ಚಿತ್ರ ಕೃಪೆ- ಪಿ.ಕೆ ಬಡಿಗೇರ
ಬೆಳಗಾವಿ- ರಮೇಶ್ ಕತ್ತಿ ಮಾತನಾಡಲು ಶುರು ಮಾಡಿದ್ರ ಜನ ಬಹಳ ಕುತೂಹಲ ದಿಂದ ಕೆಳ್ತಾ ಇದ್ರು ಆದ್ರೆ ಈಗ ರಮೇಶ್ ಕತ್ತಿ ಅವರ ಲೈಫ್ ಸ್ಟೈಲ್ ಬದಲಾಗಿದೆ.ಯಾವಾಗಲೂ ಮೀಸೆ ತಿರುವುತ್ತಲೇ ಮಾತು ಶುರು ಮಾಡ್ತಾರೆ.
ಡಿಸಿಸಿ ಬ್ಯಾಂಕಿನಲ್ಲಿ ಜಿಲ್ಲೆಯ ಘಟಾನುಘಟಿ ನಾಯಕರು ಸೇರಿದ್ದರು ಎಲ್ಲರ ನಡುವೆ,ಎಲ್ಲರ ಗಮನ ಸೆಳೆದಿದ್ದು ರಮೇಶ್ ಕತ್ತಿ ಅವರ ಮೀಸೆ,ಯಾಕಂದ್ರೆ ರಮೇಶ್ ಕತ್ತಿ ಅವರ ಮಾತಿಗಿಂತಲೂ ಅವರ ಮೀಸೆ ಚೂಪಾಗಿತ್ತು ಮೀಸೆ ತಿರುವುತ್ತಲೇ ಅವರು ಆಡಿದ ಮಾತು ಚುರುಕಾಗಿತ್ತು.
ಅವರ ಮೀಸೆ ನೋಡಿ,ಅಲ್ಲಿದ್ದವರು ಒಬ್ರು ಕೇಳಿಯೇ ಬಿಟ್ರು ,ಏನ್ರೀ ಸಾಹುಕಾರ್ ಮೀಸೆ ಚಲೋ ಕಾಣಾತಾವ ಅಂತ,ಆಗ ರಮೇಶ್ ಕತ್ತಿ ,ಲಾಕ್ ಡೌನ್ ದಾಗ ಕಟೀಂಗ್ ಮಾಡಿಸ್ಕೋಳಾಕ ಟೈಮ್ ಸಿಕ್ಕಿರಲಿಲ್ಲ,ಅದಕ್ಕ ಈ ಅವತಾರ ಅಂದ್ರು ಮೀಸೆ ತಿರುವುದ್ರಾಗೂ ಮಜಾ ಬರತೈತಿ ಅಂತ,ರಮೇಶ್ ಕತ್ತಿ ಮೀಸೆ ಕಹಾನಿಯನ್ನು ಬಿಚ್ಚಿಟ್ಟರು.
ಮೀಸೆ ಮಾತು ಮುಗಿದ ಮೇಲೆ ಮತ್ತೊಬ್ಬರು ಬಂದು ಏನ್ರಿ ಸಾಹುಕಾರ್ ಡಿಸಿಸಿ ಬ್ಯಾಂಕ್ ಹೊಸ ಬಿಲ್ಡಿಂಗ್ ಬಾಳ ಚಲೋ ಆಗೈತಿ,ಒಳಗ ಹೊಕ್ರ ವಿಧಾನಸೌಧದಾಗ ಹೋದ್ಹಂಗ ಆಗಾತೈತಿ ಅಂದ್ರು ,ಅವರು ಹೇಳುವದಷ್ಟೇ ತಡ ರಮೇಶ್ ಕತ್ತಿ ಹೊಸ ಬಿಲ್ಡಿಂಗ್ ಕಹಾನಿ ಶುರು ಮಾಡಿದ್ರು,ನೋಡ ತಮ್ಮಾ ಸರ್ಕಾರ ಹೊಸ ಬಿಲ್ಡಿಂಗ್ ಕಟ್ಟಾಕ 28 ಕೋಟಿ ರೂ ಮಂಜೂರ ಮಾಡಿತ್ತ,ಈ ಬಿಲ್ಡಿಂಗ್ ಓಪನಿಂಗ್ ದಾಗ ಮಾಡಿದ ಪೂಜಾ ಖರ್ಚು ,ಸ್ವಾಮಿಗಳ ದಕ್ಷಿಣೆ ಹಿಡ್ಕೊಂಡ 24 ಕೋಟಿ ಖರ್ಚ ಆಗೈತಿ ,ಅತ್ರಾಗೂ ನಾಲ್ಕು ಕೋಟಿ ಉಳಿಸೇನ,ಈ ಬಿಲ್ಡಿಂಗ್ ಕೆಲಸ ಹಗಲು ರಾತ್ರಿ ನಡೆಸಿ ದೌಡ ಕೆಲಸಾ ಮುಗಸೇನ,ಈ ಹೊಸ ಬಿಲ್ಡಿಂಗ್ ಉದ್ಘಾಟನೆ ಮಾಡಾಕ,ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕರೀಬೇಕಂತಾ ವಿಚಾರ ಮಾಡೇನ್ ಅಂತಾ ರಮೇಶ್ ಕತ್ತಿ ಮೀಸೆ ತಿರುವುತ್ತಲೇ ಬಿಲ್ಡಿಂಗ್ ಕಹಾನಿ ಹೇಳಿದ್ರು.
ಗುರುವಾರ ರಮೇಶ್ ಕತ್ತಿ ಡಿಸಿಸಿ ಬ್ಯಾಂಕಿನ ಹೊಸ ಕಟ್ಟಡದಲ್ಲಿ ಎಲ್ಲರನ್ನು ಮಾತನಾಡಿಸುತ್ತ,ಅತ್ತಿಂದಿತ್ತ ಓಡಾಡುತ್ತಿರುವಾಗ,ಕೆಲವರು ಅವರನ್ನು ತಡೆದು ಸಾಹುಕಾರ್ ಒಂದ್ ಸೆಲ್ಫೀ ಪ್ಲೀಜ್ ಅಂತ ಸೆಲ್ಫಿ ತೊಡಗಿಸಿಕೊಂಡರು.