ಬೆಳಗಾವಿ- ಬೆಳಗಾವಿ ಪಾಲಿಕೆಯಲ್ಲಿ ಈ ಬಂದ ಬಹುತೇಕ ಅಧಿಕಾರಿಗಳು ಕನ್ನಡ ಹಾಗೂ ಮರಾಠಿಯಲ್ಲಿ ನಾಮಫಲಕ ಹಾಕುತ್ತಿದ್ದರು. ಇದೇ ಮೊದಲ ಸಲ ಕೇವಲ ಕನ್ನಡದಲ್ಲಿ ಬ್ಯಾನರ್ ಹಾಕುವ ಮೂಲಕ ಪಾಲಿಕೆಯಲ್ಲಿ ಕನ್ನಡ ಗಾಳಿ ಆರಂಭಿಸಲಾಗಿದೆ. ಇದು ಎಂಇಎಸ್ ಜನ ಹೊಟ್ಟೆ ಕಿಚ್ಚಿಗೆ ಕಾರಣವಾಗಿದ್ದ ಡೋಂಟ್ ಕೇರ್ ಎಂದು ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಮುನ್ನುಗ್ಗುತ್ತಿದ್ದಾರೆ.
ಬೆಳಗಾವಿಯಲ್ಲಿ ನಿನ್ನೆ ವಿಜೃಂಭಣೆಯ ಗಣೇಶ ವಿಸರ್ಜನೆ ಕಾರ್ಯ ನಡೆಯಿತು. ಕಪಿಲೇಶ್ವರ ಹೊಂಡದ ಬಳಿಯಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಬ್ಯಾನರ್ ಹಾಕಲಾಗಿತ್ತು. ಈ ನಿರ್ಧಾರವನ್ನು ಮಾಡಿದ್ದು ಪಾಲಿಕೆ ಆಯುಕ್ತ ರುದ್ರೇಶ ಗಾಳಿ. ಪ್ರತಿ ವರ್ಷ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಬ್ಯಾನರ್ ಹಾಕೋ ಪದ್ಧತಿ ಇತ್ತು. ಈ ಸಲ ಇದಕ್ಕೆ ಬ್ರೇಕ್ ಹಾಕಲಾಗಿದೆ.
ಬೆಳಗಾವಿ ಪಾಲಿಕೆಯಲ್ಲಿ ಅಸ್ತಿತ್ವ ಹೊಂದಿದ್ದ ಎಂಇಎಸ್ ಅಧಿಕಾರಿಗಳನ್ನು ಹಿಡಿಟ್ಟುಕೊಳ್ಳುವ ಯತ್ನ ಮಾಡುತ್ತಿತ್ತು. ಆದರೇ ಈಗ ಪಾಲಿಕೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಬಂದಿದೆ. ಇದರಿಂದ ಅಧಿಕಾರಿಗಳಿಗೂ ಸಹ ಹೊಸ ಶಕ್ತಿ ಬಂದ ಹಾಗೆ ಆಗಿದೆ.
ಮಹಾನಗರ ಪಾಲಿಕೆ ಹಾಕಿರುವ ವೇದಿಕೆಯಲ್ಲಿ ಹಾಕುವ ಬ್ಯಾನರ್ ನಲ್ಲಿ ಕೇವಲ ಕನ್ನಡ ಮಾತ್ರ ಇರಬೇಕು ಎನ್ನುವ ದಿಟ್ಟ ನಿರ್ಧಾರ ಕೈಗೊಂಡಿದ್ದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಇದನ್ನು ಪ್ರಶ್ನಿಸಲು ಬಂದ ಎಂಇಎಸ್ ಪುಂಡರಿಗೆ ತಕ್ಕ ಪಾಠ ಕಲಿಸಿದ್ದು ಪಾಲಿಕೆಯ ಮಹಿಳಾ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ. ಈ ಇಬ್ಬರು ಅಧಿಕಾರಿಗಳ ಕನ್ನಡದ ಕಳಕಳಿಯ ಪರಿಣಾಮ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡದ ಬಿರುಗಾಳಿ ಬೀಸುತ್ತಿದೆ.