Breaking News

ರಮೇಶ್ ಜಾರಕಿಹೊಳಿ, ಸಂಜಯ ಪಾಟೀಲರಲ್ಲಿ ಕ್ಷಮೆಯಾಚಿಸಿದ್ದು ಯಾಕೆ ಗೊತ್ತಾ…?

ರಮೇಶ್ ಜಾರಕಿಹೊಳಿ, ಸಂಜಯ ಪಾಟೀಲಗೆ ಕ್ಷಮೆಯಾಚಿಸಿದ್ದು ಯಾಕೆ ಗೊತ್ತಾ…?

ಬೆಳಗಾವಿ- ಗೋಕಾಕಿನಲ್ಲಿ ನಡೆದ ಸಚಿವ ರಮೇಶ್ ಜಾರಕಿಹೊಳಿ ಅವರ ಅಭಿನಂದನಾ ಸಮಾವೇಶ ಅನೇಕ ಪ್ರಸಂಗಗಳಿಗೆ ಸಾಕ್ಷಿಯಾಯಿತು ಪರಸ್ಪರ ಕ್ಷಮೆ ಕೋರುವ ವೇದಿಕೆಯೂ ಇದಾಗಿತ್ತು

ಆರಂಭದಲ್ಲಿ ಮಾಜಿ ಶಾಸಕ ಸಂಜಯ ವಯ ಪಾಟೀಲ ಮಾತನಾಡಿ ,ನಾನು ಮಾಜಿ ಆಗಲು ರಮೇಶ್ ಜಾರಕಿಹೊಳಿ ಅವರೇ ಕಾರಣ , ಅವರು ಬಿಜೆಪಿಗೆ ದ ನಂತರ ನನಗೆ ಗೊತ್ತಾಯಿತು ಅವರ ಮನಸ್ಸಿನಲ್ಲಿ ಕಪಟ ಇಲ್ಲಾ ಅನ್ನೋದು,ಅವರು ಏನು ಮಾತಾಡ್ತಾರೆ,ಅದನ್ನು ಮಾಡಿ ತೋರಿಸುತ್ತಾರೆ,ನನ್ನ ವಿಷಯದಲ್ಲೂ ಅವರು ಮಾತಾಡಿದ್ದನ್ನು ಮಾಡಿ ತೋರಿಸಿದ ಕಾರಣ ಸಂಜಯ ಪಾಟೀಲ ಮಾಜಿ ಶಾಸಕನಾದ,ರಮೇಶ್ ಜಾರಕಿಹೊಳಿ ರಾಜಕೀಯ ರಂಗದ ಹುಲಿ,ವಿಶ್ವಾಸಕ್ಕೆತ್ತೊಂದು ಹೆಸರೇ ರಮೇಶ್ ಜಾರಕಿಹೊಳಿ,ಅವರ ಧೈರ್ಯದದಲೇ ಅವರು ಮಾಡಿದ ತ್ಯಾಗದಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ, ಅವರು ನೀರಾವರಿ ಮಂತ್ರಿ ಆಗ್ತಾರೆ ಎಂದು ಸಂಜಯ ಪಾಟೀಲ ರಮೇಶ್ ಜಾರಕಿಹೊಳಿ ಅವರನ್ನು ಹಾಡಿ ಮನತುಂಬಿ ಹೊಗಳಿದರು

ನಾನು ಮಾಜಿ ಶಾಸಕನಾಗಿಯೇ ಉಳಿಯುವ ಮನಸ್ಸಿಲ್ಲ,ನನ್ನ ಕಾರನ್ನು ಮನೆಯಲ್ಲೇ ಪಾರ್ಕ ಮಾಡಿದ್ದೇನೆ,ಅದನ್ನು ಹೊರಗೆ ತೆಗೆಯಲು ರಮೇಶ್ ಜಾರಕಿಹೊಳಿ ಅವರ ಆಶಿರ್ವಾದ ಬೇಕು ಎಂದು ಮಾತು ಮುಗಿಸಿದರು

ಸಂಜಯ ಪಾಟೀಲ ಮಾತು ಮುಗಿಸಿದ ಬಳಿಕ ಮಾತು ಆರಂಭಿಸಿದ ಸಚಿವ ರಮೇಶ್ ಜಾರಕಿಹೊಳಿ,ನನ್ನಿಂದ ತಪ್ಪಾಗಿದೆ ಸಂಜಯ ಪಾಟೀಲರಲ್ಲಿ ನಾನು ಕ್ಷಮೆ ಕೋರುತ್ತೇನೆ ,ಅವರಿಗಾದ ಅನ್ಯಾಯವನ್ಮು ಸರಿಪಡಿಸಿತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳುವ ಮೂಲಕ ಸಂಜಯ ಪಾಟೀಲರ ಭವಿಷ್ಯದ ಬಾಗಿಲು ತೆರೆದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *