Breaking News

ಜವಾಬ್ದಾರಿಯೊಂದಿಗೆ ಮಾನವೀಯ ಅಂತಃಕರಣಕ್ಕೆ ಮತ್ತೊಂದು ಸಾಕ್ಷಿ ಒದಗಿಸಿದ ಶಾಸಕ ಸತೀಶ ಜಾರಕಿಹೊಳಿ

ಬೆಳಗಾವಿ- ಯಾವತ್ತೂ ಜನಸಾಮಾನ್ಯರ ಬಗ್ಗೆ ವಿಶೇಷ ಕಾಳಜಿ ತೋರುತ್ತ ಬಂದಿರುವ ಮಾಜಿ ಸಚಿವ, ಯಮಕನರಮರಡಿ ಕ್ಷೇತ್ರದ ಹಾಲಿ ಶಾಸಕ ಕೆಪಿಸಿಸಿ ಕಾರ್ಯಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಅವರು, ನಂಬಿರದ ಜನರಿಗೆ ಸಂಕಷ್ಟದ ಸಂದರ್ಭದಲ್ಲಿ ಕೈಹಿಡಿಯಬಲ್ಲ ವಿಶ್ವಾಸಕ್ಕೆ ಪಾತ್ರವಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಅದನ್ನು ಮತ್ತೊಮ್ಮೆ ಸಾಬೀತುಪಡೆಸಿದ್ದಾರೆ.

ಕೊರೊನಾ ದಾಳಿಗೆ ಸಿಲುಕಿದ ರೈತರ, ಬಡವರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದ ಸತೀಶ ಜಾರಕಿಹೊಳಿ ಅವರು, ರೈತರು ಬೆಳೆದ ತರಕಾರಿ ಮಾರಾಟಕ್ಕೆ ಸಾಧ್ಯವಾಗದೆ ಹೊಲದಲ್ಲಿಯೇ ಕೊಳೆತುಹೋಗುವ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಸ್ವತಃ ಹೊಲಗದ್ದೆಗಳಿಗೆ ಇಳಿದು, ರೈತರ ತರಕಾರಿಗಳನ್ನು ಖರೀದಿಸಿ, ಬಡವರಿಗೆ, ಅಸಹಾಯಕರಿಗೆ ಉಚಿತವಾಗಿ ಹಂಚುವುದರ ಮೂಲಕ ಏಕಕಾಲಕ್ಕೆ ರೈತರ ಮತ್ತು ಬಡವರ ಬದುಕಿಗೆ ಒಂದಿಷ್ಟು ನೆಮ್ಮದಿ ಮೂಡಿಸಿದರು.

*ಅಂತಃಕರಣಕ್ಕೆ ಸಾಕ್ಷಿ:*

ಶಾಸಕ ಸತೀಶ ಜಾರಕಿಹೊಳಿ ಅವರು ತರಕಾರಿ ಖರೀದಿಸಿ, ಬಡವರ ಮನೆಗಳಿಗೆ ಮುಟ್ಟಸಿ, ತಮ್ಮ ಮನೆಗೆ ಮರಳುವಷ್ಟರಲ್ಲಿ ಅವರ ಕರ್ತವ್ಯ ನಿರ್ವಹಣೆಗೆ ಸವಾಲಾಗಿ ಇನ್ನೊಂದು ಘಟನೆ ಕಾಯ್ದುಕುಳಿತಂತೆ ಎದುರಾಯಿತು. ಅದೇ ಅನಾಥರಾಗಿ ಬೀದಿಗೆ ನಿಂತಿದ ವಲಸೆ ಕಾರ್ಮಿಕರ ದಯನೀಯ ಸ್ಥಿತಿ. ಬೇರೆ ರಾಜ್ಯದಿಂದ ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದ ಮುಂಬಯಿ ಪುಣೆ ನಗರಗಳಿಂದ ಉದ್ಯೋಗ ಕಳೆದುಕೊಂಡು ಅಸಹಾಯಕರಾಗಿ ತಮ್ಮ ಊರುಗಳಿಗೆ ಮರಳಿದ ಕಾರ್ಮಿಕರು ಕೊರೊನಾ ಭಯದಿಂದಾಗಿ ಊರು ಸೇರದಂತಾಗಿ , ಇತ್ತೂ ಆಶ್ರಯವಿಲ್ಲದೆ ಉದ್ಯೋಗದ ಸ್ಥಳಗಳಿಗೆ ಮರಳದಂತಾಗಿ ಅಡಕತ್ತರಿಲ್ಲಿ ಸಿಕ್ಕು ಆಶ್ರಯವಿಲ್ಲದೆ ಅಕ್ಷರಷಃ ಅನಾಥರಾಗಿ ಬೀದಿಯಲ್ಲಿ ನಿಂತಿದ್ದರು.

ದೇಶದಲ್ಲಿ ಕೊರೊನಾ ಕೇಂದ್ರವೆಂದೇ ಬಿಂಬಿತವಾಗಿರುವ ಮುಂಬಯದಿಂದ ತಮ್ಮ ಊರುಗಳಿಗೆ ಆಗಮಿಸಿದ ಯಮಕನಮರಡಿ ಕ್ಷೇತ್ರದ ವಲಸೆ ಕಾರ್ಮಿಕರಿಗೆ ಊರಿನಜನ ಕೊರೊನಾ ಭಯದಿಂದ ಊರೊಳಗೆ ಸೇರಿಸಿಕೊಳ್ಳಲಿಲ್ಲ. ಕ್ವಾರಂಟೈನನಲ್ಲಿ ವ್ಯವಸ್ಥೆಯೂ ಆಗಿರಲಿಲ್ಲ. ಇಂಥ ಸಂದರ್ಭದಲ್ಲಿ ತಮ್ಮ ವಲಸೆ ಕಾರ್ಮಿಕರು ತನ್ನ ಕ್ಷೇತ್ರದವರು ಎಂದು ಅರಿತ ಸತೀಶ ಜರಕಿಹೊಳಿ ಅವರು ಹೆಚ್ಚು ಯೋಚನೆ ಮಾಡದೆ, ದಡ್ಡಿ ಗ್ರಾಮದ ಹತ್ತಿರದಲ್ಲಿ ಇರುವ ತಮ್ಮ ಸ್ವಂತ ಅತಿಥಿಗೃಹದಲ್ಲಿ ಅನಾಥರಾದ ಆ ಎಲ್ಲ ಸುಮಾರು 150 ವಲಸೆ ಕಾರ್ಮಿಕರಿಗೆ ಉಳಿದುಕೊಳ್ಳಲು ಅವಕಾಶಮಾಡಿಕೊಟ್ಟ, ಅವರಿಗೆ ಊಟ ತಿನಿಸುಗಳನ್ನೂ ನೋಡಿಕೊಳ್ಳುವುದರ ಮೂಲಕ ಅವರೊಳಗಿನ ಅಂತಃಕರಣಕ್ಕೆ ಸಾಕ್ಷಿಯಾದರು.

ಯಮಕನಮರಡಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸುಮಾರು ಒಂದು ಸಾವಿರ ಜನರಿಗೆ ಕ್ವಾರಂಟೈನ್ ಮಾಡಲಾಗಿದೆ.ಕ್ವಾರಂಟೈನ್ ಆಗಿರುವ ಎಲ್ಲರಿಗೂ ಬೆಳಿಗ್ಗೆ ಉಪಹಾರ,ಮದ್ಯಾಹ್ನದ ಊಟ,ರಾತ್ರಿ ಹೊತ್ತು ಊಟದ ವ್ಯೆವಸ್ಥೆ ಮಾಡಿರುವ ಸತೀಶ ಜಾರಕಿಹೊಳಿ ಅವರ ಕಾರ್ಯ ಇತರ ಜನನಾಯಕರಿಗೂ ಮಾದರಿಯಾಗಿದೆ.

ಬೀದಿಗೆ ನಿಂತಿದ್ದ ಕಾರ್ಮಿಕರು ಸತೀಶ ಅಣ್ಣ ಅವರ ಆಶ್ರಯದಲ್ಲಿ ನೆಮ್ಮದಿಯಾಗಿ ಸಂದಿಗ್ಧ ಸಮಯವನ್ನು ಪಾರುಮಾಡುತ್ತಿದ್ದಾರೆ. ಆಶ್ರಯ ಪಡೆದುಕೊಂಡ ಕಾರ್ಮಿಕರು ಸತೀಶ ಅಣ್ಣ ಅವರು ನಮ್ಮ ಪಾಲಿಗೆ ನಿಜವಾದ ದೇವರಾದರು ಎಂದು ಬಾಯ್ತುಂಬ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಸತೀಶ ಜಾರಕಿಹೊಳಿ ಅವರು ಕಾರ್ಯವೈಖರಿ.
***

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.