ಬೆಳಗಾವಿ-ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರಿಗೆ ಚಿಹ್ನೆಯ ಸಮಸ್ಯೆ ಎದುರಾಗಿದೆ ಐದು ಬಾರಿ ಕೈ ಚಿಹ್ನೆಯಿಂದ ಗೆದ್ದು ಬಂದಿದ್ದು ಈಬಾರಿ ಕಮಲಕ್ಕೆ ಮತ ಹಾಕಿ ಎಂದು ಪ್ರಚಾರ ಮಾಡುವಾಗ ನಮ್ಮ ಸಾಹುಕಾರ್ ಅವರ ಚಿಹ್ನೆ ಹಸ್ತ ಇದೆ ನಿವ್ಯಾಕ ಕಮಲಕ್ಕೆ ಓಟು ಹಾಕ್ರಿ ಅಂತ ಹೇಳ್ತೀರಿ ಎಂದು ಜನ ಪ್ರಶ್ನೆ ಮಾಡುತ್ತಿರುವದರಿಂದ ರಮೇಶ್ ಜಾರಕಿಹೊಳಿ ಅವರು ಕಮಲಕ್ಕೆ ಮತ ಹಾಕುವ ಟ್ರೈನಿಂಗ್ ಕೊಡಲು ನಿರ್ಧರಿಸಿದ್ದಾರೆ.
ಕಮಲ ಹೂವಿನ ಚಿಹ್ನೆಗೆ ಮತ ನೀಡುವಂತೆ ಜನರಿಗೆ ಯುವಕರು ವ ಕೊಡಬೇಕು.
ಖನಗಾಂವ ಗ್ರಾಮದಲ್ಲಿ ಚುನಾವಣಾ ಪ್ರಚಾರ ವೇಳೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ
ಕಳೆದ ಐದು ಬಾರಿ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದೆ.
ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದು ನಮ್ಮ ಚಿಹ್ನೆ ಕಮಲ ಹೂವಿನ ಚಿತ್ರ ಇದೆ.
ನಿಮ್ಮ ತಲೆಯಲ್ಲಿ ಸಾಹುಕಾರ್ ಅಂತಾ ಹೊಗ್ತೇರಿ ನೀವು.
ಅಲ್ಲೊಬ್ಬ ಸಾಹುಕಾರ್ ಅದಾನ ಮತ್ತ ಹೊಸಬ.
ನಮ್ಮ ಜನರಿಗೆ ಟ್ರೈನಿಂಗ್ ಕೊಟ್ಟು ಕಳಿಸುವ ಜವಾಬ್ದಾರಿ ಯುವಕರ ಮೇಲಿದೆ.
ಕಳೆದ 25 ವರ್ಷಗಳಿಂದ ನಮ್ಮ ಬೆರಳು ಕೈ ಅಲ್ಲೇ ಹೋಗಿದೆ.
ಹೀಗಾಗಿ ಜನರಿಗೆ ಟ್ರೈನಿಂಗ್ ಕೊಟ್ಟು ಕಳಿಸಬೇಕು ಎಂದು ರಮೇಶ್ ಜಾರಕಿಹೊಳಿ ಚುನಾವಣಾ ಪ್ರಚಾರ ಸಭೆಗಳಲ್ಲಿ ನನ್ನ ಚಿಹ್ನೆ ಹಸ್ತ ಅಲ್ಲ ನನ್ನ ಚಿಹ್ನೆ ಕಮಲ ಎನ್ನುವ ಮಂತ್ರವನ್ನೇ ಜಪಿಸುತ್ತಿದ್ದಾರೆ ರಮೇಶ್ ಜಾರಕಿಹೊಳಿ
2019ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಜನರು ಬಿಜೆಪಿ ಬೆಂಬಲಿಸಿದ್ರು.ದಾಸನಟ್ಟಿ ಗ್ರಾಮದಲ್ಲಿ ನಮ್ಮ ಜನ ಬಿಜೆಪಿಗೆ ಮತಹಾಕುವಂತೆ ಪ್ರಚಾರ ಮಾಡಿದ್ರು.ಆಗ ಕೆಲ ಮಹಿಳೆಯರು ಸಾಹುಕಾರ್ ಚಿಹ್ನೆ ‘ಕೈ’ ಐತಿ ‘ಕಮಲ ಹೂ’ ಅಂತಾ ಏಕೆ ಹೇಳ್ತಿರಿ ಅಂತಾ ಜಗಳ ಮಾಡಿದ್ರು.ಆಮೇಲೆ ತಿಳಿಸಿ ಹೇಳಿ ಬಿಜೆಪಿಗೆ ಮತ ಹಾಕಿಸಿದ್ರು.
ನಮ್ಮ ಕ್ಷೇತ್ರದ ಜನ ತಲ್ಯಾಗ ಇದು ಕುಂತುಬಿಟ್ಟಿದೆ.
ಹೂವು ಚಿಹ್ನೆ ಇರುವ ಸಾಹುಕಾರ್‌ಗ ಮತ ಹಾಕುವಂತೆ ತಿಳಿಸಿ ಹೇಳಿ ಎಂದು ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡರು
ನಮ್ಮ ವಿರೋಧಿಗಳು ಅನರ್ಹರು, ನೈತಿಕತೆ ಇಲ್ಲ ಅಂತಾ ಅಪಮಾನ ಮಾಡ್ತಿದಾರೆ.ಪ್ರಚಂಡ ಬಹುಮತದಿಂದ ಆರಿಸಿ ತಂದು ಅವರಿಗೆ ಉತ್ತರ ಕೊಡಬೇಕು.ಖನಗಾಂವ ಗ್ರಾಮದ ಚುನಾವಣಾ ಪ್ರಚಾರ ವೇಳೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ