 ಮತ ಪಡೆದ ಪ್ರಕಾಶ ಹುಕ್ಕೇರಿ*

6008 ಮತ ಪಡೆದ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್

*4512 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ ಪ್ರಕಾಶ್ ಹುಕ್ಕೇರಿ*

ಇನ್ನೂ 1400 ಮತಗಳ ಮತ ಎಣಿಕೆ ಬಾಕಿ

ಪ್ರಕಾಶ ಹುಕ್ಕೇರಿ ಎಸ್.ಎಸ್.ಎಲ್.ಸಿ ಫೇಲಾದ್ರೂ ರಾಜಕೀಯದಲ್ಲಿ ಫೇಲಾಗಿಲ್ಲ!*

ಫೈನಲ್ ಫಲಿತಾಂಶ

ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್‌ಗೆ ಹೀನಾಯ ಸೋಲು.
*5091ಮತಗಳ ಅಂತರಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಭರ್ಜರಿ ಗೆಲವು*
ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್‌ಗೆ 6361 ಮತಗಳು.
ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ 11452ಮತಗಳು.
ಎರಡನೇ ಬಾರಿ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರಕಾಶ್ ಹುಕ್ಕೇರಿ.

ಬೆಳಗಾವಿ-ಶಿಕ್ಷಕ ಅಲ್ಲದಿದ್ದರೂ ಶಿಕ್ಷಕರ ಪರವಾಗಿ ವಾಯುವ್ಯ ಕ್ಷೇತ್ರದ ಶಿಕ್ಷಕರ ಕ್ಷೇತ್ರದಿಂದ ಹಿರಿಯ ರಾಜಕಾರಣಿ, ಪ್ರಗತಿಯ ಹರಿಕಾರ ಪ್ರಕಾಶ ಹುಕ್ಕೇರಿ ಅವರು ಸ್ಪರ್ಧಿಸಿದಾಗ ಪ್ರತಿಪಕ್ಷದವರು “ಮುದಿಎತ್ತು”, ” ಎಸ್.ಎಸ್. ಎಲ್.ಸಿ. ಫೇಲಾದವರು” ಎಂದು ವೈಯಕ್ತಿಕವಾಗಿ ಅವಮಾನಿತ ಪದಗಳನ್ನು ಬಳಸಿ, ಮತದಾರರಲ್ಲಿ ಕೀಳು ಅಭಿರುಚಿ ಮೂಡಿಸಲು ಪ್ರಯತ್ನಿಸಿದರು. ಆದರೆ, ಜನ ಸೇವೆಯ ಮೂಲಕ ಮನೆ ಮಾತಾಗಿರುವ ಪ್ರಕಾಶ ಹುಕ್ಕೇರಿ ಅವರು ಸತತ ಏಳುಬಾರಿ ವಿಧಾನ ಸಭೆಯ ಮುಂದಿನ ಬಾಗಿಲಿನಿಂದ ಚುಣಾಯಿತರಾದ ವೀರ.

ರಾಜಕೀಯ ಏರುಪೇರುಗಳನ್ನು ಕಂಡುಂಡು ಏಕಾಂಕಿಯಾಗಿ ಎದೆಹೊಟ್ಟು ರಾಜಕೀಯ ಸಮರ ನಡೆಸಿ ಅನುಭವ ಪಡೆದ ಪ್ರಕಾಶ ಹುಕ್ಕೇರಿ ಅವರು, ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಸೋಲು ಅನುಭವಿಸುವುದ ಖಚಿತ ಎಂದು ವೈಯಕ್ತಿಕವಾಗಿ ದಾಳ ಮಾಡಿ ಅವಮಾನಿಸಿದರೂ ಪ್ರಜ್ಞಾವಂತ ಮತದಾರರು ಜನಸ್ಮೇಹಿ, ಅಭಿವೃದ್ಧಿ ಹರಿಕಾರನನ್ನು ಕೈಬಿಡಲಿಲ್ಲ. ಆ ಮೂಲಕ ಪ್ರಕಾಶ ಹುಕ್ಕೇರಿಯವರನ್ನು ರಾಜಕೀಯದಲ್ಲಿ ಮತ್ತೊಮ್ಮೆ ಗೆಲ್ಲಿಸಿ ಪಾಸು ಮಾಡಿದ್ದಾರೆ.

ಅಕ್ಷರ ಜ್ಞಾನಕ್ಕಿಂತ ಜನ ಸೇವೆಯ ಪ್ರಾಮಾಣಿಕ ಅನುಭವ ಮುಖ್ಯ ಎಂಬುದನ್ನು ಮತದಾರರು ಹುಕ್ಕೇರಿ ಪರವಾಗಿ ಕಡಕ್ ಉತ್ತರ ನೀಡಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *