ಬೆಳಗಾವಿ- ಈ ಬಾರಿ ಕನ್ನಡದ ಹಬ್ಬ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬ ಎರಡೂ ಹಬ್ಬಗಳು ಒಂದೇ ದಿನ ಅಂದ್ರೆ ನವೆಂಬರ್ 1 ರಂದೇ ನಡೆಯಲಿವೆ.
ನವೆಂಬರ್ 1 ರಂದು ದೀಪಾವಳಿ ಹಬ್ಬದ ಅಮವಾಸ್ಯೆಯ ದಿನ ನವೆಂಬರ್ ಎರಡರಂದು ದೀಪಾವಳಿ ಹಬ್ಬದ ಪಾಡ್ಯ ಹೀಗಾಗಿ ನವೆಂಬರ್ 1 ರಂದು ದೀಪಾವಳಿ ಹಬ್ಬ ಇರುವದರಿಂದ ರಾಜ್ಯೋತ್ಸವದ ಮೆರವಣಿಗೆಯನ್ನು ಮುಂದೂಡಬೇಕೋ ಅಥವಾ ಅದೇ ದಿನ ರಾಜ್ಯೋತ್ಸವದ ಮೆರವಣಿಗೆಯನ್ನು ನಡೆಸಬೇಕೋ ಎನ್ನುವದನ್ನು ಚರ್ಚಿಸಲು ಬೆಳಗಾವಿ ಜಿಲ್ಲಾಧಿಕಾರಿಗಳು ತುರ್ತು ಸಭೆ ನಡೆಸುವಂತೆ ಮನವಿ ಮಾಡಿಕೊಳ್ಳಲು ಬೆಳಗಾವಿಯ ವಿವಿಧ ಕನ್ನಡಪರ ಸಂಘಟನೆಗಳ ಹೋರಾಟಗಾರರು ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ನವೆಂಬರ್ 1 ರಂದು ದೀಪಾವಳಿ ಹಬ್ಬದ ಅಮವಾಸ್ಯೆ ಇರುತ್ತದೆ ಈ ದಿನ ರಾಜ್ಯೋತ್ಸವದ ಧ್ವಜಾರೋಹಣ ಮಾಡಿ ನಂತರ ಮೆರವಣಿಗೆಯನ್ನು ನವೆಂಬರ್ 3 ರಂದು ನಡೆಸಬೇಕು ಎನ್ನುವ ಚಿಂತನೆ ನಡೆದಿದೆ. ಬೆಳಗಾವಿ ರಾಜ್ಯೋತ್ಸವದ ಮೆರವಣಿಗೆ ನೋಡಲು ನಾಡಿನ ಮೂಲೆಗಳಿಂದ ಲಕ್ಷಾಂತರ ಜನ ಬೆಳಗಾವಿಗೆ ಬರುತ್ರಾರೆ.ಈ ದಿನ ದೀಪಾವಳಿ ಹಬ್ಬ ಇರುವದಿರಿಂದ ರಾಜ್ಯೋತ್ಸವ ನೋಡಲು ಬೆಳಗಾವಿಗೆ ಬರುವ ಕನ್ನಡದ ಅಭಿಮಾನಿಗಳಿಗೆ ಅನಾನುಕೂಲ ಆಗುತ್ತದೆ ಹೀಗಾಗಿ ರಾಜ್ಯೋತ್ಸವದ ಮರೆವಣಿಗೆ ನವೆಂಬರ್ 1 ರ ಬದಲಾಗಿ ನವೆಂಬರ್ 3 ರಂದು ನಡೆಸುವ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಚರ್ಚಿಸಿ ಅಂತಿಮ ತೀರ್ಮಾಣ ಕೈಗೊಳ್ಳಲು ಕನ್ನಡಪರ ಸಂಘಟನೆಗಳ ನಿಯೋಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಲಿದೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಸಿಕ್ಕಿದೆ.
ತೀರ್ಮಾಣ ಏನೇ ಆಗಲಿ ಈಬಾರಿ ಕನ್ನಡದ ಹಬ್ಬ ಮತ್ತು ದೀಪಾವಳಿ ಹಬ್ಬ ಎರಡೂ ಒಂದೇ ದಿನ ಬಂದಿವೆ ಹೀಗಾಗಿ ಒಂದೇ ದಿನ ಡಬಲ್ ಖುಷಿ.