ರಮೇಶ್ ಜಾರಕಿಹೊಳಿ ಅವರಿಂದ ಲಕ್ಷ್ಮೀ ದರ್ಶನ
ಬೆಳಗಾವಿ-
ಗೋಕಾಕ ಸಾಹುಕಾರ್ ರಮೇಶ್ ಜಾರಕಿಹೊಳಿ ಬೆಳ್ಳಂ ಬೆಳಿಗ್ಗೆ ಟೆಂಪಲ್ ರನ್ ನಡೆಸಿದರು ನಿಗದಿತ ಸಮಯದ ಮೊದಲೇ ಲಕ್ಷ್ಮೀ ದೇವಿಯ ದರ್ಶನ ಪಡೆದು ಗೋಕಾಕ್ ಕ್ಷೇತ್ರದಲ್ಲಿ ಮತಭೇಟೆ ಆರಂಭಿಸಿದರು
ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ರಮೇಶ ಜಾರಕಿಹೊಳಿಯಿಂದ ಟೆಂಪಲ್ ರನ್.ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಲಾಯಿತು
ಮತಬೇಟೆಗೂ ಮುನ್ನ ಗ್ರಾಮದೇವತೆ ಮೋರೆ ಹೋದ ರಮೇಶ ಜಾರಕಿಹೊಳಿ.ಗೋಕಾಕದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾದರು
ಇಂದು ಗೋಕಾಕ ತಾಲೂಕಿನ 10 ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು ಒಂದು ಬೆಣಚಿನಮರಡಿ, ಮಾಲದಿನ್ನಿ, ಉಪ್ಪಾರಟ್ಟಿ, ಮಮದಾಪುರ ಸೇರಿ ಹಲವು ಗ್ರಾಮದಲ್ಲಿ ಮತಬೇಟೆಯಾಡಿದರು
ಬೆಳಿಗ್ಗೆ ,8 ಘಂಟೆಗೆ ಗ್ರಾಮದೇವತೆಯ ಪೂಜೆ ನಿಗದಿಯಾಗಿತ್ತು ಆದರೆ ರಮೇಶ್ ಜಾರಕಿಹೊಳಿ ಬೆಳಿಗ್ಗೆ 7-30 ಘಂಟೆಗೆ ದೇವಿಯ ದರ್ಶನ ಪಡೆದು ಮಾದ್ಯಗಳ ಪ್ರಶ್ನೆ ಗಳಿಂದ ತಪ್ಪಿಸಿಕೊಂಡರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ