ಬೆಳಗಾವಿ-ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಸಮಂಧಿಸಿದಂತೆ ಅಮಾಯಕನ ಹೆಸರನ್ನು ತಳಕು ಹಾಕಿ ರಾಯಬಾಗ ಸಿಪಿಐ ಕಚೇರಿಯಿಂದ ಒಂದು ಲಕ್ಷ ರೂ ಕೊಡುವಂತೆ ಪೋಲೀಸರು ಕರೆ ಮಾಡಿದ್ದು ಅಮಾಯಕರಿಂದ ಪೋಲೀಸರು ದುಡ್ಡು ಕೇಳಿದ್ರೆ ಪೋಲೀಸ್ ಸ್ಟೇಶನ್ ಗೆ ಹೋಗಿ ಬೆಂಕಿ ಹಚ್ಚುತ್ತೇನೆ ಎಂದು ರಾಯಬಾಗ ಕುಡಚಿ ಕ್ಷೇತ್ರದ ಶಾಸಕ ಮಾಜಿ ಪಿಎಸ್ಐ ಪಿ ರಾಜೀವ ಎಚ್ಚರಿಕೆ ನೀಡಿದ್ದಾರೆ
ರಾಯಬಾಗ ತಾಲೂಕಿನ ಹಳ್ಳಿಯೊಂದರಲ್ಲಿ ಎಪಿಎಂಸಿ ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಶಾಸಕ ಪಿ ರಾಜೀವ ಅವರು ಈ ರೀತಿ ಮಾತನಾಡಿದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿವೆ
ಅಮಾಯಕ ವ್ಯೆಕ್ತಿ ಒಬ್ಬ ಊರಲ್ಲಿ ಇರಲಿಲ್ಲ ಆದರೂ ಪೋಲೀಸರು ಇತನ ಹೆಸರನ್ನು ಮಹಿಳೆಯೊಬ್ಬಳ ಆತ್ಮ ಹತ್ಯೆ ಪ್ರಕರಣದಲ್ಲಿ ಸೇರುಸುವ ಧಮಕಿ ಹಾಕಿದ್ದಾರೆ ಒಂದು ಲಕ್ಷ ಕೊಟ್ಟರೆ ಸೆಟಲ್ ಮೆಂಟ್ ಮಾಡುವದಾಗಿ ರಾಯಬಾಗ ಸಿಪಿಐ ಕಚೇರಿಯಿಂದ ದೂರವಾಣಿ ಕರೆ ಬಂದಿದೆ ಈ ರೀತಿ ಪೋಲೀಸರು ಅಮಾಯಕರನ್ನು ಹೆದರಿಕೆ ಹಾಕಿ ದುಡ್ಡು ವಸೂಲಿ ಮಾಡಿದ್ರೆ ಪೋಲೀಸ್ ಸ್ಟೇಶನ್ ಗೆ ಹೋಗಿ ಬೆಂಕಿ ಹಚ್ಚುತ್ತೇನೆ ಎಂದು ಪಿ ರಾಜೀವ ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿರುವ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ
ವಿಡಿಯೋ ತುಣುಕುಗಳನ್ನು ಬೆಳಗಾವಿಸುದ್ಧಿ ಫೇಸ್ ಬುಕ್ ಪೇಜ್ ನಲ್ಲಿ ನೋಡಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ