Breaking News

ಮೌಢ್ಯದ ವಿರುದ್ಧ ಸ್ಮಶಾನದಲ್ಲಿ ಸೆಡ್ಡು..ಹಗಲು ಜಾಗೃತಿ, ರಾತ್ರಿ ವಾಸ್ತವ್ಯ

ಬೆಳಗಾವಿ:
ಡಾ.ಬಿ.ಆರ್. ಅಂಬೇಡ್ಕರವರ ಮಹಾಪರಿನಿರ್ವಾಣ ದಿನ ಪ್ರಯುಕ್ತ ಮೂಢನಂಬಿಕೆ ವಿರೋಧಿಸಿ  ಡಿ.6ಆ ರಂದು ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಪರಿವರ್ತನಾ ದಿನಾಚರಣೆಯನ್ನು ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ರುವಾರಿ ಸತೀಶ್ ಜಾರಕಿಹೊಳಿ ಹೇಳಿದರು.
ಪ್ತರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾಗೃತಿ ಜಾಥಾಗಳು ಬೀದರ, ಕೋಲಾರ, ಚಾಮರಾಜನಗರ ಮತ್ತು ಬೆಳಗಾವಿ ಜಿಲ್ಲೆಯ ಅಥಣಿಯಿಂದ ಪ್ರಾರಂಭಗೊಂಡು  ರಾಜ್ಯದ 3 ಜಿಲ್ಲೆಗಳು, 100 ತಾಲೂಕುಗಳು, 400 ಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ಹಾಯ್ದು ವೈಚಾರಿಕ ಹಾಡುಗಳು, ಭಾಷಣ ಮತ್ತು ಕರಪತ್ರಗಳ ಮೂಲಕ ಜನಸಮುದಾಯದಲ್ಲಿ ಜಾಗೃತಿ ಮೂಡಿಸುತ್ತ ಒಟ್ಟಾರೆ 6 ಸಾವಿರ ಕಿಲೋ ಮಿಟರ್ ನಷ್ಟು ಕ್ರಮಿಸಿ ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಡಿ.6 ರಂದು ಬೆಳಿಗ್ಗೆ 10 ಗಂಟೆಗೆ ಮಾನವ ಬಂಧುತ್ವ ವೇದಿಕೆ ಕಲಾ ತಂಡದಿಂದ ಕ್ರಾಂತಿಗೀತೆಗೆಳು ಹಾಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಗದಗ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದಾರ್ಯ ಸಿದ್ಧಲಿಂದ ಸ್ವಾಮೀಜಿಗಳು ಕಾರ್ಯಕ್ರಮ ಉದ್ಘಾಟಿಸುವರು. ಕಲಬುರ್ಗಿಯ ಮರುಳಶಂಕರ ದೇವರ ಪೀಠದ ಸಿದ್ಧಬಸವ ಕಬೀರ ಮಹಾಸ್ವಾಮೀಜಿಗಳು, ನಿಚ್ಚನಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಬೌದ್ಧ ದರ್ಮದ ಗುರುಗಳಾದ ಮಾತಾ ಮೈತ್ರಿ ಬಂತೆಜಿ,  ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಚಿರಂತೇಶ್ವರ ಮಠದ ಬಸವ ದೇವರು, ಮುಸ್ಲಿಂ ವಿದ್ವಾಂಸ ಮೌಲಾನ ಬಶೀರ ಅಹ್ಮದ ಅಮಲಜರಿ  ಸಾನಿಧ್ಯವಹಿಸುವರು.  ಅಧ್ಯಕ್ಷತೆ ಶಾಸಕ ಸತೀಶ್ ಜಾರಕಿಹೊಳಿ ವಹಿಸುವರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ ಅಮೀನ್ ಮಟ್ಟು, ಮಹಾರಾಷ್ಟ್ರದ ಪ್ರವೀಣ ಗಾಯಕವಾಡ, ಪ್ರೊ.ರವಿವರ್ಮ ಕುಮಾರ, ಡಾ.ಹಮಿದಾ ದಾಬೋಲಕರ, ವಿ.ಗೀತಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೂಡನಂಬಿಕೆ ವಿರೋಧಿಸಿ ಕಾರ್ಯಕ್ರಮ ಹಮ್ಮಿಕೊಳಲಾಗಿದೆ. ಈ ಕಾರ್ಯಕ್ರಮವನ್ನು ನೇರವಾಗಿ ತಿತಿತಿ.mಚಿಟಿಚಿvಚಿbಚಿಟಿಜhuಣಚಿvಚಿ.iಟಿ ಅಂತರ್ಜಾಲದ ಮೂಲಕ ವೀಕ್ಷಿಸಬಹುದು. ಸ್ಮಶಾಸನದಲ್ಲಿ ವಾಸ್ತವ್ಯ ಮಾಡಲಾಗುವುದು. ರಾಜ್ಯದ ಜನತೆ ಇಂಥಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದರು.
ಕಳೆದ ಮೂರು ವರ್ಷಗಳಿಮದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯವಷ್ಟೇ ಅಲ್ಲ ದೇಶದ ತುಂಬ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕಾರ್ಯಕ್ರಮದ ಅಂಗವಾಗಿ ಜನಜಾಗೃತಿ ಜಾಥಾಗಳನ್ನು ಹಮ್ಮಿಕೊಂಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತೆರಳಿ ಜಾಗೃತಿ ಮೂಡಿಸಿಕೊಂಡು ಡಿ.5 ರಂದು ಬೆಳಗಾವಿಗೆ ಆಗಮಿಸಲಿದೆ.  ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಡಾ.ಬಿ.ಆರ್.ಅಂಬೇಡ್ಕರ ಅವರ ಅಪರೂಪದ ಛಾಯಾ ಚಿತ್ರಗಳ ಪ್ರದರ್ಶನ, ಮೌಡ್ಯ ವಿರೋಧಿ ಬಿತ್ತಿ ಪತ್ರಗಳ ಪ್ರದರ್ಶನ, ಡಾ.ಎಲ್. ಹನುಮಂತಯ್ಯ ಅವರು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ ಕೃತಿ ಆಧಾರಿತ ನಾಟಕ ಪೂನಾ ಒಪ್ಪಂದ ವನ್ನು ಧಾರವಾಡದ ಗಣಕರಂಗದ ಕಲಾವಿದರು ನಡೆಸಿಕೊಡಲಿದ್ದಾರೆ. ಅಂದು ನಾಡಿನ ಪ್ರಗತಿಪರ ಚಿಂತಕರು, ವಿಚರವಾದಿಗಳು, ಸಮಾಜವಿಜ್ಞಾನಿಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳ ಮೇಲೆ ಬೆಳನ್ನು ಸಮಾಜಕ್ಕೆ ನೀಡಲಿದ್ದಾರೆ ಎಂದು ತಿಳಿಸಿದರು.
ಅಂಬೇಡ್ಕರ ಅವರು ಮೌಡ್ಯದ ವಿರುದ್ಧ ಹೋರಾಡಿದ್ದಾರೆ. ಅವರ ಭಾವಚಿತ್ರ ಬಳಸಿಕೊಂಡರೆ ತಪ್ಪು ಎಂದು ವಾದಿಸುತ್ತಿರುವ ಶಂಕರ ಮುನವಳ್ಳಿ ಅವರಿಗೆ ಅಂಬೇಡ್ಕರ ಅವರ ಇತಿಹಾಸದ ಬಗ್ಗೆ ಗೊತ್ತಿಲ್ಲ. ಇತಿಹಾಸ ತಿಳಿದುಕೊಳ್ಳಬೇಕಾದರೆ ಮುಂಬೈನ ಚೈತನ್ಯ ಸ್ಮಶಾನ ಭೂಮಿಯಲ್ಲೂ ಅಂಬೇಡ್ಕರ ಭಾವಚಿತ್ರ ಬಳಸುತ್ತಾರೆ. ಅಲ್ಲಿಗೆ ಹೋಗಿ ಬರಲಿ. ಅವರನ್ನು ಕೇಳಿ ನಾವು ಕಲಿಯಬೇಕಿಲ್ಲ. ನಮಗೆ ಇತಿಹಾಸ ಗೊತ್ತಿದೆ.  ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ನಡೆಸುತ್ತೇವೆ.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಮಾನವ ಬಂಧುತ್ವ ವೇದಿಕೆ ಸಂಚಲನಾ ಸಮಿತಿ ಸದಸ್ಯರಾದ ವಿಲ್ಫೆಡ್ ಡಿಸೋಜ, ರವಿ ನಾಯ್ಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *