ಪ್ರವಾಹ ಎದುರಿಸಲು ಬೆಳಗಾವಿಗೆ ಬಂದಿರುವ ಬೋಟು ಲೈಫ್ ಜಾಕೇಟು….!!
ಬೆಳಗಾವಿ- ಪಕ್ಕದ ಮಹಾರಾಷ್ಟ್ರದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಇತ್ತ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆ ಬೆಳಗಾವಿ ಜಿಲ್ಲೆಯಲ್ಲಿ ಅವಾಂತರ ಸೃಷ್ಠಿಸಿದೆ.ಮಹಾಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಸೇರಿದಂತೆ,ಉಳಿದ ಎಲ್ಲ ನದಿಗಳು,ಹಳ್ಳಗಳು,ನಾಲೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಎದುರಾದರೆ,ಬೋಟು,ಜತೆಗೆ ಲೈಫ್ ಜಾಕೇಟು ಸೇರಿಸಂತೆ ಎಲ್ಲ ಸರಂಜಾಮುಗಳೊಂದಿಗೆ SDRF ತಂಡ ಸಜ್ಜಾಗಿದೆ.ಇಂದು SDRF ಬೆಳಗಾವಿ ಘಟಕಕ್ಕೆ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಭೇಟಿ ನೀಡಿ SDRF ಅಧಿಕಾರಿಗಳು ಹಾಗು ಸಿಬ್ಬಂದಿಯವರೊಂದಿಗೆ ಸಭೆ ನಡೆಸಿದ್ದಾರೆ.
SDRF ತಂಡ ಉಪಯೋಗಿಸುವ ಪರಿಕರಗಳು & ಅವರ ಕಾರ್ಯವ್ಯಾಪ್ತಿ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳಗಾವಿ ಎಸ್ ಪಿ ಸಂಜೀವ ಪಾಟೀಲ, ಪ್ರಕೃತಿ ವಿಕೋಪ ಕಾಲಕ್ಕೆ ಜಿಲ್ಲಾ ಪೊಲೀಸ್ & SDRP ಸಮನ್ವಯದ ಕುರಿತು ಚರ್ಚಿ ನಡೆಸಿದ್ರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ



