ಬೆಳಗಾವಿ-ರಾಜಕೀಯ ಕಿತ್ತಾಟ ಅಧಿಕಾರ ಪಡೆಯಲು ನಡೆದಿರುವ ಪರಾಟ ರಾಜಕೀಯ ತಂತ್ರ ಮಂತ್ರ ಗಳಿಂದ ದೂರ ಉಳಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಈಗ ನೋ..ಪಾಲಿಟಿಕ್ಸ ಓನ್ಲೀ ರಿಲ್ಯಾಕ್ಸ ಎನ್ನುವ ಮೂಡ್ನಲ್ಲಿದ್ದಾರೆ
ಮಹಾರಾಷ್ಟ್ರದ ರಾಯಗಡ ಗೆ ತೆರಳಿದ ಸತೀಶ ಸಾಹುಕಾರ್ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ತಿಳಿದುಕೊಂಡು ಬುದ್ಧ.ಬಸವ.ಅಂಬೇಡ್ಕರ್ ಜೊತೆ ಶಿವಾಜಿ ಮಹಾರಾಜರನ್ನು ಸೇರಿಸಿ ಮಾನವ ಬಂಧುತ್ವವವನ್ನು ಇಮ್ಮಡಿ ಗೊಳಿಸುವ ಪ್ರಯತ್ನದಲ್ಲಿದ್ದಾರೆ
ರಾಯಗಡದಲ್ಲಿರುವ ಶಿವಾಜಿ ಮಹಾರಾಜರ ವಿಶಾಲ ಕೋಟೆಯಲ್ಲಿ ಏನೆಲ್ಲ ಇವೆ ಶಿವಾಜಿ ಮಹಾರಾಜರ ಸಾಮ್ರಾಜ್ಯ ಹೇಗಿತ್ತು ಅವರ ಸೈನ್ಯದ ಸ್ವರೂಪ ಹೇಗಿತ್ತು ಅನ್ನೋದರ ಬಗ್ಗೆ ಗೈಡ್ ನಿಂದ ಮಾಹಿತಿ ಪಡೆದು ಶಿವಾಜಿ ಮಹಾರಾಜರ ಇತಿಹಾಸವನ್ನು ತಿಳಿದುಕೊಂಡರು
ರಾಯಗಡದ ವಿಶಾಲ ಕೋಟೆಯಲ್ಲಿ ಸುತ್ತಾಡಿದ ಸತೀಶ ಸಾಹುಕಾರ್ ಸಕತ್ತ ಎಂಜಾಯ್ ಮಾಡಿದರು ಎನ್ನಲಾಗಿದೆ ಸತೀಶ ಅವರಿಗೆ ಅವರ ಆಪ್ತ ಮಿತ್ರರು ಸಾಥ್ ನೀಡಿದರು ಸುಮಾರು ಎರಡು ಘಂಟೆ ಕಾಲ ಕೋಟೆಯ ವಿಹಾರ ನಡೆಯಿತು ಎಂದು ತಿಳಿದು ಬಂದಿದೆ
ಸತೀಶ ಜಾರಕಿಹೊಳಿ ಅವರ ಮುಂದಿನ ನಡೆ ಏನು? ಸತೀಶ ನಡೆ ಯಾವ ಕಡೆ ? ಎಂದು ಅವರ ಅಭಿಮಾನಿಗಳು ಚಿಂತೆಯಲ್ಲಿದ್ದಾರೆ ಕೆಲವರು ಜೆಡಿಎಸ್ ಸೇರುತ್ತಾರೆ ಎಂದು ಲೆಕ್ಕ ಹಾಕಿದರೆ ಇನ್ನು ಕೆಲವರು BSP ಆನೆಯನ್ನು ಕರ್ನಾಟಕಕ್ಕೆ ತಂದು ಕಾಂಗ್ರೆಸ್ ಗೆ ಪಾಠ ಕಲಿಸುತ್ತಾರೆ ಎಂದು ತರ್ಕಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ