ಬೆಳಗಾವಿ ಬೈ ಇಲೆಕ್ಷನ್ ಕಾಂಗ್ರೆಸ್ಸಿನಿಂದ ಗ್ರೀನ್, ಗ್ರೀನ್ ಸಿಗ್ನಲ್….!!!

ಬೆಳಗಾವಿ-ಬಣ್ಣದಾಟದ ದಿನವೇ ಉಪ ಚುನಾವಣೆಯ ಖರೇ ಖರೇ ಆಟ ಈಗ ಶುರುವಾಗಿದ್ದು,ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಸತೀಶ್ ಜಾರಕಿಹೊಳಿ ಅವರು ಇಂದು ನಾಮಪತ್ರ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್,ಎಂಬಿ ಪಾಟೀಲ,ಆರ್ ವ್ಗಿ ದೇಶಪಾಂಡೆ,ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಸತೀಶ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದರು.

ಬಣ್ಣದ ಹಬ್ಬದ ದಿನವೇ ಸತೀಶ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದ್ದು ವಿಶೇಷ,ಜೊತೆಗೆ ಸತೀಶ್ ಹಸಿರು ಶಾಲು ಧರಿಸಿ ನಾಮಪತ್ರ ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದರು.

ವಾದ್ಯ ಮೇಳ ಇರಲಿಲ್ಲ,ಜನರ ಗದ್ದಲವೂ ಕಾಣಲಿಲ್ಲ ಅತ್ಯಂತ ಸರಳವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ನಾಯಕರ ಪಡೆ,ಕೆಲವೇ ಹೊತ್ತಿನಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸತೀಶ್ ಜಾರಕಿಹೊಳಿ‌ ಅವರು,ಕಾಂಗ್ರೆಸ್ ಭವನದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಲೋಕಸಭೆ ಉಪ ಚುನಾವಣೆಯಲ್ಲಿ ಗೆಲವು ಸಾಧಿಸಲು ಕಾರ್ಯಕರ್ತರು ತಮ್ಮ ತಮ್ಮ ಗ್ರಾಮಗಳಲ್ಲಿ ಶ್ರಮಿಸಬೇಕು,ಎಂದು ಕರೆ ನೀಡಿದ್ರು…

ಸಿಕ್ಕಿಬಿದ್ದ ಕಳ್ಳ…

ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ನಾಯಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಚಾಲಾಕಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಕಳ್ಳ ಕಾಂಗ್ರೆಸ್ ನಾಯಕನ ಜೇಬಿಗೆ ಕತ್ತರಿ ಹಾಕುತ್ತಿರುವಾಗ ಆತನನ್ನು ರೆಡ್ ಹ್ಯಾಂಡಾಗಿ ಹಿಡಿದು ಥಳಿಸಿ ಪೋಲೀಸರಿಗೆ ಒಪ್ಪಿಸಲಾಯಿತು.

ಪೂಜಾರಿ ಕಾಂಗ್ರೆಸ್ಸಿಗೆ…

ನಾನು ನಾಲ್ಕು ಭಾರಿ ವಿಧಾನಸಭೆಗೆ ಸ್ಪರ್ದೆ ಮಾಡಿದ್ದೆನೆ,ನಾನು ಅನಿವಾರ್ಯ ವಾಗಿ ಪಕ್ಷ ಬದಲಾವಣೆ ಮಾಡಿತ್ತಿದ್ದೆನೆ, ಸಿದ್ದರಾಮಯ್ಯ, ಡಿಕೆಶಿ ಅವರು ಕಾಂಗ್ರೆಸ್ ಗೆ ಬರಬೇಕು ಅಂತ ಅಹ್ವಾನ ಕೊಟ್ಟಿದ್ದಾರೆ,ನಾನು ನಿನ್ನೆ ಕಾರ್ಯಕರ್ತರ ಜೊತೆ ಮಾತನಾಡಿದ್ದೆನೆ,ಗೋಕಾಕ್ ತಾಲೂಕಿನ ರಾಜಕೀಯ ವ್ಯವಸ್ಥೆ ಭದಲಾವಣೆಗಾಗಿ ನಾನು ಜನರ ಅಭಿಪ್ರಾಯ ಕೇಳಿಕ್ಕೊಂಡಿದ್ದೆನೆ,ಎಪ್ರಿಲ್ 2 ಕ್ಕೆ ಅಧಿಕೃತವಾಗಿ ಕಾಂಗ್ರೆಸ್ ಸೆರ್ಪಡೆ ಯಾಗುತ್ತಿದ್ದೆನೆ, ಎಂದು ಅಶೋಕ ಪೂಜಾರಿ ಹೇಳಿದ್ದಾರೆ.ಬೆಳಗಾವಿ ಸಾಂಬ್ರಾ ಏರಪೋರ್ಟ ನಲ್ಲಿ ಅಶೋಕ ಪೋಜಾರಿ ಮಾದ್ಯಮಗಳ ಜೊತೆ ಮಾತನಾಡಿ  ಕಾಂಗ್ರೆಸ್ ಸೇರುವ ವಿಷಯ ಬಹಿರಂಗಪಡಿಸಿದ್ದಾರೆ..

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *