*ಬೆಳಗಾವಿ ಎಸ್ ಪಿ ಹೆಸರಲ್ಲಿ ನಕಲಿ ಖಾತೆ: ಹಣ ಕೇಳುತ್ತಿದ್ದಾರೆ ಖದೀಮರು*
ಬೆಳಗಾವಿ- ಜನಸಾಮಾನ್ಯರ ಫೇಸ್ ಬುಕ್, ಇನಸ್ಟಾಗ್ರಾಮ್ ಸೋಶಿಯಲ್ ಮಿಡಿಯಾದಲ್ಲಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಹಣ ಕೇಳುತ್ತಿದ್ದ ಸೈಬರ್ ಕಳ್ಳರು ಈಗ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಹೆಸರಿನಲ್ಲೂ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಹಣ ಕೇಳಿದ್ದಾರೆ.
ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ
ರಿ ಸಂಜೀವ ಪಾಟೀಲ ಅವರ ಹೆಸರಿನಲ್ಲಿ ಇನ್ಸ್ಟ್ರಾಗ್ರಾಂ ನಕಲಿ ಖಾತೆ ತೆರೆದು ಹಣ ಕೇಳುತ್ತಿರುವ ಖದೀಮರ ಮನವಿ ತಿರಸ್ಕರಿಸಿ ಎಚ್ಚರ ವಹಿಸುವಂತೆ ಎಸ್ ಪಿ ಸಂಜೀವ ಪಾಟೀಲ ಕೋರಿದ್ದಾರೆ.
ಎಸ್ ಪಿ ಸಂಜೀವ ಪಾಟೀಲ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸ್ನೇಹಿತರಿಗೆ, ಫೇಸ್ ಬುಕ್ ನಲ್ಲಿ ಇರುವ ಪರಿಚಯಸ್ಥರಿಗೆ ಹಣ ಕೇಳಲಾಗುತ್ತಿದೆ. ಈವರೆಗೆ ಅನೇಕರಿಗೆ ಹಣ ಕೇಳಿ ಗೂಗಲ್‌ಪೇ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್ ಪಿ ಸಂಜೀವ ಪಾಟೀಲ ಅವರ ಗಮನಕ್ಕೆ ವಿಷಯ ಬಂದಿದ್ದು, ಕೂಡಲೇ ಇದನ್ನು ತಿರಸ್ಕರಿಸುವಂತೆ ಕೋರಿದ್ದಾರೆ.
‘ನನ್ನ ಹೆಸರು ಮತ್ತು ಫೊಟೊ ಬಳಸಿ ಇನ್ಸ್ಟಾಗ್ರಾಂ ನಕಲಿ ಖಾತೆ ತೆರೆದು ಯಾರೋ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದುದು ಕಂಡು ಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಖಾತೆಗಳ ಮನವಿ ತಿರಸ್ಕರಿಸಿ ಈ ಬಗ್ಗೆ ಎಚ್ಚರ ವಹಿಸಲು’ ಎಸ್ ಪಿ ಸಂಜೀವ ಪಾಟೀಲ ಕೋರಿದ್ದಾರೆ.