ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ ಅನ್ನೋದು ಆದ್ರೆ ಸತೀಶ್ ಜಾರಕಿಹೊಳಿ ನನಗೂ ಸಿಎಂ ಆಗುವ ಆಸೆ ಇದೆ ಆದ್ರೆ ಈಗಲ್ಲ ನಂದೇನಿದ್ರೂ 2028 ಕ್ಕೆ ಸಿಎಂ ಆಗುವ ತಯಾರಿ ಅಂತೀದ್ದಾರೆ ಸಾಹುಕಾರ್
ಪದೇ ಪದೇ ಸಿಎಂ ಬದಲಾವಣೆಯ ಪ್ರಶ್ನೆ ಕೇಳಬೇಡಿ ಪ್ಲೀಸ್ ಪ್ಲೀಸ್ ಅಂದ್ರೂ ಸತೀಶ್ ಜಾರಕಿಹೊಳಿ ಅವರ ಮುಂದೇ ಎದುರಾಗುತ್ತಿರುವದು ಕೇವಲ ಒಂದೇ ಪ್ರಶ್ನೆ ಸಿದ್ರಾಮಯ್ಯ ಬದಲಾದ್ರೆ ನೀವೇ ಸಿಎಂ ? ಈ ಪ್ರಶ್ನೆಗೆ ಉತ್ತರ ಹೇಳಿ,ಹೇಳಿ ಸಾಹುಕಾರ್ ಸುಸ್ತಾಗಿದ್ದಾರೆ.ಅವರ ಅಭಿಮಾನಿಗಳು ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಂತಾ ಪೋಸ್ಟರ್ ಬ್ಯಾನರ್ ಹಚ್ಚುತ್ತಲೇ ಇದ್ದು ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಕ್ಯಾಂಪೇನ್ ನಡೀತಾ ಇದೆ.
ಸೆಪ್ಟೆಂಬರ್ 12 ಕ್ಕೆ ಹೈಕೋರ್ಟಿನಲ್ಲಿ ಪ್ರಾಸಿಕ್ಯುಷನ್ ಅನುಮತಿಯ ಬಗ್ಗೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಹೈಕೋರ್ಟಿನಲ್ಲಿ ಸಿದ್ರಾಮಯ್ಯನವರಿಗೆ ಹಿನ್ನಡೆ ಆದಲ್ಲಿ ಬೆಳಗಾವಿಯ ಮಾಸ್ಟರ್ ಮೈಂಡ್ ಸಿಎಂ ರೇಸ್ ನಲ್ಲಿ ಮುನ್ನಡೆ ಸಾಧಿಸುತ್ತಾರೆ ಅನ್ನೋದು ಸತೀಶ್ ಜಾರಕಿಹೊಳಿ ಅಭಿಮಾನಿಗಳ ಲೆಕ್ಕಾಚಾರ.
ರಾಜ್ಯರಾಜಕಾರಣದ ಗಡಗಿಯಲ್ಲಿ ಏನೋ ಕುದಿಯುತ್ತಿದೆ.ಆದ್ರೆ ಏನ್ ಕುದಿಯುತ್ತಿದೆ ಅನ್ನೋದು ವಾಸನೆ ಬರುತ್ತಿಲ್ಲ ಈ ಕುದಿ ಸೆಪ್ಟೆಂಬರ್ 12 ರ ನಂತರ ಹೆಚ್ಚಾಗಿ ಏನ್ ಕುದಿಯುತ್ತಿದೆ ಎಂದು ವಾಸನೆ ಬರಬಹುದು
ಸಿಎಂ ಬದಲಾದ್ರೆ ಯಾವುದೇ ಲೆಕ್ಕಾಚಾರ ನಡೆಯಲಿ,ಬೇಕಾದ್ರೆ ಗುಣಾಕಾರ ಮಾಡಲಿ ಭಾಗಾಕಾರ ಮಾಡಲಿ ಕೊನೆಗೆ ರಾಜಕೀಯ ಲೆಕ್ಕ ಪೂರ್ತಿ ಆಗೋದು ಸತೀಶ್ ಜಾರಕಿಹೊಳಿ ಅವರಿಂದ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಲೇ ಇದೆ.
ರಾಜಕೀಯ ಟೀಕೆ ಟಿಪ್ಪಣಿ ಏನೇ ಇರಲಿ ಸಿಎಂ ಸಿದ್ರಾಮಯ್ಯ ಶುದ್ಧಹಸ್ತದ ಪ್ರಾಮಾಣಿಕ ಜನಮೆಚ್ಚಿದ ನಾಯಕ,ಈಗಿನ ದೇವರಾಜ ಅರಸು, ಅವರನ್ನು ಬದಲಾಯಿಸುವದು ಅಷ್ಟು ಸುಲಭ ಇಲ್ಲ ಒಂದು ವೇಳೆ ಅವರನ್ನು ಬದಲಾಯಿಸುವ ಅನಿವಾರ್ಯತೆ ಕಾಂಗ್ರೆಸ್ ಗೆ ಎದುರಾದ್ರೆ ಅದಕ್ಕೆ ಸತೀಶ್ ಜಾರಕಿಹೊಳಿ ಒಂದೇ ಪರಿಹಾರ ಅಂತಾ ಹೇಳಲಾಗುತ್ತಿದ್ದು ಬೆಳಗಾವಿಯ ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಲಕ್ಕಿ ಸಿಎಂ ಆಗಬಹುದಾದ ವಾತಾವರಣ ಈಗ ಕರ್ನಾಟಕದಲ್ಲಿ ಸೃಷ್ಟಿಯಾಗಿದ್ದು ನಿಜ.