ಬೆಳಗಾವಿ- ಬೆಳಗಾವಿ ಕಾಂಗ್ರೆಸ್ ಪಕ್ಷ ಕೆಲವೇ ಕೆಲವು ಕುಟುಂಬಗಳ ಆಸ್ತಿಯಾಗಿದೆ ಇಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲ ಕಾಂಗ್ರೆಸ್ ಪಧಾದಿಕಾರಿಗಳ ನೇಮಕದ ವಿಷಯದಲ್ಲಿ ಬಿಲ್ಡರ್ ಗಳಿಗೆ ಎಕ್ಸೈಜ್ ಕಂಟ್ರಾಕ್ಟರ್ ಗಳಿಗೆ ಗುತ್ತಿಗೆದಾರರಿಗೆ ಸ್ಥಾನಮಾನ ನೀಡಲಾಗಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಕಳವಳ ವ್ಯೆಕ್ತಪಡಿಸಿದ್ದಾರೆ
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಾಮಾನ್ಯ ಕಾರ್ಯಕರ್ತ ತಪ್ಪು ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳುವ ನಾಯಕರು ದೊಡ್ಡವರು ತಪ್ಪು ಮಾಡಿದಾಗ ಮೌನರಾಗ್ತಾರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೆಲವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಈ ಕ್ಷೇತ್ರದಲ್ಲಿ ಒಬ್ಬ ಮಹಿಳೆ ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡುತ್ತಿರುವಾಗ ಇದನ್ನು ಸಹಿಸದ ಸತೀಶ ಜಾರಕಿಹೊಳಿ ಸೀರೆ ಬಗ್ಗೆ ಮಾತನಾಡುವದು ಸರಿಯಲ್ಲ ಹೆಬ್ಬಾಳಕರ ಕಾಂಗ್ರೆಸ್ ಅಭ್ಯರ್ಥಿ ಅವರ ಗೆಲವಿಗೆ ಎಲ್ಲರೂ ಶ್ರಮಿಸಬೇಕು ಎಂದು ಶಂಕರ ಮುನವಳ್ಳಿ ಸತೀಶ ಜಾರಕಿಹೊಳಿಗೆ ಟಾಂಗ್ ಕೊಟ್ಟರು
ಬೆಳಗಾವಿ ಕಾಂಗ್ರೆಸ್ ಸಂಘಟನೆಯ ಉಸ್ತುವಾರಿ ನೋಡಿಕೊಳ್ಳಲು ಬೆಳಗಾವಿಗೆ ಬಂದಿರುವ ಮಾನಿಕ್ಕಮ್ ಟ್ಯಾಗೋರ್ ಮತ್ತು ಮೋಹನ ಎಂಬಾತರು ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗುತ್ತಿಲ್ಲ ಅವರ ಪೋಲಮಿ ಮಾಡುವ ನಾಯಕರ ಮರ್ಜಿ ಕಾಯುತ್ತಿದ್ದಾರೆ ಅವರು ಕೆಲವೇ ಕೆಲವು ಬಲಾಡ್ಯರ ಚಮಚಾಗಳಂತೆ ವರ್ತಿಸುವದು ಸರಿಯಲ್ಲ ಎಂದು ಮುನವಳ್ಳಿ ಆಕ್ರೋಶ ವ್ಯೆಕ್ತಪಡಿಸಿದ್ದಾರೆ
ಮುಖ್ಯಮಂತ್ರಿಗಳ ಎದುರೇ ಹಲವಾರು ಜನ ರಾಜ್ಯಮಟ್ಟದ ನಾಯಕರು ಸತೀಶ ವಿರುದ್ಧ ಆರೋಪ ಮಾಡಿದರೂ ಭೋಸರಾಜು ಎಂಬುವವರು ಸತೀಶ ವಿರುದ್ಧ ಕ್ರಮ ಕೈಗೊಳ್ಳುವ ಮನಸ್ಸು ಏಕೆ ಮಾಡುತ್ತಿಲ್ಲ ಸಾಮಾನ್ಯ ಕಾರ್ಯಕರ್ತ ತಪ್ಪು ಮಾಡಿದಾಗ ಗುಬ್ಬಿ ಮೇಲೆ ಭ್ರಮ್ಮಾಸ್ತ್ರ ಉಪಯೋಗಿಸುವದು ಯಾವ ನ್ಯಾಯ ಸ್ವಾಮಿ ಎಂದು ಶಂಕರ ಮುನವಳ್ಳಿ ಪ್ರಶ್ನಿಸಿದ್ದಾರೆ
ಪ್ರಯಾಣಿಕ ಕಾರ್ಯಕರ್ತರಿಗೆ ಅನ್ಯಾಯ ಆದಾಗ ನಾನು ಪ್ರತಿಭಟಿಸುತ್ತೇನೆ ಅವರಿಗೆ ಸ್ಥಾನ ಮಾನ ಸಿಗದೇ ಇದ್ದಾಗ ಅವರ ಪರವಾಗಿ ಹೋರಾಟ ಮಾಡುತ್ತೇನೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಷ್ಠಾವಂತರಿಗೆ ಟಿಕೆಟ್ ಸಿಗದೇ ಹೋದಲ್ಲಿ ಉತ್ತರ ಕರ್ನಾಟಕದ 56 ಕ್ಷೇತ್ರಗಳಿಂದ ನಿಷ್ಠಾವಂತ ಕಾಂಗ್ರೆಸ್ ವೇದಿಕೆಯಿಂದ ಅಭ್ಯರ್ಥಿ ಗಳನ್ನು ನಿಲ್ಲಿಸುತ್ತೇವೆ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸುತ್ತೇವೆ
ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕೋಟ್ಯಾಂತರ ರೂ ಖರ್ಚು ಮಾಡಿದ್ದೇನೆ ಪಕ್ಷಕ್ಕಾಗಿ ಎನೆಲ್ಲ ಮಾಡಿದ್ದೇನೆ ಆದರೆ ಪಕ್ಷದಿಂದ ಯಾವ ಲಾಭವನ್ನೂ ಪಡೆದಿಲ್ಲ ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಗಲಿ ಬಿಡಲಿ ಬೆಳಗಾವಿ ದಕ್ಷಿಣ ಮತಕ್ಷೆತ್ರದಿಂದ ಸ್ಪರ್ದೆ ಮಾಡುತ್ತೇನೆ ಎಂದು ಶಂಕರ ಮುನವಳ್ಳಿ ಹೇಳಿದ್ದಾರೆ
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …