Breaking News
Home / Breaking News / ಕಾಲ್ಗುಣವೊ, ಕೈಗುಣವೊ, ಮುಖದ ಲಕ್ಷಣವೊ ಗೊತ್ತಿಲ್ಲ

ಕಾಲ್ಗುಣವೊ, ಕೈಗುಣವೊ, ಮುಖದ ಲಕ್ಷಣವೊ ಗೊತ್ತಿಲ್ಲ

” ಛಲದಂಕ ಮಲ್ಲ” ರಮೇಶ
ಜಾರಕಿಹೊಳಿಯವರ ಕಿರೀಟಕ್ಕೆ
ಮತ್ತೊಂದು ಗರಿ: ಭದ್ರಾ ಮೇಲ್ದಂಡೆ
ಯೋಜನೆಗೆ ” ರಾಷ್ಟ್ರೀಯ ಯೋಜನೆ”
ಪಟ್ಟ:ಕೃಷ್ಣಾ ಮೇಲ್ದಂಡೆ ಯೋಜನೆಗೂ
” ದಿಲ್ಲಿಯ ದಾರಿ” ಸುಗಮವಾಗುವದೆ?

ರಾಜ್ಯ ಜಲಸಂಪನ್ಮೂಲ ಖಾತೆಯ
ಸಚಿವ ಶ್ರೀ ರಮೇಶ ಜಾರಕಿಹೊಳಿಯವರ
ಕಾಲ್ಗುಣವೊ, ಕೈಗುಣವೊ, ಮುಖದ
ಲಕ್ಷಣವೊ ಗೊತ್ತಿಲ್ಲ.ಆದರೆ ಅವರು ಈ
ಖಾತೆಯನ್ನು ವಹಿಸಿಕೊಂಡ ನಂತರ
ನೀರಾವರಿ ಯೋಜನೆಗಳಲ್ಲಿ ಲಾಟರಿ
ಮೇಲೆ ಲಾಟರಿಯನ್ನು ಕರ್ನಾಟಕವು
ಹೊಡೆದೇ ಹೊಡೆಯುತ್ತಿದೆ!
ದೀರ್ಘ ಕಾಲದಿಂದ ಮುಂದೆ ಸಾಗದೇ ಬಸವಳಿಯುತ್ತಿದ್ದ ಮಹಾದಾಯಿ ವಿವಾದ ಅಥವಾ ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಇದ್ದ ಅಡಚಣಿಗಳು ದೂರವಾಗುವ ಹಂತ ತಲುಪಿವೆ.2018 ರ ಅಗಷ್ಟ 14 ರಂದು ಪಾಂಚಾಲ ನ್ಯಾಯ
ಮಂಡಳಿಯು ನೀಡಿದ ಐತೀರ್ಪು ಕಳೆದ ಫೆಬ್ರುವರಿಯಲ್ಲಿ ಗೆಜೆಟ್ ಆಯಿತು.ಈ ಯೋಜನೆಗೆ ರಾಜ್ಯ ಸರಕಾರ 1600 ಕೋ.ರೂ.ಗಳ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಿತು.ಅರಣ್ಯ ಮತ್ತು ವನ್ಯಜೀವಿ ಖಾತೆಗಳ ಅನುಮತಿ
ದೊರೆತೊಡನೆ ಕಳಸಾ ಬಂಡೂರಿ ತಿರುವು
ಯೋಜನೆಯ ಅನುಷ್ಠಾನ ಆರಂಭವಾಗುತ್ತದೆ.
ಚಿತ್ರದುರ್ಗ,ದಾವಣಗೆರೆ,
ತುಮಕೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ” ರಾಷ್ಟ್ರೀಯ ಯೋಜನೆ” ಎಂದು ಘೋಷಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು ಇದೊಂದು ಬಹುದೊಡ್ಡ ಸಾಧನೆಯಾಗಿದೆ.ಒಟ್ಟು 21473 ಸಾವಿರ ಕೋಟಿ ರೂ.ಗಳ ಈ ಯೋಜನಾ ವೆಚ್ಚದ ಪೈಕಿ 16125 ಕೋಟಿ ರೂ.ಗಳನ್ನು ಕೇಂದ್ರವೇ ಭರಿಸಲಿದೆ.60: 40 ಅನುಪಾತದಲ್ಲಿ ಯೋಜನೆಯು ಅನುಷ್ಠಾನಗೊಳ್ಳಲಿದೆ.
ಸೋಮವಾರ ಡಿಸೆಂಬರ್ 7 ರಂದು ನಡೆದ
ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು ರಾಜ್ಯ ಸರಕಾರ ಐದು ಸಾವಿರ ಕೋಟಿ ರೂ.ಗಳನ್ನು ಮಾತ್ರ ವೆಚ್ಚ ಮಾಡಲಿದೆ.
ಸಚಿವ ಜಾರಕಿಹೊಳಿಯವರು ಕಳೆದ ಒಂದು ವರ್ಷದಿಂದ ಕೇಂದ್ರ ಸರಕಾರದೊಂದಿಗೆ ಸತತವಾಗಿ ಸಂಪರ್ಕ
ಇರಿಸಿಕೊಂಡಿದ್ದು ಜಲಶಕ್ತಿ ಸಚಿವ ಗಜೇಂದ್ರಸಿಂಗ ಶೇಖಾವತ್ ಅವರನ್ನು
11 ಸಲ ಭೆಟ್ಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಚರ್ಚಿಸಿದ್ದಾರೆ.ಈ ಒಳ್ಳೆಯ ಸಂಬಂಧ ಚರ್ಚೆಗಳ ಫಲವಾಗಿಯೇ ಭದ್ರಾ ಮೇಲ್ದಂಡೆ ಯೋಜನೆಯು ಈಗ
ರಾಷ್ಟ್ರೀಯ ಯೋಜನೆಯ ಪಟ್ಟವನ್ನು
ಪಡೆದಿದೆ.
ಭದ್ರಾ ಮೇಲ್ದಂಡೆ ಯೋಜನೆ
ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರಕಾರವೇ ಭರಿಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವೇ ಇರಲಿಲ್ಲ.12 ಇಲಾಖೆಗಳ ಹಸಿರು ನಿಶಾನೆಯ ನಂತರವಷ್ಟೇ ಕೇಂದ್ರವು ಇದನ್ನು ತನ್ನ ಯೋಜನೆಯನ್ನಾಗಿ ಸ್ವೀಕರಿಸಿದೆ.ಭದ್ರಾ ಮೇಲ್ದಂಡೆ ಯೋಜನೆಯು ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮದಡಿ ಬರುತ್ತದೆ.ಈ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಲಕ್ಷ್ಮಣರಾವ ಪೇಶ್ವೆ ಹಾಗೂ ಇತರ ಅಧಿಕಾರಿಗಳು ಹಲವಾರು ಬಾರಿ ಕೇಂದ್ರ ಸರಕಾರದ ಜೊತೆಗೆ ಚರ್ಚೆ ನಡೆಸಿ ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ ಸಾಕಷ್ಟು
ಶ್ರಮ ವಹಿಸಿದ್ದಾರೆ.
ಉತ್ತರ ಕರ್ನಾಟಕದ ಪ್ರತಿಷ್ಠಿತ ಯೋಜನೆಯಾಗಿರುವ ವಿಜಯಪುರ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯನ್ನೂ ಸಹ
ರಾಷ್ಟ್ರೀಯ ಯೋಜನೆಯನ್ನಾಗಿ
ಘೋಷಿಸಬೇಕೆಂದು ಒತ್ತಾಯಿಸಿ ರಮೇಶ ಜಾರಕಿಹೊಳಿಯವರು ಇತ್ತೀಚೆಗಷ್ಟೇ
ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.ಸುಮಾರು 51 ಸಾವಿರ ಕೋಟಿ ರೂ.ವೆಚ್ಚದ ಈ ಯೋಜನೆಯಿಂದ ಆರು ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಯಾಗುತ್ತದೆ.
ಆಲಮಟ್ಟಿ ಜಲಾಶಯದ ಎತ್ತರವನ್ನು ಸದ್ಯದ 519 ಮೀ.ದಿಂದ 524 ಮೀ.ಗೆ ಎತ್ತರಿಸಲು ಬ್ರಿಜೇಶಕುಮಾರ ಟ್ರಿಬ್ಯುನಲ್ ಅನುಮತಿ ನೀಡಿದೆ.ಆದರೆ ಆಂಧ್ರಪ್ರದೇಶ ಮತ್ತು
ತೆಲಂಗಾಣ ಸರಕಾರಗಳು ಸುಪ್ರೀಮ್ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿವೆ.ಎತ್ತರವನ್ನು 524 ಮೀ.ಹೆಚ್ಚಿಸಿದಲ್ಲಿ 22 ಹಳ್ಳಿಗಳ 80 ಸಾವಿರ ಕುಟುಂಬಳಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ.ಜಲಾಶಯದಲ್ಲಿ ಸದ್ಯದ 123 ಟಿ ಎಮ್ ಸಿ ಯಿಂದ 223 ಟಿ ಎಮ್ ಸಿ ಗೆ ನೀರಿನ ಸಂಗ್ರಹ ಹೆಚ್ಚಲಿದೆ.
ಈ ಯೋಜನೆ ಗಾತ್ರ ಹೆಚ್ಚುತ್ತ ನಡೆದಿರುವದರಿಂದ ಕೇಂದ್ರ ಸರಕಾರಕ್ಕೆ ಸಚಿವರು ಮೊರೆ ಹೋಗಿದ್ದಾರೆ.ಜಲಾಶಯದ ಎತ್ತರವನ್ನು 524 ರ ಬದಲಾಗಿ 522 ಮೀ.ಗೆ ಸೀಮಿತಗೊಳಿಸಿದರೆ ಕೇವಲ ಹತ್ತು ಸಾವಿರ ಕೋ.ರೂ.ಗಳಲ್ಲಿ 2.5 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೊಳಿಸಬಹುದಾಗಿದೆ.22 ಹಳ್ಳಿಗಳ ಪುನರ್ವಸತಿಯನ್ನು ಸದ್ಯಕ್ಕೆ ತಪ್ಪಿಸಬಹುದಾಗಿದೆ.
ನೆರೆಯ ಆಂಧ್ರಪ್ರದೇಶದ ಕಾಳೇಶ್ವರಮತ್ತು ಪೋಲಾವರಂ ಬೃಹತ್ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳನ್ನಾಗಿ ಘೋಷಿಸಬೇಕೆಂದು ಅಲ್ಲಿಯ ಮುಖ್ಯಮಂತ್ರಿಗಳು ಸತತವಾಗಿ ಕೇಂದ್ರದ ಮೇಲೆ ರಾಜಕೀಯ ಒತ್ತಡ ತರುತ್ತಿವೆ.ಆದರೂ ಸಾಧ್ಯವಾಗಿಲ್ಲ.ಸಚಿವ ರಮೇಶ ಜಾರಕಿಹೊಳಿಯವರು ಕೇಂದ್ರ ಸರಕಾರದೊಡನೆ ಬೆಳೆಸಿದ ಸಖ್ಯ ಹಾಗೂ
ಸಂಬಂಧದಿಂದಾಗಿ ಇದೀಗ ಭದ್ರಾ ಮೇಲ್ದಂಡೆ ಯೋಜನೆಗೆ ಜಯಸಿಕ್ಕಂತಾಗಿದೆ.
ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲೂ ಸಹ ರಮೇಶ ಸತತ ಪ್ರಯತ್ನ ನಡೆಸಿದ್ದಾರೆ.9 ಸಾವಿರ ಕೋಟಿ ರೂ.ಗಳ ಈ ಯೋಜನೆಯ ಜಲಾಶಯದಲ್ಲಿ ಕಾವೇರಿಯ 67 ಟಿ ಎಮ್ ಸಿ ನೀರನ್ನು ಹಿಡಿದಿಟ್ಟುಕೊಂಡು ಬೆಂಗಳೂರಿಗೆ ಕುಡಿಯುವ ನೀರು
ಪೂರೈಸಬಹುದಾಗಿದೆ.ಈ ಯೋಜನೆಗೆ ತಮಿಳುನಾಡು ಆಕ್ಷೇಪಿಸಿದೆ.ಆದರೆ
ಛಲಬಿಡದ ತ್ರಿವಿಕ್ರಮನಂತೆ ಪಟ್ಟು ಬಿಡದ ರಮೇಶ ಕೋವಿಡ್ ಹಾವಳಿಯಲ್ಲಿ ದಿಲ್ಲಿಗೆ
ರಸ್ತೆ ಮೂಲಕವೇ ದಿಲ್ಲಿಗೆ ಪ್ರಯಾಣಿಸಿದ್ದರು.
ರಮೇಶ ನೀರಾವರಿ ಮಂತ್ರಿಯಾದಾಗ” ಇವರೇನು ಈ ಖಾತೆಯನ್ನು ನಿರ್ವಹಿಸುತ್ತಾರೆ” ಎಂದು ಮೂಗು ಮುರಿದವರೇ ಈಗ
ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಾಗಿದೆ.
( ಕೋಟು ಧರಿಸಿದವರು
ವಿ ಜೆ ಎನ್ ಎಲ್ ಎಮ್.ಡಿ.ಶ್ರೀ ಪೇಶ್ವೆ.ಕೇಂದ್ರ ಜಲಶಕ್ತಿ ಸಚಿವರಿಗೆ
ಮನವಿ ಅರ್ಪಿಸುತ್ತಿರುವ ಸಚಿವ ಜಾರಕೊಹೊಳಿ)

ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ ಮೊ:9620114466

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *