ಬೆಳಗಾವಿ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ, ಶ್ರೀಶೈಲ ಮಠದ ಸಂಘದ ಅದ್ಯಕ್ಷ

ಬೆಳಗಾವಿ : ಇಂದಿನ ದಿನಗಳಲ್ಲಿ ಕಿರಿಯ ಪತ್ರಕರ್ತರಿಗೆ ಹಿರಿಯ ಪತ್ರಕರ್ತರು ನೈಜ ವರದಿಗಳ ಬರವಣಿಗೆಯ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.

ಅವರು ಶುಕ್ರವಾರ ನಗರದ ವಾರ್ತಾ ಭವನದಲ್ಲಿ ನಡೆದ ಬೆಳಗಾವಿ ಪತ್ರಕರ್ತರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಪತ್ರಕರ್ತರ ಸಂಘದಿಂದ ವಿವಿದ ಸಮಾಜದ ಮುಖಂಡರ, ಹಿರಿಯರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ.  ಸಂಘಟನೆ ಎನ್ನುವುದು ಸಮಾಜ, ಸರ್ಕಾರ ಹಾಗೂ ಮಾಧ್ಯಮದ ಕೊಂಡಿಯಾಗಿ ಉತ್ತಮ ವೇದಿಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಸಾನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, ಪತ್ರಕರ್ತರ ಕೆಲಸ ಪರಿಶ್ರಮದ ಕೆಲಸವಾಗಿದೆ. ಕಠಿಣ ಸಂದರ್ಭಗಳಲ್ಲಿ ವರದಿಯನ್ನು ಮಾಡುವ ಪತ್ರಕರ್ತರಿಗೆ ಸರ್ಕಾರಗಳ ಅನುಕಂಪ ಕಡಿಮೆ. ಬೇರೆ ಬೇರೆ ಸಂಘಟನೆಗಳಿಗೆ ನೀಡುವ ಅನುಕಂಪವನ್ನು ಸಮಾಜದ ಸೇವೆಯಲ್ಲಿ ತೋಡಗಿರುವ ಪತ್ರಕರ್ತರ ಬಗ್ಗೆ ಸಮಾಜ ಹಾಗೂ ಸರ್ಕಾರಗಳು ಯೋಚಿಸಬೇಕಾಗಿದೆ. ವರದಿಗಾರರಿಗೆ ಗೌರವ ನೀಡಬೇಕು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರು ಕಾರ್ಯಕ್ರಮ ಕುರಿತು ಮಾತನಾಡಿದರು.

ಸಂಘದ ಅಧ್ಯಕ್ಷ ಶ್ರೀಶೈಲ ಮಠದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಯಣ್ಣ ಆರ್.ಸಿ., ಸುನೀಲ ಪಾಟೀಲ, ಮಲ್ಲಿಕಾರ್ಜುನ ಮುಗಳಿ, ಸುರೇಶ ನೇರ್ಲಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಂತಿನಾಥ ಕಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ ವಿಜಾಪೂರ ಸ್ವಾಗತಿಸಿದರು. ಸುನೀತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಕಾಸರಗೋಡ ವಂದಿಸಿದರು.

Check Also

ಬೆಳಗಾವಿ ಮಹಾನಗರದ ಅಪಾಯಕಾರಿ ತಂತಿಗಳ ತೆರವು

  ಗಣೇಶೋತ್ಸವ- ಅಪಾಯಕಾರಿ ವಿದ್ಯುತ್ ತಂತಿಗಳ ತೆರವು; ಮಾರ್ಗಗಳ ಎತ್ತರ ಹೆಚ್ಚಳ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ, -ಗಣೇಶೋತ್ಸವ ಹಿನ್ನೆಲೆಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.