ಬೆಳಗಾವಿ- ಚಿತ್ರದಲ್ಲಿ ಕಾಣುವ ಈ ದಂಪತಿಗಳು ಅಥಣಿಯವರು ಇವರು ಹಲವಾರು ದಶಕಗಳಿಂದ ಅಮೇರಿಕಾದಲ್ಲಿ ವೈದ್ಯರಾಗಿದ್ದಾರೆ. ನಾನು ಕಲಿತ ಶಾಲೆಗೆ, ಹುಟ್ಟಿದ ಊರಿಗೆ ಏನಾದ್ರೂ ಉಪಕಾರ ಮಾಡಬೇಕು ಎನ್ನುವ ಆಶಯ ಹೊಂದಿರುವ ಇವರು ಹುಟ್ಟಿದ ಊರಿನ ಜನರ ಅನಕೂಲಕ್ಕಾಗಿ ಬರೊಬ್ಬರಿ ಎಂಟು ಕೋಟಿ ₹ ದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಹಣವಂತರಿಗೆ ಮಾದರಿಯಾಗಿದ್ದಾರೆ, ಸ್ಪೂರ್ತಿಯಾಗಿದ್ದಾರೆ.ಇವರು ಮಾಡಿರುವ ದಾನ ಪ್ರೇರಣೆ ನೀಡಿದೆ.
ಇವರು ಸಾಮಾನ್ಯ ವೈದ್ಯರಲ್ಲಿ ಅಮೇರಿಕಾದಲ್ಲೂ ಇವರು ಪ್ರಸಿದ್ದಿ ಪಡೆದಿದ್ದಾರೆ. ಇವರು ಮಾಡಿದ ಸೇವೆಯನ್ನು ಗುರುತಿಸಿ ಅಮೇರಿಕಾದ ಮಿಸಸಿಪ್ಪಿಯಲ್ಲೂ ಇವರ ಹೆಸರನ್ನು ರಸ್ತೆಯೊಂದಕ್ಕೆ ಅಮೇರಿಕಾ ಸರ್ಕಾರ ನಾಮಕರಣ ಮಾಡಿದೆ.
ಈ ದಾನಿ ಬೆಳಗಾವಿ ಜಿಲ್ಲೆಯ ಅಥಣಿ ಮೂಲದವರು ಕೆಎಲ್ಇ ಸಂಸ್ಥೆಯ ಹಳೆವಿದ್ಯಾರ್ಥಿ ಸದ್ಯ ಅಮೆರಿಕದಲ್ಲಿ ನೆಲೆಸಿರುವ ಡಾ.ಸಂಪತ್‌ಕುಮಾರ ಶಿವಣಗಿ ಹಾಗೂ ಡಾ.ಉದಯಾ ಶಿವಣಗಿ ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆ ನಿರ್ಮಿಸಿದ ಕ್ಯಾನ್ಸರ್ ಆಸ್ಪತ್ರೆಗೆ 8ಕೋಟಿ ದೇಣಿಗೆ ನೀಡಿದ್ದಾರೆ. ಹೀಗಾಗಿ ಬೆಳಗಾವಿ ಕೆಎಲ್ಇ ಆವರಣದಲ್ಲಿ ನಿರ್ಮಾಣವಾಗಿರುವ ಕ್ಯಾನ್ಸರ್ ಆಸ್ಪತ್ರೆಗೆ ಡಾ. ಸಂಪತಕುಮಾರ್ ಶಿವಣಗೆ ಎಂದು ಹೆಸರನ್ನು ಇಡಲಾಗಿದೆ.
ಸದ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ, ಕಿಮೊಥೆರಪಿ, ರೇಡಿಯೊಥೆರಪಿ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಗಳು ಲಭ್ಯವಿದೆ. ರೋಗಿಗಳಿಗೆ ಅಡ್ಡಪರಿಣಾಮ ಬೀರದಂತೆ ಅತ್ಯಾಧುನಿಕ ರೋಬಾಟಿಕ್ ಶಸ್ತ್ರಚಿಕಿತ್ಸೆ ವಿಧಾನವನ್ನು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅಳವಡಿಕೆ ಮಾಡಲಾಗಿದ್ದು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಗಿಂತಲೂ ಗುಣಮಟ್ಟದ ವೈದ್ಯಕೀಯ ಸಲಕರಣೆ ಗಳು ನಮ್ಮಲ್ಲಿವೆ ಎಂದು ಪ್ರಭಾಕರ್ ಕೋರೆ ಮಾಹಿತಿ ನೀಡಿದ್ದಾರೆ.