ಬೆಳಗಾವಿ- ಇಷ್ಟು ದಿನ ಸೈಲೆಂಟ್ ಆಗಿದ್ದ ಸಾಹುಕಾರ ತಮ್ಮ ವಿರೋಧಿಗಳನ್ನ ಸೋಲಿಸಲು ಮತ್ತೊಮ್ಮೆ ಸಜ್ಜಾಗಿದ್ದಾರೆ. ತಮ್ಮ ರಾಜಕೀಯ ಬದ್ದ ಜನ ವೈರಿಯಾಗಿರುವ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳ್ಕರ ಸೋಲಿಸಲು ಸಜ್ಜಾಗಿರುವ ರಮೇಶ್ ಜಾರಕಿಹೋಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ,ಹಲಗಾ,ಕೆಕೆ ಕೊಪ್ಪ,ಬಡಾಲ ಅಂಕಲಗಿ ಸೇರಿದಂತೆ ಹತ್ತಕ್ಕೂ ಹೆಚ್ವು ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಪ್ರಯತ್ನ. ನಡೆಸಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಹಾಗೂ ರಮೇಶ್ ಜಾರಕಿಹೋಳಿ ಇಬ್ಬರ ನಡುವಿನ ರಾಜಕೀಯ ಸಂಘರ್ಷ ಹೊಸದೇನಲ್ಲ. ಇಬ್ಬರ ರಾಜಕೀಯ ದ್ವೇಷಕ್ಕೆ ಒಂದು ಸರ್ಕಾರವೆ ಉರುಳಿದ ಉದಾಹರಣೆಗೆ ನಮ್ಮೆಲ್ಲರ ಮುಂದಿದೆ. ಈಗ ಮತ್ತೆ ಚುನಾವಣೆ ವರ್ಷ ಶುರುವಾಗಿದ್ದು ಬೆಳಗಾವಿ ರಾಜಕಾರಣ ರಂಗೇರಿದೆ. ತನ್ನ ಬದ್ದ ವೈರಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ ಸೋಲಿಸಲು ಈಗಿನಿಂದಲೆ ರಮೇಶ್ ಜಾರಕಿಹೋಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದು ಶತಾಯ ಗತಾಯ ಹೆಬ್ಬಾಳ್ಕರ ಸೋಲಿಸಲೆ ಬೇಕು ಎಂದು ಪನ ತೊಟ್ಟಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದವನ್ನೆ ಟಾರ್ಗೆಟ್ ಮಾಡಿರುವ ಸಾಹುಕಾರ್ ರಮೇಶ್ ಜಾರಕಿಹೋಳಿ ಕಳೆದ ವಾರ, ಗ್ರಾಮೀಣ ಕ್ಷೇತ್ರದ ಗ್ರಾಮಗಳಾದ ಸಾಂಬರಾ, ಮೊದಗಾ, ಪಂಥ ಬಾಳೆಕುಂದ್ರಿ, ಮೋದಗಾ ಮಾರಿಹಾಳ ಗ್ರಾಮಗಳಿ ಭೇಟಿ ಮಾಡಿರುವ ಸಾಹುಕಾರ ಅಲ್ಲಿನ ಸ್ಥಳೀಯ ರಾಜಕೀಯ ನಾಯಕರನ್ನ ಬೇಟಿ ಮಾಡಿ ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಿದ್ದರು. ಇನ್ನು ಗ್ರಾಮೀಣ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತಗಳೆ ಹೆಚ್ಚಾಗಿರುವ ಕಾರಣ ಇಲ್ಲಿನ ಮರಾಠಾ ಮುಖಂಡರನ್ನ ಒಗ್ಗೂಡಿಸಿ ಸಂಘಟನೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಮರಾಠಾ ಸಮುದಾಯದ ಮುಖಂಡ ನಾಗೇಶ್ ಮುನ್ನೋಳ್ಕರ ಅವರನ್ನ ಮುಖ್ಯಮಂತ್ರಿ, ಹಾಗೂ ಕೇಂದ್ರದ ನಾಯಕರನ್ನ ಭೇಟಿ ಮಾಡಿಸುವ ಮೂಲಕ ಮರಾಠಾ ಸಮುದಾಯಯವನ್ನ ಒಗ್ಗೂಡಿಸಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಈಗಾಗಲೇ ಬೇರೆ ಬೇರೆ ಪಕ್ಷಕ್ಕೆ ಹಂಚಿ ಹೋಗಿರುವ ಮರಾಠಾ ಸಮುದಾಯದ ಮುಖಂಡರು ಲಕ್ಷ್ಮೀ ಹೆಬ್ಬಾಳ್ಕರ ಜೋತೆಗೆ ಗುರ್ತಿಸಿಕೊಂಡಿರುವ ಮರಾಠಾ ಸಮುದಾಯದ ಮುಖಂಡರನ್ನ ಟಾರ್ಗೆಟ್ ಮಾಡಿರುವ ಸಾಹುಕಾರ್ ಎಲ್ಲರನ್ನೂ ಭೇಟಿ ಮಾಡಿ ಬರುವ ಚುನಾವಣೆಯಲ್ಲಿ ಬಿಜೆಪಿ ಪರ ನಿಲ್ಲುವಂತೆ ಮನ ಒಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಬೆಳಗಾವಿ ಗ್ರಾಮೀಣದಲ್ಲಿ ಸಾಹುಕಾರ್ ರೌಂಡ್ಸ್…
ಇನ್ನು ಹೆಬ್ಬಾಳ್ಕರ ಹಾಗೂ ರಮೇಶ್ ಜಾರಕಿಹೋಳಿ ಮಧ್ಯೆ ಜಿದ್ದಾಜಿದ್ದಿನ ವೈಷಮ್ಯ ಬೆಳೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಈ ಹಿಂದೆ 2018 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವತಃ ರಮೇಶ್ ಜಾರಕಿಹೋಳಿ ಅವರೆ ಮುಂದೆ ನಿಂತು ಮರಾಠಾ ಸಮುದಾಯದ ನಾಯಕರ ಹಾಗೂ ಮತಾದಾರರನ್ನ ಒಗ್ಗೂಡಿಸಿ ಲಕ್ಷ್ಮೀ ಹೆಬ್ಬಾಳ್ಕರ ಗೆಲುವಿಗೆ ಕಾರಣರಾಗಿದ್ದರು. ಆದ್ರೆ ಕಾರಣಾಂತರದಿಂದ ಇಬ್ಬರ ನಡುವಿನ ವೈಮನ್ಸು ಇಂದು ಇಬ್ಬರನ್ನ ರಾಜಕೀಯ ವಿರೋಧಿಗಳನ್ನಾಗಿ ಮಾಡಿದೆ. ಅಂದು ಲಕ್ಷ್ಮೀ ಹೆಬ್ಬಾಳ್ಕರ ಗೆಲುವಿಗೆ ಓಡಾದಿದ್ದ ಸಾಹುಕಾರ್ ಇಂದು ಹೆಬ್ಬಾಳ್ಕರನ್ನ ಸೋಲಿಸಲು ಅದೆ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. 2023 ರ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ ಸೋಲಿವುದರ ಮೂಲಕ ತಮ್ಮ ಸೇಡು ತೀರಿರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹಿಂದಿನ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಗೆಲ್ಲಿಸಲು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಠಿಖಾನಿ ಹೂಡಿದ್ದರು.ಆದ್ರೆ ಈಗ ಕಾಲ ಬದಲಾಗಿದೆ.ಅದೇ ರಮೇಶ್ ಜಾರಕಿಹೊಳಿ ಅವರು ಇವತ್ತು ಲಕ್ಷ್ಮೀ ಹೆಬ್ಬಾಳಕರ ಸೋಲೀಸಲು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತಬೇಟೆ ಶುರು ಮಾಡಿದ್ದಾರೆ.