Breaking News

ಸ್ಟೇರಿಂಗ್ ಲಾಕ್ ಆಗಿ ಸೇತುವೇ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿತ್ತು….!!!

ಸ್ಟೇರಿಂಗ್ ಲಾಕ್ ಆಗಿ ಸೇತುವೇ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿತ್ತು….!!!

ಬೆಳಗಾವಿ- ಇಂದು ಬೆಳಗಿನ ಜಾವ ಆ ಬಡಜೀವಿಗಳು ಬದುಕಿನ ಬಂಡಿ ಸಾಗಿಸಲು ಮನೆಯಲ್ಲಿ ಚಹಾ ಕುಡಿದು,ಬುತ್ತಿ ಕಟ್ಟಿಕೊಂಡು ಕಬ್ನು ಕಟಾವು ಮಾಡಲು ಟ್ರ್ಯಾಕ್ಟರ್ ನಲ್ಲಿ ಬೋಗೂರು ಗ್ರಾಮದಿಂದ ಇಟಗಿ ಗ್ರಾಮಕ್ಕೆ ಹೊರಟಿರುವಾಗ ಈ ಟ್ರ್ಯಾಕ್ಟರಿನ ಸ್ಟೇರಿಂಗ್ ಲಾಕ್ ಆಗಿ ಹಳ್ಳಕ್ಕೆ ಬಿದ್ದು ಆರು ಜನ ಕೃಷಿ ಕೂಲಿ ಕಾರ್ಮಿಕರು ಪ್ರಾಣ ಕಳೆದು ಕೊಂಡಿದ್ದಾರೆ.

ಟ್ರ್ಯಾಕ್ಟರ್ ನಲ್ಲಿ ಬರೊಬ್ಬರಿ 23 ಜನ ಪ್ರಯಾಣ ಮಾಡುತ್ತಿದ್ದರು,ಈ ಟ್ರ್ಯಾಕ್ಟರ್ ಬೋಗೂರು ಹಳ್ಳವನ್ನು ದಾಟುವಾಗ,ಸ್ಟೇರಿಂಗ್ ಲಾಕ್ ಆಗಿ ಸೇತುವೆಯ ರಕ್ಷಣಾ ಗೋಡೆಯನ್ನು ಕಿತ್ತುಕೊಂಡು 35 ಅಡಿ ಎತ್ತರದಿಂದ ಹಳ್ಳಕ್ಕೆ ಬಿದ್ದಿದೆ.ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿದ್ದಾರೆ .

ಈ ಭೀಕರ ಅಪಘಾತ ಸಂಭವಿಸುತ್ತಿದ್ದಂತೆ ಅಕ್ಕ ಪಕ್ಕದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರು ಸೇರಿ ಅಂಬ್ಯುಲೆನ್ಸ ದಾರಿ ಕಾಯದೇ ಗಾಯಾಳುಗಳನ್ನು ತಮ್ಮ ವಾಹನಗಳಲ್ಲಿ ಇಟಗಿ ಗ್ರಾಮದ ಆಸ್ಪತ್ರೆಗೆ ಸಾಗಿಸಿದ್ದಾರೆ ನಂತರ ಅಂಬ್ಯುಲೆನ್ಸ ಬಂದ ಬಳಿಕ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಈ ದುರಂತದಲ್ಲಿ ಒಟ್ಟು 23 ಜನರಲ್ಲಿ ಆರು ಜನ ಪ್ರಾಣ ಕಳೆದುಕೊಂಡಿದ್ದಾರೆ,ಹತ್ತು ಜನರ ಸ್ಥಿತಿ ಚಿಂತಾಜನಕವಾಗಿದೆ,ಉಳಿದವರ ಕೈಕಾಲುಗಳಿಗೆ ಪೆಟ್ಟಾಗಿದೆ.

ಮೃತಪಟ್ಟವರೆಲ್ಲರೂ ಬೋಗೂರು ಗ್ರಾಮದವರಾಗಿದ್ದಾರೆ . ಬೋಗೂರ ಹಳ್ಳದ ಪಾತ್ರದಲ್ಲಿ ಸೂತಕದ ಛಾಯೆ ಆವರಿಸಿದೆ ಗ್ರಾಮ ಸ್ಮಶಾನಮೌನವಾಗಿದೆ ,ಮೃತ ಸಮಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ .

ಶೇಖಪ್ಪಾ ಕೆದಾರಿ(38), ಗುಲಾಬೀ ಹುಣಸಿಕಟ್ಟಿ(35), ಶಾಂತವ್ವಾ ಅಳಗೋಡಿ(65), ಶಾಂತವ್ವಾ(63), ನಾಗವ್ವಾ ಮಾತೋಳೆ, ತಂಗೆವ್ವಾ ಹುಣಸಿಕಟ್ಟಿ. ಮೃತ ದುರ್ದೈವಿಗಳಾಗಿದ್ದಾರೆ

Check Also

ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ

ಬೆಳಗಾವಿ- ಪ್ರತಿವರ್ಷ ಕಬ್ಬು ಕಟಾವ್ ಮಾಡುವ ಹಂಗಾಮು ಶುರುವಾದ್ರೆ ಸಾಕು ಪಕ್ಕದ ಮಹಾರಾಷ್ಟ್ರ ದಿಂದ ಬೆಳಗಾವಿ ಜಿಲ್ಲೆಗೆ ಸಾವಿರಾರು ಕುಟುಂಬಗಳು …

Leave a Reply

Your email address will not be published. Required fields are marked *