ಬೆಳಗಾವಿ -ಆ ಬಾಲಕಿ ಮನೆಯಲ್ಲಿ ಸುಳ್ಳು ಹೇಳಿ ಸ್ನೇಹಿತೆಯ ಜತೆ ಗಣಪತಿ ವಿಸರ್ಜನೆ ಮೆರವಣಿಗೆ ನೋಡಲು ಹೋಗಿದ್ದಳು. ಆದರೆ, ಸಮೋಸ ಮೋಸಕ್ಕೆ ಒಳಗಾದ ಬಾಲಕಿ ಸ್ನೇಹಿತೆಯ ಸ್ನೇಹತರಿಂದಲೇ ಅತ್ಯಾಚಾರಕ್ಕೆ ಒಳಗಾದ ಘಟನೆ ನಗರದಲ್ಲಿ ನಡೆದಿದೆ.
ಈ ಕುರಿತು ನಗರದ ಉದ್ಯಮಭಾಗ ಠಾಣೆಯಲ್ಲಿ ಬಾಲಕಿಯ ಪಾಲಕರು ದೂರು ನೀಡಿದ್ದಾರೆ. ಪ್ರಕಣಕ್ಕೆ ಸಂಬಂಧಿಸಿದಂತೆ ಹಳೆಬೆಳಗಾವಿಯ ವಿನಾಯಕ ಜಾಧವ, ಆರ್ಸಿ ನಗರದ ಶಾರೂಖ ಅಬ್ದುಲ್ರೆಹಮಾನ ಖತೀಬ, ರಜತ ಜಾಧವ ವಿರುದ್ಧ ಪೆÇೀಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆ ದಿನ ಶಾಲೆಗೆ ಹೋಗುವ ನೆಪದಲ್ಲಿ ಮನೆಯಿಂದ ಹೊರಬಂದಿದ್ದ ಬಾಲಕಿ ತನ್ನ ಸ್ನೇಹಿತೆ ಹಾಗೂ ಆಕೆಯ ಸ್ನೇಹಿತ ವಿನಾಯಕ ಜಾಧವನೊಂದಿಗೆ ಮೆರವಣಿಗೆ ನೋಡಲು ಹೋಗಿದ್ದಳು. ಅಲ್ಲಿ ಜತೆಯಾದ ರಜತ್ನೊಂದಿಗೆ ನಾಲ್ವರು ಕಾರಿನಲ್ಲಿ ಮೆರವಣಿಗೆ ವೀಕ್ಷಣೆ ಮುಂದುವರಿಸಿದ್ದರು.
ಸಮಯದ ಲಾಭ ಪಡೆದ ಯುವಕರು ಬಾಲಕಿಯರಿಗೆ ಸಮೋಸಾ ತಿನ್ನಿಸಿದ್ದಾರೆ. ಮನೆಯಲ್ಲಿ ಸುಳ್ಳು ಹೇಳಿ ಬಂದಿದ್ದ ಬಾಲಕಿ ಪ್ರಜ್ಞೆ ತಪ್ಪುತ್ತಿದ್ದಂತೆಯೇ ಯುವಕರು ತಮ್ಮ ಮತ್ತೊಬ್ಬ ಸ್ನೇಹಿತ ಶಾರೂಖನನ್ನು ಕರೆಯಿಸಿ ಆತನ ಮನೆಗೆ ಹೋಗಿದ್ದಾರೆ. ಅಲ್ಲಿ ವಿನಾಯಕ ಮತ್ತು ರಜತ ಇಬ್ಬರು ಬಾಲಕಿಯರನ್ನು ಅತ್ಯಾಚಾರ ಎಸಗಿದ್ದಾರೆ. ಪ್ರಜ್ಞೆ ತಪ್ಪಿದ್ದ ಬಾಲಕಿಗೆ ಅತ್ಯಾಚಾರ ನಡೆದಿರುವುದು ಬೆಳಗ್ಗೆ ಗೊತ್ತಾಗಿದೆ ಎಂದು ದೂರಿನಲ್ಲಿ ಘಟನೆಯನ್ನು ವಿವರಿಸಲಾಗಿದೆ.
Check Also
ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು
ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …