ಬೆಳಗಾವಿ- ಡಿಕೆ ಶಿವಕುಮಾರ ಮಾಜಿ ಸಚಿವ ಸತೀಶ ಜಾರಕಿಹೊಳಿಯನ್ನ ದುಶ್ಯಾಸನಕ್ಕೆ ಹೊಲಿಸಿದ ಪ್ರಕರಣದ ಕುರಿತು ಬೆಳಗಾವಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ.ನೀಡಿದ್ದಾರೆ ಸುಳೇಭಾವಿ ಕಾರ್ಯಕ್ರಮದಲ್ಲಿ ಅವರು ನನ್ನ ಹೆಸರನ್ನೂ ಹೇಳಿಲ್ಲ ನಾನೂ ಅವರ ಹೆಸರು ಹೇಳಿಲ್ಲ ಎಂದು ಸತೀಶ ಪ್ರತಿಕ್ರಿಯೆ ನೀಡಿದ್ದಾರೆ
ಅವರು ಯಾರ ಹೆಸರು ತೆಗೆದುಕೊಂಡು ಹೇಳಿಲ್ಲ. ಹೀಗಾಗಿ ನಾನು ಡಿ.ಕೆ.ಶಿ ಹೇಳಿಕೆಗೆ ಪ್ರತಿಕ್ರಿಯಸಲ್ಲ. ಸೀರೆ ಹಂಚಿಕೆ ವಿಚಾರದಲ್ಲೂ ನಾನ್ಯಾರ ಹೆಸರು ತೆಗೆದುಕೊಂಡಿಲ್ಲ ಎಂದು ಸತೀಶ್ ಪ್ರತಿಕ್ರಿಯೆ ನೀಡಿದ್ದಾರೆ
ಸಚಿವ ರಮೇಶ ಜಾರಕಿಹೊಳಿ ನೀಡಿದ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು
ಸಚಿವ ರಮೇಶ ಗೋಕಾಕದಲ್ಲಿ ನನ್ನನ್ನು ಸೋಲಿಸಲು ಪ್ರಯತ್ನಿಸುದ್ರು ಎಂದು ಸಹೋದರ ಸತೀಶ ಮೇಲೆ ಪರೋಕ್ಷಪ ಆರೋಪ ಮಾಡಿದ್ರು. ಗೋಕಾಕದಲ್ಲಿ ಜಾರಕಿಹೊಳಿ ಹೆಸರು ನೋಡಿ ಮತಹಾಕಿದ್ದಾರೆ. ಅಲ್ಲಿ ಯಾರನ್ನು ಸೋಲಿಸಲು ಪ್ರಯತ್ನ ಮಾಡಿಲ್ಲ.
ಪಕ್ಷದ ಹಿತದೃಷ್ಟಿಯಿಂದ ಬೆಳಗಾವಿ, ಚಿಕ್ಕೋಡಿ ಜಿಲ್ಲೆಯಿಂದ ಕಾಂಗ್ರೆಸ್ ಜಿಲ್ಲಾ ಘಟಕಗಳಾಗಿ ವಿಂಗಡಿಸಲಾಗುವುದು ಎಂದು ಸತೀಶ್ ತಿಳಿಸಿದರು
ಇದೇ ಸಂಧರ್ಭದಲ್ಲಿ ಲೋಕೋಪಯೋಗಿ ಸಚಿವ ಮಹಾದೇವಪ್ಪ ಮಾತನಾಡಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸತೀಶ ಜಾರಕಿಹೊಳಿ ಕಡೆಗಣನೆ ಆರೋಪ ಸೂಕ್ತವಲ್ಲ ಸತೀಶ್ ಜಾರಕಿಹೊಳಿ ಪ್ರಮುಖ ರಾಜ್ಯ ಮಟ್ಟದ ರಾಜ್ಯ ನಾಯಕ. ಅವರನ್ನು ಕಡೆಗಣೆನೆ ಅನ್ನೋದು ಹಾಸ್ಯಾಸ್ಪದ ವಿಚಾರ ಎಂದಿದ್ದಾರೆ
ಪುತ್ರನ ರಾಜಕೀಯ ಪ್ರವೇಶ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು
ನನ್ನ ಪುತ್ರ ಕಾಂಗ್ರೆಸ್ ಪಕ್ಷ ಕಾರ್ಯಕರ್ತ. ಕಳೆದ ಅನೇಕ ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದಾನೆ.
ಕಾರ್ಯಕರ್ತರ ಒತ್ತಾಯ, ಜನ ಬಯಸಿದ್ದರೆ ರಾಜಕೀಯಕ್ಕೆ ಬರಬಹುದು ಎಂದು ಸಚಿವ
ಮಹಾದೇವಪ್ಪ ಹೇಳಿದ್ದಾರೆ