ಹೆಲಿಕಾಪ್ಟರ್ ಮೂಲಕ ರವಿವಾರ ಗೋಕಾಕಿಗೆ ರಮೇಶ್ ಜಾರಕಿಹೊಳಿ….!!
ಬೆಳಗಾವಿ- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಮಾಡಿದ ಸಂಕಲ್ಪವನ್ನು ಈಡೇರಿಸಿ ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ರಮೇಶ್ ಜಾರಕಿಹೊಳಿ ರವಿವಾರ ಹೆಲಿಕಾಪ್ಟರ್ ಮೂಲಕ ಗೋಕಾಕಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ರವಿವಾರ ಬೆಳಿಗ್ಗೆ ಗೋಕಾಕಿಗೆ ಆಗಮಿಸುವ ಅವರು ತಂದೆ,ತಾಯಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನಗಳನ್ನು ಸಲ್ಲಿಸಿ ಆಶಿರ್ವಾದ ಪಡೆಯಲಿದ್ದಾರೆ
ನಂತರ ಅಭಿಮಾನಿ ಕಾರ್ಯಕರ್ತರನ್ನು ಭೇಟಿಯಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಮಾನ ನಿಲ್ಧಾಣಕ್ಕೆ ಆಗಮಿಸಿ ವಿಮಾನ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ
ಸೋಮವಾರ ಖಾತೆ ಹಂಚಿಕೆ ನಡೆಯಲಿದ್ದು ಖಾತೆ ಹಂಚುವ ಜವಾಬ್ದಾರಿಯನ್ನು ಸಿಎಂ ಯಡಿಯೂರಪ್ಪ ಅವರ ಉತ್ತರಾಧಿಕಾರಿ ವಿಜಯೇಂದ್ರ ಅವರು ನಿಭಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ