ಬೆಳಗಾವಿ-ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಅ.೨೩ ರಂದು ಬೃಹತ್ ೧ ಲಕ್ಷ ಎಸ್ ಸಿ ಎಸ್ ಟಿ ಜನರ ಸಮಾವೇಶ.ನಡೆಸುವದರ ಜೊತೆಗೆ
ನ.೨೭ ಬೆಂಗಳೂರಿನಲ್ಲಿ ಓಬಿಸಿ ಜನಾಂಗದ ಸಮಾವೇಶ.ನಡೆಸಲಾಗುವದು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ
ಈ ಎರಡೂ ಸಮಾವೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಾರೆ ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಬೈಟಕ್ ನಲ್ಲಿ ಮಾತನಾಡಿದ ಅವರು ೧೯೨೪ ರಲ್ಲಿ ಗಾಂಧೀಜಿ ಕಾಲಿಟ್ಟ ನಾಡು ಬೆಳಗಾವಿ. ಎಪ್ರೀಲ್ ೧೪ ರಿಂದ ಪಕ್ಷದ ಬಲವರ್ಧನೆ ನಡೆದಿದೆ.
ಕಾವೇರಿ ವಿವಾದ ಸರಕಾರದ ಬೇಜವಾಬ್ದಾರಿಗೆ ಕಾರಣ. ನಮ್ಮ ಸಲಹೆಯನ್ನು ಸರಕಾರ ಪರಿಗಣಿಸಲಿಲ್ಲ. ಸುಪ್ರೀಂಕೋಟ್ಟನಲ್ಲಿ ಸರಿಯಾದ ವಾದ ಮಂಡನೆಯಾಗಲಿಲ್ಲ. ಸದಾನಂದಗೌಡ, ಜಿಗಜಿಣಗಿ, ಯಡಿಯೂರಪ್ಪ ಮತ್ತಿತರರು ಕೇಂದ್ರ ಸಚಿವೆ ಉಮಾಭಾರತಿ ಅವರಿಗೆ ಕಾವೇರಿ ಸಂಕಷ್ಟ ತಿಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾವೇರಿ ನಿರ್ವಹಣಾ ಮಂಡಳಿ ರಚನೆ ಬೇಡವೆಂದು ರೋಹಟಗಿ ಮೂಲಕ ಸುಪ್ರೀಂ ಕೋರ್ಟ್ ಗೆ ತಿಳಿಸಿರುವುದು ಗೊತ್ತಾಗಿದೆ. ಎಂದರು
ದಕ್ಷಿಣ ಭಾರತದಲ್ಲಿ ಕರ್ನಾಟಕ ವನ್ನು ಪಕ್ಷದ ಮಾದರಿ ಪ್ರದೇಶವಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಭಿವೃದ್ಧಿ ಕಹಳೆ ಊದಲಿದೆ. ಜನತೆ ಉತ್ತಮ ಆಡಳಿತಕ್ಕಾಗಿ ಬಿಜೆಪಿಗೆ ಆಶೀರ್ವಾದ ಮಾಡಲಿದ್ದು ಅದರ ನೇತೃತ್ವ ಯಡಿಯೂರಪ್ಪಾಜಿ ವಹಿಸಲಿದ್ದಾರೆ. ಸಮರ್ಥ ನಾಯಕರ ದಂಡು ಕರ್ನಾಟಕದಲ್ಲಿದೆ.ಬಿಜೆಪಿಯ ಕೆಂದ್ರ ರಾಜ್ಯಗಳ ಜನಪರ ಯೋಜನೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ವಿಡಂಬಣೆ ಮಾಡಿತ್ತಲೇ ಬಂದಿದೆ. ಜನಹಿತದ ಬಗ್ಗೆ ಮಾಡಿದ ಎಲ್ಲ ವಚನಗಳನ್ನು ಬಿಜೆಪಿ ಉಳಿದುಕೊಳ್ಳುತ್ತದೆ. ಎಂದು ಯಡಿಯೂರಪ್ಪ ರಾಜ್ಯಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು