ಬೆಳಗಾವಿ- ರಮೇಶ್ ಜಾರಕಿಹೊಳಿ ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಮಹಾದಾಯಿ ಕುರಿತು ಕರ್ನಾಟಕಕ್ಕೆ ಮಹಾ ಗೆಲುವು ಸಿಕ್ಕಿದೆ
ದೆಹಲಿಯಲ್ಲಿ ಗೋವಾ ಸರ್ಕಾರ ಮಹಾದಾಯಿ ಗೆಜೆಟ್ ಪ್ರಕಟಿಸಿದಂತೆ ಕೇಂದ್ರ ಸರ್ಕಾರದ ಮುಂದೆ ತಿಪ್ಪರಲಾಗ ಹಾಕಿದ್ರೂ ಇದನ್ನು ಲೆಕ್ಕಿಸದ ಕೇಂದ್ರ ಸರ್ಕಾರ ನಿನ್ನೆ ರಾತ್ರಿ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸಿ ಮಹಾಯಿಯ ನೀರು ಬಳಿಸಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ಅನುಮತಿ ಸಿಕ್ಕಿದೆ.
ರಮೇಶ್ ಜಾರಕಿಹೊಳಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಾನ್ಯ ಸುಪ್ರೀಂ ಕೋರ್ಟ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಬಳಿಕ ಗೋವಾ ಸರ್ಕಾರ ತಗಾದೆ ತೆಗೆದು ಮಹಾದಾಯಿ ಕಾಮಗಾರಿಗಳಿಗೆ ಅನುಮತಿ ನೀಡಬಾರದು ಎಂದು ಮತ್ತೆ ತಕರಾರು ಮಾಡಿತ್ತು
ಗೋವಾ ಸರ್ಕಾರ ಮಹಾದಾಯಿಗೆ ಯೋಜನೆಗೆ ಮತ್ತೆ ಬ್ರೇಕ್ ಹಾಕಲು ಬಿಡಬಾರದು ಎಂದು ಪಟ್ಟು ಹಿಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕೊಹೊಳಿ ಕಳೆದ ನಾಲ್ಕು ದಿನಗಳಿಂದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಜೊತೆ ದೆಹಲಿಯಲ್ಲೇ ಠಿಖಾನಿ ಹೂಡಿ ಅಮೀತ ಷಾ ಸೇರಿದಂತೆ ಬಿಜೆಪಿಯ ವರಿಷ್ಠರನ್ನು ಭೇಟಿಯಾಗಿ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸುವಂತೆ ಪಟ್ಟು ಹಿಡಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೊನೆಗೂ ಕರ್ನಾಟಕ ಜನತೆಯ,ಅದರಲ್ಲಿಯೂ ಉತ್ತರ ಕರ್ನಾಟಕ ಜನತೆಯ ಹಿತಾಸಕ್ತಿ ಕಾಯ್ದು ನಿನ್ನೆ ರಾತ್ರಿಯೇ ಗೆಜೆಟ್ ಹೊರಡಿಸಿದೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರ ಔತನಕೂಟದಲ್ಲಿ ಭಾಗಿಯಾದ ಸಂಧರ್ಭದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರಲ್ಲಿ ಮಹಾದಾಯಿ ಗೆಜೆಟ್ ಹೊರಡಿಸುವಂತೆ ಮನವಿ ಮಾಡಿಕೊಂಡಿದ್ದರು
ಗೆಜೆಟ್ ಹೊರಡಿಸುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಳ್ಳಲು ದೇಹಲಿಯಲ್ಲೇ ಉಳಿದುಕೊಂಡಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೇಂದ್ರದ ಮಂತ್ರಿಗಳಾದ ಪ್ರಲ್ಹಾದ್ ಜೋಶಿ ಮತ್ತು ಸುರೇಶ್ ಅಂಗಡಿ ಬಸವರಾಜ ಬೊಮ್ಮಯಿ ಸಾಥ್ ನೀಡಿದ್ದರು
ರಾಜ್ಯದ ಬಿಜೆಪಿ ನಾಯಕರ ಒತ್ತಡ, ಜಲಸಂಪನ್ಮೂಲ ಸಚಿವರ ಹಠಮಾರಿತನ. ಮಹಾದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜನರಿಗೆ ನ್ಯಾಯ ದೊರಕಿಸಿ ಕೊಟ್ಟಿದೆ.
ನಿನ್ನೆ ರಾತ್ರಿ ಮಹಾದಾಯಿ ಚಿತ್ರದ ಟ್ರೇಲರ್ ಮಾತ್ರ ಬಿಡುಗಡೆ ಆಗಿದೆ ಆದ್ರೆ ಪಿಕ್ಚರ್ ಅಭೀ ಬಾಕಿ ಹೈ ಎನ್ನುವಂತೆ ಕೇಂದ್ರ ಸರ್ಕಾರದ ಗೆಜೆಟ್ ಅನುಷ್ಠಾನ ಮಾಡಲು ಜಲಸಂಪನ್ಮೂಲ ಸಚಿವರು ಯುದ್ಧ ಮಾಡಲು ಸಜ್ಜಾಗಬೇಕಿದೆ ಗೋವಾ ಸರ್ಕಾರದ ಕುತಂತ್ರ ವಿಫಲ ಗೊಳಿಸಲು ಪ್ರತಿ ಹಂತದಲ್ಲೂ ತಂತ್ರ ರೂಪಿಸುವದು ಅಗತ್ಯವಾಗಿದೆ
ಮಹಾದಾಯಿ ತೀರ್ಪಿನ ಗೆಜೆಟ್ ಪ್ರಕಟನೆಯಾದ ಬಳಿಕ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದು ಬೆಳಿಗ್ಗೆ 11ಘಂಟೆಗೆ ಬೆಳಗಾವಿಗೆ ಬರಲಿದ್ದಾರೆ ಎಂದು ಜಾರಕಿಹೊಳಿ ಕುಟುಂಬದ ಮೂಲಗಳು ತಿಳಿಸಿವೆ.