Breaking News

ಬೆಳಗಾವಿ ಮಹಾನಗರದಲ್ಲಿ ನಾಗ ಪಂಚಮಿ ಬದಲು ಬಸವ ಪಂಚಮಿ ಆಚರಣೆ

ಬೆಳಗಾವಿ:
ಸಮಾಜದಲ್ಲಿರುವ ಮೌಡ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಚಾರಿ ಗುರು ಬಸವ ಬಳಗ ಹಾಗೂ ಮಾನವ ಬಂದುತ್ವ ವೇದಿಕೆ ವತಿಯಿಂದ ನಗರದಲ್ಲಿ ವೈಶಿಷ್ಟ್ಯ ಪೂರ್ಣವಾಗಿ ನಾಗರಪ ಪಂಚಮಿ ಹಬ್ಬವನ್ನು ಆಚರಿಸಲಾಯಿತು.
ಬೆಳಗಾವಿ ಅಜಂ ನಗರದಲ್ಲಿರುವ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಮಕ್ಕಳಿಗೆ ಹಾಲುಣಿಸುವ ಮೂಲಕ ನಾಗಪಂಚಮಿ ಬದಲು ಬಸವ ಪಂಚಮಿಯನ್ನು ಆಚರಿಸಿದರು.
ಬೆಳಗಾವಿ ನಗರದ ಅಂಧ ಮತ್ತು ಕಿವುಡ ಹಾಗೂ ಎಚ್‍ಐವಿ ಪೀಡಿತ ನೂರಾರು ಜನ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕಲ್ಲು ನಾಗರಕ್ಕೆ ಹಾಲೆರೆಯುವ ಸಂಪ್ರದಾಯಕ್ಕೆ ತಿಲಾಂಜಲಿ ಇಡಲಾಯಿತು.
ಈ ಸಂದರ್ಭದಲ್ಲಿ ಮತನಾಡಿದ ಸತೀಶ್ ಜಾರಕಿಹೊಳಿ, ಧರ್ಮ, ಜಾತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ಸಮಾಜಿಕ ಶೋಷಣೆ ನಡೆಯುತ್ತಿದೆ. ಭಾರತದಲ್ಲಿ 36ಸಾವಿರ ಕೋಟಿ ದೇವತೆಗಳಿವೆ. ಎಲ್ಲ ದೇವತೆಗಳನ್ನು ತೃಪ್ತಿ ಪಡಿಸಲು ಮಾನವನಿಂದ ಸಾಧ್ಯವಿಲ್ಲ. ಯಾವುದೇ ದೇವರು ಇಂಥಹದೇ ಆಹಾರ ಬೇಕು ಎಂದು ಕೇಳುವುದಿಲ್ಲ. ಆದರೆ ನಾವು ಕಂಡ ಕಂಡ ದೇವರುಗಳಿಗೆ ಎಡೆ ಹಿಡಿಯುತ್ತೇವೆ. ಆಹಾರವನ್ನು ಪೋಲು ಮಾಡುತ್ತೇವೆ. ದೇವರಿಗೆ ಎಡೆಹಿಡಿಯುವ ಬದಲಾಗಿ ಹಸಿದ ಹೊಟ್ಟೆಗಳಿಗೆ ಆಹಾರ ನೀಡಿದರೇ ಆ ಭಗವಂತನೂ ಖುಷಿ ಪಡುತ್ತಾನೆ. ಹಾವು ಸಸ್ತನಿ ಇದು ಹಾಲು ಕುಡಿಯುವುದಿಲ್ಲ. ಆದರೆ ಸಂಪ್ರದಾಯದಂತೆ ಮೌಡ್ಯತೆಗೆ ಒಳಗಾಗಿ ಕಲ್ಲು ನಾಗರಕ್ಕೆ ಹಾಲೆರೆಯುವದು ಸರಿಯಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರ ಕಿರಣ ಸಾಯಿನಾಕ, ಜಿಪಂ ಉಪಾಧ್ಯಕ್ಷ ಅರವಿಂದ ಕಟಾಂಬಳೆ, ಸರಳಾ ಹೇರೇಕರ, ಕಸ್ತೂರಿ ಬಂಗೇರಿ, ಬಸವರಾಜ ಹುಬ್ಬಳ್ಳಿ, ರೇವತಿ ಹೊಸಮಠ, ಶಿವಾನಂದ ಲಾಳಸಿಂಗಿ ಸೇರಿದಂತೆ ಹಲವು ಜನ ಮುಖಂಡರು ಇದ್ದರು.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *