Breaking News
Home / Breaking News / ರೋಹನ್ ಸತ್ತಿಲ್ಲ ಆತ ಬಂದೇ ಬರ್ತಾನೆ….. ರೋಹನ್ ತಾಯಿ.

ರೋಹನ್ ಸತ್ತಿಲ್ಲ ಆತ ಬಂದೇ ಬರ್ತಾನೆ….. ರೋಹನ್ ತಾಯಿ.

ಬೆಳಗಾವಿ – ಕಳೆದ ಎರಡು ವರ್ಷದಿಂದ ರೋಹಣ ರೇಡೇಕರ ಕಿಡ್ನ್ಯಾಪ್ ಆದಾಗಿನಿಂದ ಕಣ್ಣೀರಧಾರೆಯಲ್ಲಿ ನಿತ್ಯ ಮುಖತೊಳೆದುಕೊಳ್ಳುತ್ತಿರುವ ಆತನ ತಾಯಿ ತನ್ನ ಮಗ ಸತ್ತಿದ್ದಾನೆ ಎಂದು ಈ ತಾಯಿ ನಂಬುತ್ತಲೇ ಇಲ್ಲ ನನ್ನ ಮಗ ಸತ್ತಿಲ್ಲ ಆತ ತನ್ನ  ಬಳಿ ಬಂದೇ ಬರ್ತಾನೆ ಪೋಲೀಸರು ಸುಳ್ಳು ಹೇಳುತ್ತಿದ್ದರೆ ಅಂತಾಳೆ ರೋಹಣ ತಾಯಿ ರೇಣುಕಾ

ಇಂದು ತಾಯಂದಿರ ದಿನ ಮಕ್ಕಳೆಲ್ಲರೂ ತಮ್ಮ ತಾಯಂದಿರುಗಳಿಗೆ ಶುಭಾಶಯ ಹೇಳಿ ಗಿಫ್ಟ ಕೊಡುತ್ತಿದ್ದರೆ ಇತ್ತ ರೋಹಣ ತಾಯಿ ರೇಣುಕಾ ಇನ್ನುವರೆಗೆ ತನ್ನ ಮಗನ ದಾರಿ ಕಾಯುತ್ತಿದ್ದಾಳೆ ತನ್ನ ಮಗ ಬಂದೇ ಬರ್ತಾನೆ ಎಂದು ನಂಬಿ ಕುಳಿತಿದ್ದಾಳೆ

ಎರಡು ವರ್ಷದ ಹಿಂದೆ ಭೂಗತ ಪಾತಕಿ ರಶೀದ ಮಲಬಾರಿಯ ಗ್ಯಾಂಗ್ ರೋಹಣ ರೇಡೇಕರನನ್ನು ಕಿಡ್ನ್ಯಾಪ್ ಮಾಡಿ ಆತನ ಹತ್ಯೆ ಮಾಡಿ ಚೋರ್ಲಾ ಘಾಟಿನ ದಟ್ಟ ಅರಣ್ಯದಲ್ಲಿ ರೋಹಣ ಶವ ವನ್ನು ಎಸೆದು ಹೋಗಿದ್ದರು ಆದರೆ ರೋಹಣ ಕೊಲೆ ಪ್ರಕರಣ ಭೇಧಿಸಿರುವ ಬೆಳಗಾವಿ ಪೋಲೀಸರು ರಶೀದ ಮಲಬಾರಿಯ ಕೈ ಗಳಿಗೆ ಬೇಡಿ ಹಾಕಿ ರೋಹಣ ರೇಡೇಕರ ಹತ್ಯೆ ಮಾಡಿದ್ದು ಮಲಬಾರಿ ಗ್ಯಾಂಗ್ ಅನ್ನೋದನ್ನು ಸ್ಪಷ್ಠ ಪಡಿಸಿದ್ದಾರೆ

ರೋಹಣ ಸಾವಿನ ಸುದ್ಧಿ ತಿಳಿದು ಸಮಂಧಿಕರು ಸಾಂತ್ವನ ಹೇಳಲು ಮನೆಗೆ ಬರುತ್ತಿದ್ದಾರೆ ಆದರೆ ರೋಹಣ ತಾಯಿ ರೇಣುಕಾ ಮಾತ್ರ ನನ್ನ ಮಗ ನನ್ನನ್ನು ಬಿಟ್ಟು ಸಾಯಲು ಸಾದ್ಯವೇ ಇಲ್ಲ ಎಂದು ಹೇಳುವದನ್ನು ಕೇಳಿದಾಗ ಮನೆಯಲ್ಲಿ ನೆರೆದ ಜನರ ಕಣ್ಣೀರು ಕಪಾಳಕ್ಕೆ ಮುಟ್ಟಿತು

ರೋಹನ್ ಸಾವಿನ ಸುದ್ಧಿ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ರೋಹನ್ ಮನೆಯಲ್ಲಿ ಸೂತಕದ ಛಾಯೆ ಆವರಿಸಿತು ರೋಹನ್ ಸ್ನೇಹಿತರು ಮತ್ತು ಸಮಂಧಿಕರು ಮನೆಗೆ ದೌಡಾಯಿಸಿ ರೋಹನ್ ಸಾವಿಗೆ ಕಂಬಿನಿ ಮಿಡಿದರು

ರೋಹನ್ ಮಾನವೀಯ ಗುಣಗಳನ್ನು ಬೆಳೆಸಿಕೊಂಡಿದ್ದ ಅ ಸಹಾಯಕರು ಸಹಾಯ ಮಾಡುವಂತೆ ಮನೆಗೆ ಬಂದಾಗ ಎಲ್ಲರಿಗೂ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದ ಆತ ಯಾರ ಜೊತೆಯೂ ಜಗಳಾಡಿದ್ದನ್ನು ನಾವು ನೋಡಿಲ್ಲ ಕಿರಾತಕರಿಗೆ ಹಣ ಬೇಕಾದಲ್ಲಿ ಕೇಳಿ ಪಡೆಯಬೇಕಿತ್ತು ಒಬ್ಬ ಅಮಾಯಕನನ್ನು ಈ ರೀತಿ ಕೊಲೆ ಮಾಡಬಾರದಾಗಿತ್ತು ಅಂತಾರೆ ರೋಹನ್ ಸ್ನೇಹಿತರು ಪರಿತಪಿಸುತ್ತಿರುವದನ್ನು ನೋಡಿದರೆ ಕರಳು ಚುರ್ ಅನ್ನುತ್ತೆ

ರೋಹನ್ ತಾಯಿ ರೇಣುಕಾ ತನ್ನ ಮಗ ಸತ್ತಿಲ್ಲ ಪೋಲೀಸರ ಮಾತನ್ನು ನಾನು ನಂಬುವದಿಲ್ಲ ಡಿಎನ್ಎ ರಿಪೋರ್ಟ್ ಬರಲಿ ಪೋಲಿಸರಿಗೆ ಬೇರೆ ಯಾರದ್ದೋ ಶವ ಸಿಕ್ಕಿರಬಹುದು ಪೋಲೀಸರಿಗೆ ಸಿಕ್ಕ ಶವ ಬೇರೆ ಯಾರದ್ದೋ ಇರಬಹುದು ಎಂದು ಹೇಳಿ ಆ ತಾಯಿ ಕಣ್ಣೀರು ಸುರಿಸಿದ್ದನ್ನು ನೋಡಿ ಸಹಿಸಲಾಗಲಿಲ್ಲ

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *