ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಶುರುವಾಯ್ತು…!!

ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಯಮಕನಮರಡಿ: ಯಮಕನಮರಡಿ ವಿಧಾನ ಸಭಾ ಕ್ಷೇತ್ರದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕೆ ಸೇರ್ಪಡೆಗೊಂಡರು

ಕೋಚರಿ ಗ್ರಾಮದ ಪಿಂಟುಗೌಡ ಪಾಟೀಲ ಈರಣ್ಣ ನಾಯಿಕ ಅಮೀತ ನಾಯಿಕ ಮಂಜುನಾಥ ಮಗದುಮ್ಮ ಮಹಾಂತೇಶ ಘೋಡಗೇರಿ ಅರುಣ ಹಿಪ್ಪರಗಿ ರಾಹುಲ ಲೋಳಸೋರಿ ಕಿರಣ ಪಾಟೀಲ ಹಾಗೂ ಯುವಕರು ಸೇರ್ಪಡೆಯಾದರು, ಕೆಪಿಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ.
ಈ ಭಾಗದ ಕುಡಿಯುವ ಭವನೆ ನಿಗಿಸಿದ ಜನನಾಯಕ, ಅವರ ಶ್ರಮಿಕತೆಗೆ ಮೆಚ್ಚಿ ನಾವು ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲಿಸಿದ್ದೆವೆ ಎಂದು ಕಾಂಗ್ರೆಸ್ ಗೆ ಸೇರ್ಪಡೆಯಾದ ಕಾರ್ಯಕರ್ತರು ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಇಲಿಯಾಸ ಬೇಗ, ಇನಾಮದಾರ ಶಾಸಕರ ಆಪ್ತ ಸಹಾಯಕರಾದ ಪ್ರಕಾಶ ಬಸ್ಸಾಪುರಿ, ಯಮಕನಮರಡಿ ಬ್ಲಾಕ್ ಅಧ್ಯಕ್ಷ ಈರಣ್ಣ ಬಿಸಿರೋಟ್ಟಿ , ಸೂರ್ಯಕಾಂತ ನಾಯಿಕ, ಮಲಗೌಡ ಪಾಟೀಲ , ಗಣೇಶಗೌಡ ಪಾಟೀಲ , ರಾಮಣ್ಣ ಚೌಗಲ್, ಚಂದರ ನಾಯಿಕ , ರೇವಣ್ಣ ಮಾಳಂಗಿ , ಶಿವಗೌಡ ಪಾಟೀಲ , ರಾಜಾಸಾಹೇಬ ಆಜರೇ, ಕೋಚರಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *