Breaking News
Home / Breaking News / ಸಂತೋಷ್ ನಾಯಕ ಕೊಲೆ ಪ್ರಕರಣ ಆರೋಪಿಗಳನ್ನು ಬಂಧಿಸದಿದ್ದರೆ ಚರ್ಚಗೆ ಬೆಂಕಿ ಹಚ್ತೀವಿ- ಪ್ರಮೋದ ಮುತಾಲಿಕ ಎಚ್ಚರಿಕೆ

ಸಂತೋಷ್ ನಾಯಕ ಕೊಲೆ ಪ್ರಕರಣ ಆರೋಪಿಗಳನ್ನು ಬಂಧಿಸದಿದ್ದರೆ ಚರ್ಚಗೆ ಬೆಂಕಿ ಹಚ್ತೀವಿ- ಪ್ರಮೋದ ಮುತಾಲಿಕ ಎಚ್ಚರಿಕೆ

ಬೆಳಗಾವಿ- ಹೀರೇಬಾಗೇವಾಡಿಯಲ್ಲಿ ಗೋಪ್ರೇಮಿ ಶಿವು ಉಪ್ಪಾರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಮಂಧಿಸಿದಂತೆ ಶಿವು ಉಪ್ಪಾರ ಆರೋಪಿಸಿದ್ದ ವ್ಯಕ್ತಿಯ ವಿಚಾರಣೆ ಇನ್ನೂ ನಡೆಸಿಲ್ಲ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಪೋಲೀಸರ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯೆಕ್ತ ಡಿಸಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಶಿವು ಉಪ್ಪಾರ ಕೊಲೆ ಪ್ರಕರಣ ನಡೆದು ಒಂಬತ್ತು ತಿಂಗಳಾದರೂ ಕ್ರಮ ಕೈಗೊಂಡಿಲ್ಲ ಪೊಲೀಸರು ಕಾಲಹರಣ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು
ತಕ್ಷಣ ಕೊಲೆ ಆರೋಪಿಗಳನ್ನ ಬಂಧಿಸುವಂತೆ ಪ್ರಮೋದ್ ಮುತಾಲಿಕ್ ಆಗ್ರಹಪಡಿಸಿದರು.

ಶಿವು ಉಪ್ಪಾರ ಕೊಲೆ ಬಗ್ಗೆ ತನಿಖೆಗೆ ರಾಜ್ಯದ ಎಲ್ಲಾ ಕಡೆಯಲ್ಲಿ ಧರಣಿ ನಡೆಸಲಾಗಿದೆ ಈವರೆಗೆ ಸೂಕ್ತ ತನಿಖೆಯನ್ನು ಪೊಲೀಸ್ ಇಲಾಖೆ ನಡೆಸಿಲ್ಲ ಶಿವು ಉಪ್ಪಾರಗೆ ದಮ್ಕಿ ಹಾಕಿದ ವ್ಯಕ್ತಿಯ ವಿಚಾರಣೆ ನಡೆದಿಲ್ಲ 9 ತಿಂಗಳಿಂದ ಪ್ರಕರಣದ ‌ಯಾವುದೇ ತನಿಖೆ ಆಗಿಲ್ಲ,15 ದಿನದಲ್ಲಿ ತನಿಖೆ ಮಾಡಬೇಕು ಇಲವಾದಲ್ಲಿ ನಾವೇ ಆರೋಪಿಗಳನ್ನು ಒದ್ದು ಪೊಲೀಸ್ ಠಾಣೆಗೆ ತರುತ್ತೇವೆ ಎಂದು ಪ್ರಮೋದ ಮುತಾಲಿಕ್
ಬೆಳಗಾವಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡೀದ್ದಾರೆ.

ಪೀರನವಾಡಿಯ ಹೋಪ್ಸ್ ರಿಕವರಿ ಸೆಂಟರ್‌ ಇರುವ ಚರ್ಚ್‌ನಲ್ಲಿ ಸಂತೋಷ್ ನಾಯಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ
ಶೌಚಾಲಯದಲ್ಲಿ ಟಾವೆಲ್‌ನಿಂದ ನೇಣುಬಿಗಿದ ಸ್ಥಿತಿಯಲ್ಲಿ ಶವಪತ್ತೆಯಾಗಿದೆ ವ್ಯವಸ್ಥಿತವಾಗಿ ಸಂತೋಷ್ ನಾಯಕ್ ಕೊಲೆ ನಡೆದಿದೆ ಎಂಬ ಸಂಶಯವಿದೆ ಈ ಕೊಲೆ ಬಗ್ಗೆ ತನಿಖೆ ಮಾಡಿ 15 ದಿನಗಳೊಳಗಾಗಿ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದರೆ ಚರ್ಚ್‌ಗೆ ಬೆಂಕಿ ಹಚ್ತೀವಿ ಎಂದ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

*15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ರೆ ಕಾನೂನು ಕೈಗೆ ತಗೆದುಕೊಳ್ಳಬೇಕಾಗುತ್ತೆ*ಎಂದು ಬೆಳಗಾವಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

Check Also

ಜೈ..ಜಗದೀಶ್ ಹರೇ..ಶೆಟ್ಟರ್ ಮಂತ್ರಿ ಆಗೋದು ಖರೇ…!!

ಬೆಳಗಾವಿ- ಜಗದೀಶ್ ಶೆಟ್ಟರ್ ಅವರಿಗೆ ಭರ್ಜರಿಯಾಗಿ ಬೆಳಗಾವಿಯ ಜನ ಗೆಲ್ಲಿಸಿದ್ದಾರೆ‌. ಶೆಟ್ಟರ್ ಅವರಿಗೆ ಬೆಳಗಾವಿ ಲಕ್ಕಿ ಯಾಕಂದ್ರೆ ಬೆಳಗಾವಿಯಿಂದ ಗೆದ್ದಿರುವ …

Leave a Reply

Your email address will not be published. Required fields are marked *