ಬೆಳಗಾವಿ- ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ,ಮೊಟ್ಟೆ ಎಸೆದಿದ್ದು ಗೊತ್ತಿಲ್ಲ, ಪ್ರತಿಭಟನೆ ಮಾಡೋದನ್ನ ನೋಡಿದ್ದೇವೆ.ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾದ್ಯಮಗಳ ಜೊತೆ ಮಾತನಾಡಿ,ಪೊಲೀಸರು ಕ್ರಮ ಕೈಗೊಳ್ಳಲು ನಮ್ಮ ಸಿಎಲ್‌ಪಿ ನಾಯಕರು ಅಗ್ರಹ ಮಾಡಿದ್ದಾರೆ.ಟೆನ್ಸ್ ಏರಿಯಾ ಇರೋದ್ರಿಂದ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು.ಪೊಲೀಸರು ಏನು ಕ್ರಮ ವಹಿಸುತ್ತಾರೆ ಅದರ ಮೇಲೆ ಡಿಪೆಂಡ್ ಆಗ್ತದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆಯಾ ಎಂದು ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ಸತೀಶ್ ಜಾರಕಿಹೊಳಿ,ಈಗಾಗಲೇ ಮಂತ್ರಿಗಳು ಹೇಳಿದ್ದಾರಲ್ಲ ಮ್ಯಾನೇಜಮೆಂಟ್ ಅಂತಾ ,ಸರ್ಕಾರ ನಡೀತಿಲ್ಲ ಮ್ಯಾನೇಜ್‌ಮೆಂಟ್ ನಡೀತಿದೆ.ಅವರ ಮಂತ್ರಿಗಳೇ ಹೇಳಿದ್ದಾರೆ ಅದಕ್ಕಿಂತ ಹೆಚ್ಚಿನ ಶಬ್ದ ಹೇಳುವ ಅವಶ್ಯಕತೆ ಇಲ್ಲ.ಜಸ್ಟ್ ಮ್ಯಾನೇಜ್‌ಮೆಂಟ್ ಇದು, ತಳ್ಳತ್ತಾ ಇದೀವಿ ಗಾಡಿ ಹೋಗ್ತಿದೆ ಅಷ್ಟೇ,ಯಾರು ಏನ್ ಮಾಡೋರು ಮಾಡ್ತಾರೆ ಅವರು ಹೇಳುವಂತ ಉದ್ದೇಶವಷ್ಟೇ ಅಂದ್ರು ಸತೀಶ್.ಸರ್ಕಾರ ಏನಾದರೂ ಮಾಡಿಸುತ್ತಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಸ್ಥಳೀಯ ಮುಖಂಡರು, ಪ್ರಭಾವಿ ನಾಯಕರು ಇಲ್ಲದೇ ಮಾಡಕ್ಕಾಗಲ್ಲ,
ಜಿಲ್ಲೆಯ ಯಾವುದೇ ನಾಯಕರ ಪ್ರಚೋದನೆ ಇಲ್ಲದೇ ಈ ರೀತಿ ಕಾರ್ಯಕ್ರಮ ಮಾಡಕ್ಕಾಗಲ್ಲ.ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.
ಪಂಜಾಬ್ ನಲ್ಲಿ ಪ್ರಧಾನಿ ಭದ್ರತಾ ಲೋಪ ಆದಾಗ ಸರ್ಕಾರ ಮೇಲೆ ಆರೋಪ ಮಾಡುವ ಪ್ರಯತ್ನ ಮಾಡಿದ್ರು,ಇವರಲ್ಲಿ ಪ್ರತಿ ದಿವಸ ಲೋಪಗಳು ಆಗಿಯೇ ಆಗುತ್ತೆ,ಸರಿಪಡಿಸುವ ಪ್ರಯತ್ನ ಮಾಡಿ ಎಲ್ಲ ಜನರಿಗೆ ರಕ್ಷಣೆ ಕೊಡಬೇಕು,ಗೋಡ್ಸೆ ಭಾವಚಿತ್ರ ದ ಫ್ಲೆಕ್ಸ್ ಹಾಕಿದ ವಿಚಾರ,ಅವರ ಅಜೆಂಡಾ ಇರೋದೆ ಅದು, ಹಂತಹಂತವಾಗಿ ಜಾರಿ ತರ್ತಾರೆ,ಅವಕಾಶ ಸಿಕ್ಕಾಗ ಇದನ್ನ ಅವರು ಬಳಸಿಕೊಳ್ಳುತ್ತಾರೆ,ಮೊನ್ನೆ ನೆಹರುರವರ ಚಿತ್ರ ಬಿಟ್ರು, ಸಾವರ್ಕರ್, ಗೋಡ್ಸೆ ಅವರ ಚಿತ್ರ ಹಾಕ್ತಾರೆ.ಜನ ತಿಳಿದುಕೊಳ್ಳಬೇಕು ಅಷ್ಟೇ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ರು.
ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ,ಯಾವುದೇ ಏರಿಯಾದಲ್ಲಿ ಯಾರ ಫೋಟೋ ಬೇಕಾದರೂ ಹಾಕಬಹುದು.ಇದು ಪ್ರಜಾಪ್ರಭುತ್ವ, ನಿರ್ದಿಷ್ಟವಾಗಿ ಇಲ್ಲೇ ಹಾಕಿ ಅಂತಾ ಹೇಳಕ್ಕಾಗಲ್ಲಎಲ್ಲಿ ಬೇಕಾದಲ್ಲಿ ಫೋಟೋ ಹಾಕಬಹುದು.
ಫೋಟೋ ಹಾಕಲಿಕ್ಕೆ ನಿರ್ಬಂಧ ಇರಬಾರದು.
ಎಲ್ಲಿ ಬೇಕಾದಲ್ಲಿ ಫೋಟೋ ಹಾಕಲು ಎಲ್ಲರಿಗೂ ಸ್ವಾತಂತ್ರ್ಯ ಇದೆ, ಸಮಾನ ಅವಕಾಶ ಇದೆ ಅಂದ್ರು.
ಆದ್ರೆ ಮಡಿಕೇರಿಯ ಘಟನೆ ಪೂರ್ವ ನಿಯೋಜಿತ, ಇದನ್ನ ಖಂಡಿಸುತ್ತೇವೆಪೊಲೀಸರು ಕ್ರಮ ಕೈಗೊಳ್ಳಬೇಕು
ಮಡಿಕೇರಿ ಘಟನೆ ಖಂಡಿಸಿ ಆ.26ಕ್ಕೆ ಪ್ರತಿಭಟನೆ ಇದೆ, ನಾವು ಇಲ್ಲಿಯೇ ಮಾಡ್ತೀವಿ,ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತೀವಿ.ಚುನಾವಣೆ ಸಮೀಪಿಸುತ್ತಿದ್ದಂತೆ ಈ ರೀತಿ ಘಟನೆ ಮರುಕಳಿಸುತ್ತಿವೆ ಅಂತಾ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಇನ್ನೂ ಆಗುತ್ತೆ, ಜನವರಿ ನಂತರ ಬಹಳಷ್ಟು ಓಪನ್ ಮಾಡ್ತಾರೆ.ಇದೇನು ಹೊಸದಲ್ಲ, ಜನವರಿವರೆಗೆ ಕಾಯ್ದು ನೋಡಿ.ಅಲ್ಲಿಂದ ಅವರದ್ದು ರಿಯಲ್ ಸ್ಟೋರಿ ಸ್ಟಾರ್ಟ್ ಆಗುತ್ತೆ ಎಂದರು.
ಸಿದ್ದರಾಮಯ್ಯೋತ್ಸವ ಜನ ಸೇರಿದ್ದು ಕೌಂಟರ್ ಮಾಡಲಿಕ್ಕೆ ಬಿಜೆಪಿಯವರು ಯಡಿಯೂರಪ್ಪ ಅವರಿಗೆ ಎರಡು ಸ್ಥಾನ ಕೊಟ್ಡಿದ್ದಾರೆ. . ಎಂದು ಸತೀಶ್ ಜಾರಕಿಹೊಳಿ ಹೇಳಿದರು.