Breaking News

ಪತ್ರಕರ್ತ ಸಂಜಯ ಸೂರ್ಯವಂಶಿಗೆ ವಿಶೇಷ, ಪುರಸ್ಕಾರ…

ಬೆಳಗಾವಿ-ಕಳೆದ ಎರಡು ದಶಕಗಳಿಂದ ವಿವಿಧ ಮರಾಠಿ ದಿನಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿರುವ,ಪುಡಾರಿ ಮರಾಠಿ ದಿನಪತ್ರಿಕೆಯ ಬೆಳಗಾವಿ ವಿಭಾಗದ ಸ್ಥಾನಿಕ ಸಂಪಾದಕಾಗಿರುವ ಸಂಜಯ ಸೂರ್ಯವಂಶಿ,ಅವರು ಮಹಾರಾಷ್ಟ್ರ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರ ಪತ್ರಕರ್ತರ ಸಂಘ ಪ್ರತಿ ವರ್ಷ ಮಹಾರಾಷ್ಟ್ರ ರಾಜ್ಯದ ಹೊರಗಡೆ ಸೇವೆ ಮಾಡುತ್ತಿರುವ ಮರಾಠಿ ಮತ್ರಕರ್ತರನ್ನು ಗೌರವಿಸುತ್ತಾ ಬಂದಿದ್ದು ಈ ಬಾರಿ ಈ ವಿಶೇಷ ಪುರಸ್ಕಾರಕ್ಕೆ ಬೆಳಗಾವಿಯ ಖ್ಯಾತ ಪತ್ರಕರ್ತ ಸಂಜಯ ಸೂರ್ಯವಂಶಿ ಆಯ್ಕೆಯಾಗಿರುವದು ಸಂತಸದ ಸಂಗತಿಯಾಗಿದೆ.

ಜನೇವರಿ 6 ರಂದು ಸಂಜೆ 4 ಗಂಟೆಗೆ ಮಹಾರಾಷ್ಟ್ರದ ಮುಂಬಯಿ ಯಲ್ಲಿರುವ ರಾಜಭವನದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ,ಭಗತಸಿಂಗ್ ಕೋಶಿಯಾರಿ ಅವರು ಸಂಜಯ ಸೂರ್ಯವಂಶಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ…

ವಿಶೇಷ ಪ್ರಶಸ್ತಿಗೆ ಭಾಜನರಾದ ಸಂಜಯ ಸೂರ್ಯವಂಶಿ ಅವರನ್ನು ಬೆಳಗಾವಿಯ ಪತ್ರಿಕಾ ಬಳಗ ಅಭಿನಂದಿಸಿದೆ..

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *