Breaking News

ಕ್ರಾಂತಿಯ ನೆಲದಲ್ಲಿ ರಾಯಣ್ಣ ಬ್ರಿಗೇಡ್ ರಣಕಹಳೆ…

ಬೆಳಗಾವಿ-ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಕಟ್ಟಪ್ಪಣೆಯನ್ನು ದಿಕ್ಕರಿಸಿ ಕೆ ಎಸ್ ಈಶ್ವರಪ್ಪ ನಂದಗಡದಲ್ಲಿ ನಡೆದ ರಾಉಣ್ಣ ಬ್ರೀಗೇಡ್ ಪ್ರತಿದ್ಙಾವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾರೋ ನೀಡಿರುವ ನೋಟೀಸ್ ಗೆ ನಾನು ಹೆದರೋದಿಲ್ಲ ಜಗ್ಗೋದಿಲ್ಲ  ಎಂದು ಹೇಳುವದರ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ

 ಸಂಗೊಳ್ಳಿ ರಾಯಣ್ಣ ಬ್ರಿಗೇಡ್  ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ. ನಂದಗಡದಲ್ಲಿ ನಡೆಯಿತು  ದಲಿತ ಮಠದ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಅವರಿಂದ ಪ್ರತಿಜ್ಞಾ ಬೋಧನೆ.ಮಾಡಲಾಯಿತು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಪ್ರತಿಜ್ಞಾ ಬೋಧನೆ ಮಾಡಲಾಯಿತು

. ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ , ಮುಖಡಪ್ಪ.ಬ್ರಿಗೇಡ್ ಅಧ್ಯಕ್ಷ ಕೆ ವಿರುಪಾಕ್ಷಪ್ಪ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚ ಜನ ಭಾಗಿಯಾಗಿದ್ದರು   ನಾಲ್ಕು ಪ್ರಮುಖ ಅಂಶಗಳನ್ನು ಸ್ವಾಮೀಜಿ ಬೋಧಿಸಿದರು

 ಈ ಸಂಧರ್ಭದಲ್ಲಿ ಮಾತನಾಡಿದ ಈಶ್ವರಪ್ಪಾ . ರಾಜ್ಯದಲ್ಲಿ ದಲಿತರು ಹಿಂದುಳಿದವರ ಸಹಾಯಕ್ಕೆ ಇಂದು ದೇವರ ಹೆಸರಲ್ಲಿ ಸ್ವಾಮೀಜಿಗಳು ಬಂದಿದ್ದಾರೆ. ಇದು ಯಾವ ಪಕ್ಷದ. ಸಮಾಜದ ವಿರುದ್ದ ಸಂಘಟನೆ ಅಲ್ಲಾ. ದೀನದಲಿತರ ಉದ್ದಾರಕ್ಕಾಗಿ ನಾನು ಸಂಗೋಳ್ಳಿ ರಾಯಣ್ಣಾ ಸಂಘಟನೆ ಹುಟ್ಟು ಹಾಕಿದ್ದೆನೆ. ಈ ಪ್ರತಿಜ್ಞಾ ವಿದಿಯಲ್ಲಿ ಬಾಗಿಯಾಗಬಾರದು ಎಂದು ಆಡಳಿತ ಪಕ್ಷ ವಿರೋದ ಪಕ್ಷ ಎರಡು ಪಕ್ಷ ಪ್ರಯತ್ನ ಮಾಡಿದ್ದಾರೆ. ನಾನು ಯಾವುದೆ ಕಾರಣಕ್ಕೂ ಈ ಬೆದರಿಕೆಯ ನೋಟೊಸಗೆ ಹೆದರಲ್ಲಾ ಜಗ್ಗಲ್ಲಾ ಎಂದು ಈಶ್ವರಪ್ಪಾ ತಮ್ಮ ನಾಯಕ ಬಿ.ಎಸ್.ವೈ ವಿರುದ್ದ ವಾಗ್ದಾಳಿ. ನಡೆಸಿದರು

ಸಮುಂದ್ರ ಮಂತನ ಮಾಡುವಾಗ ಮೊದಲು ವಿಷ ಬಂತು ನಂತರ ಅಮೃತ ಬಂತು . ಹಾಗೆ ನನಗೆ ಮೊದಲು ನೋಟಿಸ ಬರತ್ತೆ ನಂತರ ಅಮೃತ ಬರತ್ತೆ ಎಂದು ಮಾರ್ಮಿಕವಾಗಿ ಮಾತನಾಡಿದಅವರು ಜನೆವರಿ ೨೬ ಸಂಗೋಳ್ಳಿರಾಯಣ್ಣನ ನೇಣಿಗೆ ಹಾಕಿದ ದಿನ ಅವತ್ತು ಕೂಡಲ ಸಂಗಮದಲ್ಲಿ ರಾಜ್ಯಮಟ್ಟದ ಸಮಾವೇಶ ಮಾಡಲಾಗುವುದು. ಆ ಸಮಾವೇಶಕ್ಕೆ ಸಿದ್ದರಾಗಿ  ಎಂದು ಕರೆ ನೀಡಿದ ಅವರು ಕೂಡಲಸಂಗಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲಕ್ಷ‌ಲಕ್ಷ ಜನರು ಸೇರಿ‌ ಹಿಂದುಳಿದವರ ತಾಕತ್ತು ಎನೆಂದು ತಿಳಿಸೊಣ ಎಂದು ಕರೆ ನೀಡಿದರು

ಸಂಗೋಳ್ಳಿ ರಾಯಣ್ಣಾ ಜ್ಯಾತಿ ಮಾಡದೆ ಕಿತ್ತೂರ ಚನ್ನಮ್ಮನ ಹತ್ತಿರ ಹೋಗಿದ್ದಾನೆ. ಹಾಗೆ ನಾನು ಸಹ ಯಾವುದೆ ಕಾರಣಕ್ಕೂ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕಾರ್ಯವನ್ನು ನಿಲ್ಲಿಸುವದಿಲ್ಲ. ಎಂದು  ಈಶ್ವರಪ್ಪ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ

Check Also

ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಪೋಲೀಸರಿಗೆ ಸಿಕ್ಕಿದ್ದೇನು ಗೊತ್ತಾ.?

ಬೆಳಗಾವಿ- ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಗಾಂಜಾ ,ಬೆಳಗಾವಿಯ ಸಿಇಎನ್ ಸೈಬರ್ ಕ್ರೈಂ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.