ಬೆಳಗಾವಿ- ನಗರದ ರವಿವಾರ ಪೇಟೆಯ ಪ್ರಸಿದ್ಧ ವ್ಯಾಪಾರಿ ಸುರೇಶ ಹಿಡದುಗ್ಗಿ ತಮ್ಮ ಮನೆಯ ಗ್ಯಾಲರಿಯಿಂದ ಕಾಲು ಜಾರಿ ಬಿದ್ದು ಸಾವನ್ನೊಪ್ಪಿದ ಘಟನೆ ನಡೆದಿದೆ
ಬಸವಣ್ಣ ಗಲ್ಲಿಯ ನಿವಾಸಿ ೫೫ ವರ್ಷ ವಯಸ್ಸಿನ ಸುರೇಶ ಹಿಡದುಗ್ಗಿ ಮಧ್ಯರಾತ್ರಿ ಮನೆಯ ಗ್ಯಾಲರಿಯಲ್ಲಿ ಕುಳಿತಿರುವಾಗ ಆಯತಪ್ಪಿ ಜಾರಿ ಬಿದ್ದಿದ್ದಾರೆ ಎಂದು ಕೆಲವರು ಹೇಳಿಕೊಂಡಿದ್ದಾರೆ ಅತ್ಯಂತ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮದ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ
ರವಿವಾರ ಪೇಠೆಯ ಪ್ರಸಿದ್ದ ಕಿರಾಣಿ ವ್ಯಾಪಾರಿಯಾಗಿದ್ದ ಅವರು ನಿನ್ನೆ ರಾತ್ರಿ ಕಾವು ಹೆಚ್ಚಾದ ಹಿನ್ನಲೆಯಲ್ಲಿ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದರು ಅವರು ಕಟ್ಟಡದ ಮೇಲಿಂದ ಕೆಳಗೆ ಬಿದ್ದ ಸದ್ದು ಕೇಳಿದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳು ಇದನ್ನು ನೋಡಿ ನೆರೆಹೊರೆಯವರಿಗೆ ತಿಳಿಸಿದ್ದಾಳೆ
ಸುರೇಶ ಹಿಡದುಗ್ಗಿ ಅವರ ಸಾವು ಸಹಜ ಸಾವು ಅಥವಾ ಆತ್ಮಹತ್ಯೆಯೋ ಅನ್ನೋದು ನಿಗೂಢವಾಗಿದೆ ಖಡೇಬಝಾರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ