Breaking News

ಬಿಜೆಪಿ ಬೆಳೆಸಿದ ಮನೆತನಕ್ಕೆ ಮಹತ್ವದ ಹುದ್ದೆ…

ಬೆಳಗಾವಿ-ದಿವಂಗತ ಸುರೇಶ್ ಅಂಗಡಿ ಅವರು ಬಿಜೆಪಿ ಸೇರಿರಲಿಲ್ಲ,ಈರಣ್ಣಾ ಕಡಾಡಿ ಬಿಜೆಪಿಯಲ್ಲಿ ಕಾಣಿಸಿರಲಿಲ್ಲ,ಅಭಯ ಪಾಟೀಲರು ಹಿರೇಬಾಗೇವಾಡಿಯಿಂದ ಚುನಾವಣೆಗೆ ಸ್ಪರ್ದಿಸುವ ಮೊದಲೇ ಬೆಳಗಾವಿ ಜಿಲ್ಲೆಯಲ್ಲಿ ಚಳುವಳಿಯ ಮುಖಾಂತರ ಕ್ರಾಂತಿ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬೀಜ ಬಿತ್ತಿದ ಮನೆತನಕ್ಕೆ ತಡವಾದರೂ ಮಹತ್ವದ ಹುದ್ದೆ ಒಲಿದು ಬಂದಿದೆ…

ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಕಿತ್ತೂರಿನಲ್ಲಿ ಕ್ರಾಂತಿ ಮಾಡುವ ಮೂಲಕ ಸರ್ಕಾರವನ್ನೇ ನಡುಗಿಸಿದ್ದ ಡಾ.ಗೋಪಾಲರಾವ್ ದೇಶಪಾಂಡೆ ಅವರು ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ ಬೀಜ ಬಿತ್ತಿ,ಬಿಜೆಪಿಯ ಬೇರುಗಳನ್ನು ಗಟ್ಟಿಗೊಳಿಸಿದ ಮೊದಲಿಗರು ಅವರು,ಯಾವುದೇ ಹುದ್ದೆ,ಅಧಿಕಾರಕ್ಕೆ ಆಸೆ ಪಡದ ಡಾ.ದೇಶಪಾಂಡೆ ಅವರು ಕಿತ್ತೂರಿನಲ್ಲಿ ಹೋರಾಟದ ಮೂಲಕ ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು.

ಚನ್ನಮ್ಮನ ಕಿತ್ತೂರಿನಲ್ಲಿ ಎಲ್ಲ ಬಸ್ ಗಳು ನಿಲುಗಡೆ ಆಗಬೇಕು,ಕಿತ್ತೂರು ಅಭವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು,ಕಿತ್ತೂರು ತಾಲ್ಲೂಕುಆಗಬೇಕೆಂದು ಗಟ್ಟಿಯಾಗಿ ಆವಾಜ್ ಹಾಕಿದ್ದರಿಂದಲೇ ಆಗಿನ ಮುಖ್ಯಮಂತ್ರಿಯಾಗಿದ್ದ ಎಸ್ ಬಂಗಾರಪ್ಪ ಅವರು ಡಾ.ಗೋಪಾಲರಾವ್ ದೇಶಪಾಂಡೆ ಅವರ ಎಲ್ಲ ಹೋರಾಟಗಳಿಗೆ ,ಎಸ್..ಎಸ್..ಎನ್ನುತ್ತಲೇ ಕಿತ್ತೂರಿನ ಬೇಡಿಕೆಗಳನ್ನು ಈಡೇರಿಸಿದ್ದರು,ಎಸ್ ಬಂಗಾರಪ್ಪ ಬಿಜೆಪಿಗೆ ಸೇರ್ಪಡೆಯಾದ ಬಳಿಕ,ಇದೇ ಡಾ.ಗೋಪಾಲರಾವ್ ದೇಶಪಾಂಡೆ ಕಿತ್ತೂರಿನ ಸುರೇಶ ಮಾರಿಹಾಳ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದರು.

ಕಿತ್ತೂರಿನ ಈ ಮಹಾನ್ ಹೋರಾಟಗಾರ,ಡಾ.ಗೋಪಾಲರಾವ್ ದೇಶಪಾಂಡೆ ನಮ್ಮನ್ನಗಲಿ ಬಹಳ ವರ್ಷಗಳು ಕಳೆದಿವೆ ಅತ್ಯಂತ ನಿಷ್ಠೆಯಿಂದ ಬಿಜೆಪಿ ಪಕ್ಷವನ್ನು ಸಂಘಟಿಸಿದ್ದ ಗೋಪಾಲರಾವ್ ದೇಶಪಾಂಡೆ ಬಿಜೆಪಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು.

ಬಹಳ ವರ್ಷಗಳ ನಂತರ ಡಾ. ಗೋಪಾಲರಾವ್ ದೇಶಪಾಂಡೆ ಅವರ ಹೋರಾಟವನ್ನು ಬಿಜೆಪಿ ನಾಯಕರು ಗುರುತಿಸಿದ್ದು,ಗೋಪಾಲರಾವ್ ಅವರ ಪುತ್ರ ಸಂದೀಪ್ ದೇಶಪಾಂಡೆ ಅವರಿಗೆ ಇದೇ ಮೊದಲ ಬಾರಿಗೆ ಮಹತ್ವದ ಹುದ್ದೆಯನ್ನು ನೀಡಿದೆ.ರಾಜು ಜಿಕ್ಕನಗೌಡರ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಸಂದೀಪ ದೇಶಪಾಂಡೆ ಅವರನ್ನು ನೇಮಕ ಮಾಡಲಾಗಿದೆ.

ಡಾ.ಗೋಪಾಲರಾವ್ ದೇಶಪಾಂಡೆ ಅವರ ಪುತ್ರ ಸಂದೀಪ ದೇಶಪಾಂಡೆ ಅವರನ್ನು ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಲಾಗಿದೆ.

ತಂದೆಯಂತೆ ಹೋರಾಟವನ್ನೇ ಮೈಗೂಡಿಸಿಕೊಂಡಿರುವ ಸಂದೀಪ ದೇಶಪಾಂಡೆ ಹಲವಾರು ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ಸೇವೆ ಮಾಡುತ್ತಿದ್ದು ಕ್ರಾಂತಿಕಾರಿ ಮನೋಭಾವ,ಅಪಾರ ಸಾಮಾಜಿಕ ಕಳಕಳಿ ಹೊಂದಿರುವ ಸಂದೀಪ ದೇಶಪಾಂಡೆ ಈಗ ಬಿಜೆಪಿ ಸಂಘಟನೆಯ ಮಹತ್ವದ ಜವಾಬ್ದಾರಿ ಹೊಂದಿದ್ದು ಈ ಹುದ್ದೆಯನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಗೊಳಿಸುವ ಶಕ್ತಿ ಅವರಲ್ಲಿದೆ..

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *