Breaking News

ಇಪ್ಪತ್ತು ವರ್ಷದಲ್ಲಿ ಸತೀಶ್ ಮಾಡದ ಕೆಲಸವನ್ನು ಎರಡೇ ವರ್ಷದಲ್ಲಿ ಮಾಡಿ ತೋರಿಸಿದ್ದೇನೆ- ರಮೇಶ್ ಜಾರಕಿಹೊಳಿ

ಬೆಳಗಾವಿ-ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಗೋಕಾಕಿಗೆ ಆಗಮಿಸಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ,ನನಗೆ ಬಂದ ಸಂಕಷ್ಟ ವೈರಿಗೂ ಬರಬಾರದು,ರಾಜಕೀಯದಲ್ಲಿ ನಾವು ನಡೆದಿದ್ದೇ ದಾರಿ ಅಂದುಕೊಂಡರೆ ತಪ್ಪು ಸಂಜಯ ಪಾಟೀಲ ವಿಷಯದಲ್ಲಿ ನಾನು ತಪ್ಪು ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಅದನ್ನು ಸರಿ ಪಡಿಸುತ್ತೇನೆ,ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ.ಅವರು ವಿರೋಧ ಮಾಡದಿದ್ರೆ ಈಷ್ಟೆಲ್ಲಾ ಬೆಳವಣಿಗೆ ನಡೆಯಲು ಸಾದ್ಯವಾಗುತ್ತಿರಲಿಲ್ಲ,ದೇವರ ದಯೆ,ಕ್ಷೇತ್ರದ ಜನರ ಆಶಿರ್ವಾದದಿಂದ ಯಶಸ್ಸು ಸಿಕ್ಕಿದೆ ಎಂದರು.

ಪ್ರಮಾಣ ವಚನ ಸ್ವೀಕರಿಸುವಾಗ ಮೂಡ್ ಇರಲಿಲ್ಲ,ನನ್ನನ್ನು ನಂಬಿದ ಕುಮಟೊಳ್ಳಿ ಮತ್ತು ಇತರರು ಮಂತ್ರಿಯಾಗಲಿಲ್ಲ ಎನ್ನುವ ಕೊರಗು ಇತ್ತು,ಮಹೇಶ್ ಕುಮಟೊಳ್ಳಿ ಅವರು ಒತ್ತಾಯ ಮಾಡಿದ ಕಾರಣ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದೆ,ನಾನು ಮಂತ್ರಿಯಾಗಲು ಬಾಲಚಂದ್ರ ಜಾರಕಿಹೊಳಿ,ಮತ್ತು ಮಹೇಶ್ ಕುಮಟೊಳ್ಳಿ ಕಾರಣ ಎಂದರು

ನಮಗೆ ನೀರಾವರಿ ಖಾತೆಯಾದ್ರು ಸಿಗಲಿ,ಲೈಬ್ರರಿ ಖಾತೆಯಾದ್ರು ಸಿಗಲಿ ನಾನು ಯಡಿಯೂರಪ್ಪ, ಮತ್ತು ಅಮೀತ ಷಾ ಅವರನ್ನು ನಂಬಿದ್ದೇನೆ ಮುಂದೆಯೂ ನಂಬುತ್ತೇನೆ.ಎಂದರು

ಮನೆತನದ ವಿಷಯ ಬಂದಾಗ ನಾವೆಲ್ಲರೂ ದೇ ರಾಜಕೀಯ ಬಂದಾಗ ನಾವೆಲ್ಲಾ ಬೇರೆ,ಬೇರೆ, ಸತೀಶ್ ಜಾರಕಿಹೊಳಿ ಇಪ್ಪತ್ತು ವರ್ಷದಲ್ಲಿ ಮಾಡದ ಕಾರ್ಯವನ್ನು ನಾನು ಎರಡೇ ವರ್ಷದಲ್ಲಿ ನಾನು ಮಾಡಿ ತೋರಿಸಿದ್ದೇನೆ.ರಾಜಕೀಯ ಕ್ಷೇತ್ರದಲ್ಲಿ ಯಾವ ಹೊತ್ತಿನಲ್ಲಿ ಯಾವ ನಿರ್ಣಯ ತೆಗೆದುಕೊಳ್ಳಬೇಕು ಅನ್ನೋದು ಮುಖ್ಯ,ತಾಳ್ಮೆ ಇರಬೇಕು,ನಂಬಿದವರನ್ನು ಕೈಬಿಡಬಾರದು, ನನ್ನನ್ನು ವಿರೋಧಿಸಿದವರು,ನನ್ನವರೇ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡದೇ ಹೊಸ ಅದ್ಯಾಯ ಆರಂಭಿಸೋಣ ಎಂದರು ರಮೇಶ್ ಜಾರಕಿಹೊಳಿ ಹೇಳಿದರು

ನಾನು ಬಿಜೆಪಿ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೇನಿ,ನಾನು ಬಿಜೆಪಿ ಬಿಡುವದಿಲ್ಲ ಎಂದರು

ಅಥಣಿ ಶಾಸಕ ಮಹೇಶ್ ಕುಮಟೊಳ್ಳಿ ಮಾತನಾಡಿ,ರಮೇಶ್ ಜಾರಕಿಹೊಳಿ,ಮತ್ತು ಬಿಜೆಪಿಗೆ ಬರುವ ಮೊದಲು ಕಾಂಗ್ರೆಸ್ ಪಕ್ಷದ ನಾಯಕರಿಗೆ,ಬೆಳಗಾವಿ ವಿಷಯದಲ್ಲಿಹಸ್ತಕ್ಷೇಪ ಮಾಡಬೇಡಿ,ಗೋಕಾಕ್ ಬೆಂಕಿಯ ಚೆಂಡು ಎಂದು ಸೂಕ್ಷ್ಮವಾಗಿ ಹೇಳಿದ್ದೇವು ಆದ್ರೆ ಅವರು ಕೇಳಲಿಲ್ಲ ಹೀಗಾಗಿ ಅನಿವಾರ್ಯವಾಗಿ ಬಿಜೆಪಿಗೆ ಬರಬೇಕಾಯಿತು ,ರಮೇಶ್ ಜಾರಕಿಹೊಳಿ ಅವರಿಗೆ ನೀರಾವರಿ ಖಾತೆಯನ್ನೇ ಕೊಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇವೆ ರಮೇಶ್ ಜಾರಕಿಹೊಳಿ ನೀರಾವರಿ ಮಂತ್ರಿಯಾದರೆ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಮಹೇಶ್ ಕುಮಟೊಳ್ಳಿ ವಿಶ್ವಾಸ ವ್ಯೆಕ್ತಪಡಿಸಿದರು

ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ ,ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ತಾಕತ್ತನ್ನು ರಮೇಶ್ ಜಾರಕಿಹೊಳಿ ತೋರಿಸಿದ್ದಾರೆ ,ಅವರು ಸಚಿವರಾಗಿದ್ದು,ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ನೀರಾವರಿ ಮಾಡುವ ಜೊತೆಗೆ ಮೂಲಭೂತ ಸೌಕರ್ಯಗಳನ್ನು ದೊರಕಿಸಿ ಕೊಡುವ ಮೂಲಕ ಅಭಿವೃದ್ಧಿಯ ಹರಿಕಾರರಾಗಬೇಕು ಅಭಿವೃದ್ಧಿಯ ಮೂಲಕ ಜಿಲ್ಲೆಯ ಜನರ ಋಣ ತೀರಿಸಬೇಕು ಎಂದರು.

ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಗೋಕಾಕಿಗೆ ವಿಶೇಷ ಸ್ಥಾನವಿದೆ,ರಾಜಕೀಯ ಪರಿವರ್ತನೆ ಆರಂಭವಾಗಿದ್ದು ಗೋಕಾಕಿನಿಂದ,ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಸಂಕಲ್ಪ ಮಾಡಿ ಅದನ್ನು ಈಡೇರಿಸಿದ ಗಂಡುಮೆಟ್ಟಿನ ನಾಯಕ ರಮೇಶ್ ಜಾರಕಿಹೊಳಿ ಅವರಾಗಿದ್ದು ನುಡಿದಂತೆ ನಡೆದು ಮಾಡಿದ ಸಂಕಲ್ಪ ವನ್ನು ಈಡೇರಿಸುವ ನಾಯಕತ್ವ ಹೊಂದಿರುವ ರಮೇಶ್ ಜಾರಕಿಹೊಳಿ ಅವರಿಗೆ ನೀರಾವರಿ ಇಲಾಖೆ ಸಿಗಲಿ ಉತ್ತರ ಕರ್ನಾಟಕದ ಬಗ್ಗೆ ಇರುವ ತಾರತಮ್ಯ ನಿವಾರಣೆಯಾಗಲಿ ಎಂದು ಮಹಾಂತೇಶ್ ಕವಟಗಿಮಠ ಹೇಳಿದರು

ಸವದತ್ತಿ ಶಾಸಕ ಆನಂದ ಮಾಮನಿ ಮಾತನಾಡಿ,ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸರ್ಕಾರದ ರಚನಾಮೂರ್ತಿಗಳು,ಸರ್ಕಾರದ ರಚನೆಯಲ್ಲಿ ಮುಖ್ಯ ಪಾತ್ರವಹಿಸಿ ,ರಮೇಶ್ ಜಾರಕಿಹೊಳಿ ರಾಜ್ಯಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ .ರಮೇಶ್ ಜಾರಕಿಹೊಳಿ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿ ಮಾದರಿ ಸಚಿವರಾಗಲಿ ಎಂದು ಹಾರೈಸಿದರು

Check Also

ಮೂವರ ಜೀವ ಉಳಿಸಿದ ಬಾಲಿಕಾಗೆ ಮಿನಿಸ್ಟರ್ ಶಹಬ್ಬಾಶ್….!

  ಬೆಳಗಾವಿ ಟಿಳಕವಾಡಿಯ ಕಾಂಗ್ರೆಸ್ ರಸ್ತೆಯ ಮೊದಲನೇ ರೇಲ್ವೆ ಗೇಟ್ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮೂವರ ಜೀವ ಉಳಿಸಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.